8.50 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ: 5 ಮಂದಿ ವಿದೇಶಿ ಪ್ರಜೆಗಳ ಬಂಧನ

 ಬೆಂಗಳೂರು ಪೊಲೀಸರು ಇಂದು (ಏ.10)ವಿದೇಶಿ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದು, ಒಟ್ಟು 8.50 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ನ್ನು ವಶಕ್ಕೆ ಪಡೆದಿದ್ದಾರೆ.

                                                                          ಡ್ರಗ್ಸ್

By : Rekha.M
Online Desk

ಬೆಂಗಳೂರು: ಬೆಂಗಳೂರು ಪೊಲೀಸರು ಇಂದು (ಏ.10)ವಿದೇಶಿ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದು, ಒಟ್ಟು 8.50 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ನ್ನು ವಶಕ್ಕೆ ಪಡೆದಿದ್ದಾರೆ.
 
ದಕ್ಷಿಣ ವಿಭಾಗದ ವಿವಿ ಪುರಂ ಹಾಗೂ ಜಯನಗರ  ಪೊಲೀಸರು ನಡೆಸಿದ ಕಾರ್ಯಾಚರಣೆಯ ಪ್ರಕರಣದಲ್ಲಿ ಒಟ್ಟು 5 ಮಂದಿ ನೈಜೀರಿಯಾ ಪ್ರಜೆಗಳು ಬಂಧನಕ್ಕೊಳಗಾಗಿದ್ದಾರೆ. 

ಲಾರೆನ್ಸ್ ಇಜೆನ್‍ವೋಕ್ ಅಲಿಯಾಸ್ ಪೀಟರ್, ಚುಕ್ ವುನೆಜಿಂ ಥ್ಯಾಂಕ್ಗೋಡ್ ಒಂಯೆಕಾಚಿ ಅಲಿಯಾಸ್ ಬ್ರೈಟ್ ಬಂಧನಕ್ಕೆ ಒಳಗಾಗಿರುವ ವಿದೇಶಿ ಪ್ರಜೆಗಳಾಗಿದ್ದು 7.32 ಕೋಟಿ ರೂ. ಮೌಲ್ಯದ 1 ಕೆಜಿ 850 ಗ್ರಾಂ ಎಂಡಿಎಂಎ, 1 ಕೆಜಿ 150 ಗ್ರಾಂ ಬ್ರೌನ್‍ಶುಗರ್, 310 ಗ್ರಾಂ ಕೊಕೈನ್‍ನನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವೀಸಾ ಅವಧಿ 3 ವರ್ಷಗಳ ಹಿಂದೆಯೇ ಮುಕ್ತಾಯಗೊಂಡಿತ್ತಾದರೂ ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರು. 

ಇನ್ನು ಜಯನಗರ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ  ಹಸ್ಲೆ, ಫ್ರಾಂಕ್ ಅಲಿಯಾಸ್ ಸಂಡೇ ಮತ್ತು ಇಮ್ಯಾನುಯೆಲ್ ನಾಜಿ ಎಂಬ 3 ನೈಜೀರಿಯಾ ಪ್ರಜೆಗಳನ್ನು ಬಂಧಿಸಲಾಗಿದ್ದು, 1.20 ಕೋಟಿ ರೂ. ಮೌಲ್ಯದ 1 ಕೆಜಿ 152 ಗ್ರಾಂ ತೂಕದ ಎಂಡಿಎಂಎ ಹಾಗೂ 40 ಗ್ರಾಂ ಕೊಕೈನ್ ಎಂಬ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ದಕ್ಷಿಣ ವಿಭಾಗದ ಉಪಪೊಲೀಸ್ ಆಯುಕ್ತ ಕೃಷ್ಣಕಾಂತ್ ಮಾರ್ಗದರ್ಶನದಲ್ಲಿ ಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ್ ನೇತೃತ್ವದಲ್ಲಿ ವಿವಿ ಪುರಂ ಠಾಣೆ ಇನ್ಸ್‍ಪೆಕ್ಟರ್ ಮಿರ್ಜಾ ಆಲಿ ರಜಾ ಮತ್ತು ಜಯನಗರ ಠಾಣೆ ಪೊಲೀಸ್ ಇನ್ಸ್‍ಸ್ಪೆಕ್ಟರ್ ಮಂಜುನಾಥ್ ಹಾಗೂ ಸಿಬ್ಬಂದಿ ಇದ್ದ ತಂಡ ಕಾರ್ಯಾಚರಣೆ ಕೈಗೊಂಡಿತ್ತು.

ಪೊಲೀಸರ ಕಾರ್ಯವೈಖರಿಯನ್ನು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ಹಾಗೂ ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಶ್ಲಾಘಿಸಿ ನಗದು ಬಹುಮಾನವನ್ನು ಘೋಷಿಸಿದ್ದಾರೆ.Post a Comment

Previous Post Next Post