ಶಿರಾಳಕೊಪ್ಪ: ಕರ್ನಾಟಕ ರಾಜ್ಯ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023 ರ ಹಿನ್ನಲೆ ಶಿರಾಳಕೊಪ್ಪ ಟೌನ್ ನಲ್ಲಿ ರೂಟ್ ಮಾರ್ಚ್.

  ಕರ್ನಾಟಕ ರಾಜ್ಯ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023 ರ ಹಿನ್ನಲೆಯಲ್ಲಿ ಈ ದಿನ ದಿನಾಂಕ 07-04-2023 ರಂದು ಸಂಜೆ ಶ್ರೀ ಶಿವಾನಂದ ಮಾದರಕಂಡಿ ಪೊಲೀಸ್ ಉಪಾಧೀಕ್ಷಕರು, ಶಿಕಾರಿಪುರ ಉಪ ವಿಭಾಗ ಮತ್ತು ಶ್ರೀ ಓಂ ಪ್ರಕಾಶ್, ಅಸ್ಸಿಸ್ಟೆಂಟ್ ಕಮಾಡೆಂಟ್, ಸಿಆರ್. ಪಿ.ಎಫ್ ರವರ ನೇತೃತ್ವದಲ್ಲಿ ಶಿರಾಳಕೊಪ್ಪ ಟೌನ್ ನಲ್ಲಿ ರೂಟ್ ಮಾರ್ಚ್ (ಪಥಸಂವಲನವನ್ನು) ಹಮ್ಮಿಕೊಂಡಿದ್ದು, ಸದರಿ ಪಥಸಂಚಲನವನ್ನು ಶಿರಾಳಕೊಪ್ಪ ಪೊಲೀಸ್ ಠಾಣೆಯಿಂದ ಪ್ರಾರಂಭಿಸಿ ಶಿರಾಳಕೊಪ್ಪ ಬಸ್ ಸ್ಟಾಂಡ್ ಮಾರ್ಗವಾಗಿ ಹೋಗಿ ಆನವಟ್ಟಿ ಸರ್ಕಲ್, ಹಳೂರು ಸರ್ಕಲ್, ಜಾಮಿಯಾ ಮಸೀದಿ, ಕಾನ್ ಕೇರಿ, ಪಂಪ್ ಹೌಸ್, ಭೋವಿ ಕಾಲೋನಿ, ಹೆಚ್. ಕೆ ರಸ್ತೆ ಮೂಲಕ ಶಿರಾಳಕೊಪ್ಪ ಪೊಲೀಸ್ ಠಾಣೆಗೆ ಬಂದು ಮುಕ್ತಾಯ ಮಾಡಲಾಗಿರುತ್ತದೆ.  


 ಸದರಿ ರೂಟ್ ಮಾರ್ಚ್ ನಲ್ಲಿ ಶ್ರೀ ರುದ್ರೇಶ್, ಪೊಲೀಸ್ ವೃತ್ತ ನಿರೀಕ್ಷಕರು ಶಿಕಾರಿಪುರ ವೃತ್ತ, ಶ್ರೀ ಮಂಜುನಾಥ್ ಕುರಿ, ಪೊಲೀಸ್ ಉಪ ನಿರೀಕ್ಷಕರು, ಶಿರಾಳಕೊಪ್ಪ ಪೊಲೀಸ್ ಠಾಣೆ, ಸಿಆರ್ ಪಿಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ) ಯ ಅಧಿಕಾರಿ ಮತ್ತು ಸಿಬ್ಬಂಧಿಗಳು, ಶಿರಾಳಕೊಪ್ಪದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳು ಭಾಗವಹಿಸಿದ್ದರು.


Post a Comment

Previous Post Next Post