ಮಡಿಕೇರಿ: ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರ ಕಾರಿನ ಮೇಲೆ ಗುಂಡಿನ ದಾಳಿ, ಪ್ರಾಣಾಪಾಯದಿಂದ ಪಾರು

 ವಿಶ್ವ ಹಿಂದೂ ಪರಿಷತ್‌ನ ಕೊಡಗು ಜಿಲ್ಲಾಧ್ಯಕ್ಷರ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

                                                                      ಸಂಗ್ರಹ ಚಿತ್ರ

By :Rekha.M
Online Desk

ಮಡಿಕೇರಿ: ವಿಶ್ವ ಹಿಂದೂ ಪರಿಷತ್‌ನ ಕೊಡಗು ಜಿಲ್ಲಾಧ್ಯಕ್ಷರ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಗುರುವಾರ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕೊಡಗು ಜಿಲ್ಲಾಧ್ಯಕ್ಷರು ಹಾಗೂ ವೃತ್ತಿಯಲ್ಲಿ ವಕೀಲರಾಗಿರುವ ಪಿ ಕೃಷ್ಣ ಮೂರ್ತಿಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.

ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ವೃತ್ತಿಯಲ್ಲಿ ವಕೀಲರಾದ ಪಿ ಕೃಷ್ಣ ಮೂರ್ತಿ ಅವರು 2021 ರಿಂದ ವಿಶ್ವ ಹಿಂದೂ ಪರಿಷತ್ತಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರಾಜ್ಯಾದ್ಯಂತ ಹಿಂದೂ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ಹಲವಾರು ಪ್ರಕರಣಗಳ ವಿರುದ್ಧ ಹೋರಾಡಲು ಕೃಷ್ಣಮೂರ್ತಿಯವರು ನ್ಯಾಯಾಲಯಕ್ಕೆ ಹಾಜರಾಗುತ್ತಿರುತ್ತಾರೆ.

ಬುಧವಾರ ಸಂಜೆ, ಪಿ ಕೃಷ್ಣ ಮೂರ್ತಿ ಅವರು ಮಡಿಕೇರಿಯಲ್ಲಿರುವ ತಮ್ಮ ಕಚೇರಿಯಿಂದ ಹೊರಟು ಸಂಜೆ 7 ಗಂಟೆ ಸುಮಾರಿಗೆ ಚೆಟ್ಟಳ್ಳಿಯಲ್ಲಿರುವ ತಮ್ಮ ಸಹೋದ್ಯೋಗಿ ಮತ್ತು ಸಹ ವಕೀಲ ಬಿ.ಯು.ಕರಿಯಪ್ಪ ಅವರನ್ನು ಭೇಟಿ ಮಾಡಿದ್ದು, ನಂತರ ಇಬ್ಬರೂ ಕುಶಾಲನಗರದ ಕಡೆಗೆ ಹೊರಟು ವಿಎಚ್‌ಪಿ ಕಾರ್ಯಕರ್ತ ವಿನು ಮತ್ತು ಭಜರಂಗದಳದ ಕಾರ್ಯಕರ್ತ ಶಿವಸ್ವಾಮಿ ಅವರನ್ನು ಭೇಟಿ ಮಾಡಿ ಸಂಘಟನೆಗಳ ಕಾರ್ಯವೈಖರಿ ಕುರಿತು ಚರ್ಚೆ ನಡೆಸಿದರು.

ನಾಲ್ವರು ಕುಶಾಲನಗರದ ಸ್ಥಳೀಯ ರೆಸ್ಟೋರೆಂಟ್‌ನಲ್ಲಿ ರಾತ್ರಿ ಊಟ ಮಾಡಿದ ನಂತರ ಕೃಷ್ಣಮೂರ್ತಿ ಮತ್ತು ಕರಿಯಪ್ಪ ಚೆಟ್ಟಳ್ಳಿಗೆ ತೆರಳಿದ್ದಾರೆ. ರಾತ್ರಿ 9.50ರ ಸುಮಾರಿಗೆ ಇಬ್ಬರೂ ಚೆಟ್ಟಳ್ಳಿ ತಲುಪಿದ್ದು, ಕೃಷ್ಣಮೂರ್ತಿ ಅವರು ಕಾರಿಯಪ್ಪ ಅವರನ್ನು ಪೊನ್ನತ್ಮೊಟ್ಟೆಗೆ ಡ್ರಾಪ್ ಮಾಡಿದ್ದಾರೆ. ಬಳಿಕ ಚೆಟ್ಟಳ್ಳಿ ರಸ್ತೆ ಮೂಲಕ ಮಡಿಕೇರಿ ಕಡೆಗೆ ಹೊರಟಿದ್ದಾರೆ.

“ರಾತ್ರಿ 11.05 ರ ಸುಮಾರಿಗೆ ಕಾರಿನಲ್ಲಿ ಹೋಗುತ್ತಿದ್ದ. ಅಬ್ಬ್ಯಾಲ ತಲುಪಿದಾಗ ದೊಡ್ಡ ಶಬ್ದವೊಂದು ಕೇಳಿಸಿತು. ಗುಂಡುವ ದಾಳಿಯಿಂದ ಕಾರಿನ ಎಡಭಾಗದ ಬಾಗಿಲಿನ ಕಿಟಕಿ ಒಡೆದು ಹೋಗಿತ್ತು. ಈ ವೇಳೆ ಕಾರಿನಿಂದ ಇಳಿದು ಓಡಿದೆ. ದುಷ್ಕರ್ಮಿಗಳು ಬಂದೂಕಿನಿಂದ ಗುಂಡು ಹಾರಿಸಿದ್ದರು. ಆದರೆ, ಅದು ಗುರಿ ತಪ್ಪಿತ್ತು ಎಂದು ಕೃಷ್ಣಮೂರ್ತಿಯವರು ಹೇಳಿದ್ದಾರೆ.

ಘಟನೆ ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದೆ. ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆಂದು ತಿಳಿಸಿದ್ದಾರೆ.

ವಕೀಲ ಕೃಷ್ಣಮೂರ್ತಿ ಮೇಲಿನ ಹತ್ಯೆ ಯತ್ನ ಖಂಡಿಸಿದ ವಕೀಲರ ಸಂಘದ ಸದಸ್ಯರು ದುಷ್ಕರ್ಮಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.Post a Comment

Previous Post Next Post