ಶಿವಮೊಗ್ಗ: ಗಾಂಧಿಬಜಾರ್ ಎಲೆ ರೇವಣ್ಣಕೇರಿಯ ಹತ್ತಿರ ವ್ಯಕ್ತಿಯೊಬ್ಬ ಅನುಮಾನಸ್ಪದವಾಗಿ ಬಂಗಾರದ ಆಭರಣದ ಜೊತೆ ಒಡಾಟ: 5,83,00,000/- ರೂ ಗಳ 9 ಕೆ.ಜಿ. ದಾಖಲಾತಿ ಇಲ್ಲದ ಬಂಗಾರದ ಆಭರಣ ವಶ.

 ದಿನಾಂಕ 11-04-2023 ರಂದು ಬೆಳಗ್ಗೆ ಶ್ರೀ ಶಿವಪ್ರಸಾದ್, ಪೊಲೀಸ್ ನಿರೀಕ್ಷಕರು, ಕೋಟೆ ಪೊಲೀಸ್ ಠಾಣೆ ರವರಿಗೆ, ಠಾಣಾ ವ್ಯಾಪ್ತಿಯ ಗಾಂಧಿ ಬಜಾರ್ ಎಲೆ ರೇವಣ್ಣಕೇರಿಯ ಹತ್ತಿರ ವ್ಯಕ್ತಿಯೊಬ್ಬನು ಅನುಮಾನಾಸ್ಪದವಾಗಿ ಬಂಗಾರದ ಆಭರಣಗಳನ್ನು ಅಂಗಡಿಗೆ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ, ಸದರಿ ವ್ಯಕ್ತಿಯನ್ನು ಹಿಂಭಾಲಿಸಿ ಹೋಗಿ ಆತನನ್ನು ತಪಾಸಣೆಗೊಳಪಡಿಸಿದ್ದು, ವ್ಯಕ್ತಿಯ ಬಳಿ ಬಂಗಾರ ಆಭರಣಗಳು ಇರುವುದು ಕಂಡು ಬಂದಿದ್ದು, ನಂತರ ಅಂಗಡಿಯನ್ನು ಪರಿಶೀಲಿಸಲಾಗಿ ಅಂದಾಜು ಮೌಲ್ಯ 5,83,00,000/- ರೂ ಗಳ 9 ಕೆ.ಜಿ 565 ಗ್ರಾಂ ತೂಕದ ಬಂಗಾರದ ಆಭರಣಗಳು ದೊರಕಿರುತ್ತವೆ. ಸದರಿ ಆಭರಣಗಳು ಹೊರಕಿರುತ್ತವೆ. ಸದರಿ ಆಭರಣಗಳಿಗೆ ಸಂಬಂಧಿಸಿದ ದಾಖಕಾತಿಗಳನ್ನು ಕೇಳಲಾಗಿ, ವ್ಯಕ್ತಿಯ ಯಾವುದೇ ದಾಖಲಾತಿಗಳನ್ನು ಹಾಜರ್ ಪಡಿಸಿರುವುದಿಲ್ಲ. ಆದ್ದರಿಂದ ಸದರಿ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು, ಮುಂದಿನ ಕ್ರಮಕ್ಕಾಗಿ ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿರುತ್ತದೆ.Post a Comment

Previous Post Next Post