ಬಂಜಾರರನ್ನು ಎಸ್‌ಸಿ ಪಟ್ಟಿಯಿಂದ ಕೈಬಿಡುವುದಿಲ್ಲ: ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಸ್ಪಷ್ಟನೆ

 ಬಂಜಾರರು ಮತ್ತು ಭೋವಿಗಳಂತಹ 'ಸ್ಪೃಶ್ಯ' ದಲಿತರ ವಿಭಾಗವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವ ಯಾವುದೇ ಪ್ರಸ್ತಾಪವಿಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ಎ ನಾರಾಯಣಸ್ವಾಮಿ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

                                                         ಸಚಿವ ನಾರಾಯಣ ಸ್ವಾಮಿ

By : Rekha.M

Online Desk

ಬೆಂಗಳೂರು: ಬಂಜಾರರು ಮತ್ತು ಭೋವಿಗಳಂತಹ 'ಸ್ಪೃಶ್ಯ' ದಲಿತರ ವಿಭಾಗವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವ ಯಾವುದೇ ಪ್ರಸ್ತಾಪವಿಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ಎ ನಾರಾಯಣಸ್ವಾಮಿ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 30 ವರ್ಷಗಳ ಹಿಂದೆಯೇ ಒಳಮೀಸಲಾತಿಗೆ ಆಗ್ರಹಿಸಿ ಹಲವು ದಲಿತ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸಿದ್ದವು. ‘ಕಾಂಗ್ರೆಸ್ ನೇತೃತ್ವದ ಹಿಂದಿನ ಸರಕಾರ ಯಾವಾಗಲೂ ಆಯೋಗದ ಮೇಲೆ ಆಯೋಗಗಳನ್ನು ರಚಿಸಿದ್ದರೇ ಹೊರತು, ಸಮಸ್ಯೆ ಬಗೆಹರಿಸಿರಲಿಲ್ಲ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರ ಆ ಸಮುದಾಯಗಳ ಆಶಯಗಳನ್ನು ನನಸಾಗುವಂತೆ ಎಂದು ಹೇಳಿದರು.
 
ಇದೇ ವೇಳೆ ಬಂಜಾರರನ್ನು ಎಸ್‌ಸಿ ಪಟ್ಟಿಯಿಂದ ಕೈಬಿಡುವುದಿಲ್ಲ ಎಂದು ಒತ್ತಿ ಹೇಳಿದ ಸಚಿವರು, ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯಿಂದಾಗಿ ಪಟ್ಟಿಯಲ್ಲಿರುವ ಜಾತಿಗಳು ಎಸ್‌ಸಿ ಮೀಸಲಾತಿಯ ಲಾಭವನ್ನು ಪಡೆದುಕೊಳ್ಳುತ್ತಿದೆ ಎಂಬ ನಂಬಿಕೆಯಿದೆ ಎಂದು ತಿಳಿಸಿದರು.

ಬಂಜಾರ, ಭೋವಿ ಮತ್ತು ಇತರ ಸ್ಪರ್ಶಸಕ್ತ ದಲಿತರು ತಮ್ಮ ಜಾತಿಗಳನ್ನು ಎಸ್‌ಸಿ ಪಟ್ಟಿಯಿಂದ ಕೈಬಿಡುತ್ತಾರೆ ಎಂಬ ಸುದ್ದಿಗಳು ಆಧಾರರಹಿತವಾಗಿದೆ. ರಾಜ್ಯ ಸರ್ಕಾರವು ನ್ಯಾಯಮೂರ್ತಿ ಸದಾಶಿವ ಆಯೋಗದ ಶಿಫಾರಸುಗಳನ್ನು ಅಂಗೀಕರಿಸಿಲ್ಲ, ಕೇವಲ ಒಳಮೀಸಲಾತಿ ನೀಡಲು ಉಲ್ಲೇಖದ ಅಂಶವಾಗಿ ಅಷ್ಟೇ ಶಿಫಾರಸನ್ನು ತೆಗೆದುಕೊಳ್ಳಲಾಗಿದೆ ಎಂದರು.

ಎಲ್ಲ ದಲಿತ ಸಮುದಾಯದವರು ಒಗ್ಗೂಡಿ ಇಂತಹ ದಿಟ್ಟ ಹೆಜ್ಜೆ ಇಟ್ಟ ಸಿಎಂ ಬೊಮ್ಮಾಯಿ ಅವರನ್ನು ಹುಬ್ಬಳ್ಳಿಯಲ್ಲಿ ಸನ್ಮಾನ ಸಮಾರಂಭ ಆಯೋಜಿಸುವ ಮೂಲಕ ಅಭಿನಂದಿಸಬೇಕು ಎಂದು ಇದೇ ವೇಳೆ ತಿಳಿಸಿದರು.

"ಎಸ್‌ಸಿ ಸಮುದಾಯಗಳ ಒಕ್ಕೂಟವು ಏಪ್ರಿಲ್ 6 ರಂದು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ನನ್ನ ಬಂಜಾರ ಸಹೋದರರು ಮತ್ತು ನಮ್ಮ ಸಮುದಾಯಗಳ ಇತರ ಜಾತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆೆ ಮನವಿ ಮಾಡುತ್ತೇನೆಂದು ಹೇಳಿದರು.

Post a Comment

Previous Post Next Post