ಅಫೀಮು ಮಾರಾಟ : ಮಹಾರಾಷ್ಟ್ರ ಮೂಲದ ಆರೋಪಿ ದಾವಣಗೆರೆಯಲ್ಲಿ ಬಂಧನ

 ದಾವಣಗೆರೆ:ಇಲ್ಲಿನ ರಾಷ್ಟೀಯ ಹೆದ್ದಾರಿ- 48 ರಲ್ಲಿ ಶಾಮನೂರು ಸಮೀಪದ ಗ್ರೀನ್ ಪಾಯಿಂಟ್ ಡಾಬಾದ ಬಳಿ ಶೆಡ್ ಒಂದರಲ್ಲಿ ಸಂಗ್ರಹಿಸಿಟ್ಟಿದ್ದ ಅಫೀಮು ಹಾಗೂ ಮದ್ಯವನ್ನು ವಶಪಡಿಸಿಕೊಂಡಿರುವ ಅಬಕಾರಿ ಪೊಲೀಸರು ಈ ಸಂಬಂಧ ಒಬ್ಬನನ್ನು ಬಂಧಿಸಿದ್ದಾರೆ.

  ಮಹಾರಾಷ್ಟ್ರ ಮೂಲದ ಅವತಾರ್ ಸಿಂಗ್ ಬಂಧಿತ ಮಲ್ಲಿಕಾರ್ಜುನ್ ಇಂಜಿನಿಯರಿಂಗ್ ವರ್ಕ್ಸ್  ಪಕ್ಕದ ಸಿಮೆಂಟ್ ಶೀಟ್ ಹೊದಿಕೆಯ ಶೆಡ್ ಗೆ ದಾಳಿ ಮಡಿದ ಪೊಲೀಸರು ಆರೋಪಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಟ್ಟಿದ್ದ 18 ,320 ಒಪಿಎಂ  ಪಾಪಿಸ್ಟ್ರ ಪೌಡರ್ , 3 ,020 ಕೆಜಿ ಒಪಿಎಂ  ಪಾಪಿಸ್ಟ್ರ ಪೌಡರ್ ಹಾಗೂ 7  ,290 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯ  ರೂ.53 ,140 ಆಗಿರುತ್ತದೆ.   'ಅವತಾರ್ ಸಿಂಗ್ ಹೆದ್ದಾರಿ ಬಳಿ ಶೆಡ್ ನಲ್ಲಿ ಹೆದ್ದಾರಿಯಲ್ಲಿ ಬರುವವರಿಗೆ ಮಾರಾಟ  ಮಾಡುತ್ತಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೊಸಪೇಟೆ ವಿಭಾಗದ ಅಬಕಾರಿ  ಜಂಟಿ ಆಯುಕ್ತ ನಿರ್ದೇಶನದ ಮೇರೆಗೆ, ಅಬಕಾರಿ ಉಪ ಆಯುಕ್ತ ಬಿ.ಶಿವಪ್ರಸಾದ್ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕ  ರವಿ ಎಂ. ಮರಿಗೌಡ್ರ , ಅಬಕಾರಿ ನಿರೀಕ್ಷಕರಾದ ರಶ್ಮಿ ಕೆ.ಆರ್, ಉಪ ನಿರೀಕ್ಷಕ ಮಂಜಪ್ಪ ಎಂ. ಅವರು ದಾಳಿ ನಡೆಸಿದರು.

Post a Comment

Previous Post Next Post