ಉಗ್ರ ಸಂಘಟನೆಯ ಜೊತೆ ನಂಟು:ಶಂಕಿತ ಆರೋಪಿ ಆರಿಫ್ ನನ್ನು ವಶಕ್ಕೆ ಪಡೆದ ಎನ್ಐಎ.

ಬೆಂಗಳೂರು: ಉಗ್ರ ಸಂಘಟನೆಯ ಜೊತೆ ನಂಟು ಹೊಂದಿದ್ದ ಆರೋಪದಡಿ ಆರಿಫ್ ನನ್ನು ರಾಷ್ಟೀಯ ತನಿಖಾ ದಳ(ಎನ್ಐಎ ) ಅಧಿಕಾರಿಗಳು ನಗರದ ಧಣಿಸಂದ್ರದಲ್ಲಿ ವಶಕ್ಕೆ ಪಡೆದಿದ್ದಾರೆ.

  'ನಗರದ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರಿಫ್ ಕಳೆದ 2 ವರ್ಷಗಳಿಂದ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ. ಸಿರಿಯಾಕ್ಕೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ.' ಎಂದು ಎನ್ಐಎ ಮೂಲಗಳು ತಿಳಿಸಿವೆ.

ಆರಿಫ್

    'ಆರಿಫ್ ಮನೆ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ . ಲ್ಯಾಪ್ ಟಾಪ್ ಹಾಗೂ ಇತರೇ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.' ಸಾಮಾಜಿಕ ಮಾಧ್ಯಮ ಹಾಗೂ ಜಾಲತಾಣ ಮೂಲಕ ಉಗ್ರ ಸಂಘಟನೆಯ ಸದಸ್ಯರ ಜೊತೆ ಮಾತುಕತೆ  ನಡೆಸುತ್ತಿದ್ದ ಈತನ ವಿಚಾರಣೆ ಬಳಿಕವೇ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ'. ಎಂದು  ಎನ್ಐಎ ಮೂಲಗಳು ತಿಳಿಸಿವೆ. 

Post a Comment

Previous Post Next Post