ಅಪ್ರಾಪ್ತ ಬಾಲಕನಿಂದ ಸರಣಿ ಅಪಘಾತ! ಪ್ರಶ್ನಿಸಿದವರ ಮೇಲೆ ಹಲ್ಲೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು.

 ಶಿವಮೊಗ್ಗ ನಗರದ ಇಲಿಯಾಜ್ ನಗರದ ಬಡಾವಣೆಯೊಂದರಲ್ಲಿ, ಅಪ್ರಾಪ್ತ ಬಾಲಕನೊಬ್ಬ ಸರಣಿ ಎಸಗಿದ್ದು, ಪ್ರಶ್ನಿಸಿದ್ದಕ್ಕೆ ಯುವಕರ ಗುಂಪೊಂದು , ವಯಸ್ಸಾದವರ ಮನೆಗಳಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.ಅಲ್ಲದೆ ಸಾರ್ವಜನಿಕವಾಗಿ ಬ್ಯಾಟ್ ಗಳನ್ನು ಬೀಸಿ ಗುಂಪು ಆತಂಕ ಸೃಷ್ಟಿಸುವ ಕೆಲಸ ಮಾಡಿದೆ.ಈ ಘಟನೆ ಸ್ಥಳೀಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳೀಯರು ಪೊಲೀಸರಿಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಘಟನೆ ನಡೆದ ಸ್ಥಳ

   ಇಲ್ಲಿನ ಬಡಾವಣೆಯೊಂದರಲ್ಲಿ ಅಪ್ರಾಪ್ತ ಬಾಲಕನ ಕೈಗೆ ವಾಹನವೊಂದನ್ನು ಓಡಿಸಲು ಅವರ ಮನೆಯವರು ಅವಕಾಶ ಮಾಡಿಕೊಟ್ಟಿದ್ದಾರೆ.ಎನ್ನಲಾಗಿದೆ, ಆತ ಬ್ಯಾಲೆನ್ಸ್ ಸಿಗದೇ ಅಲ್ಲಿಯೇ ಇದ್ದ ವಾಹನಗಳಿಗೆ ಡಿಕ್ಕಿ ಹೊಡೆಸಿದ್ದಾನೆ ಎಂಬುದು ಸ್ಥಳೀಯರ ಆರೋಪ ಇದೆ ಕಾರಣಕ್ಕೆ ಅಲ್ಲಿದ್ದ ಮನೆಯ ಮಾಲೀಕರೊಬ್ಬರು ಬೈಕ್ ನ ಬೀಗ ಕಸಿದುಕೊಂಡು ನಿನ್ನ ತಂದೆ ತಾಯಿಯನ್ನು ಕರೆದುಕೊಂಡು ಬಾ ಎಂದು ತಿಳಿಸಿದ್ದರಂತೆ ಆದರೆ ಬಾಲಕನ ಬೆಂಬಲಕ್ಕೆ ಬಂದ ಗುಂಪು ಮನೆ ಮಾಲೀಕ ಹಾಗು ಮನೆಯಲ್ಲಿದ್ದ ಮಹಿಳೆಯರ ಮೇಲೂ ಹಲ್ಲೆ ನಡೆಸಿದೆ ಎಂದು ದೂರಲಾಗಿದೆ. ಈ ಘಟನೆಯ ಚಿತ್ರಣ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

  ಇನ್ನು ಕ್ಯಾಮೆರಾದಲ್ಲಿ ಯುವಕರು ಬ್ಯಾಟ್ ಬೀಸಿ ಆತಂಕ ಮೂಡಿಸುತ್ತಿರುವ ದೃಶ್ಯಗಳು ಕಂಡುಬಂದಿದ್ದು, ಘಟನೆಯಲ್ಲಿ ಹಲ್ಲೆಗೊಳಗಾದವರನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ದೂರು ಮತ್ತು ಪ್ರತಿದೂರು ಕೂಡ ದಾಖಲಿಸುವ ಪ್ರಯತ್ನಗಳು ನಡೆಯುತ್ತಿವೆ ಸದ್ಯ ಶಿವಮೊಗ್ಗ ಪೊಲೀಸರು ಘಟನೆಯನ್ನು ಹೇಗೆ ತನಿಖೆಗೆ ಒಳಪಡಿಸುತ್ತಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ

Post a Comment

Previous Post Next Post