ಶಿವಮೊಗ್ಗ: ಚುನಾವಣೆಯ ಹಿನ್ನಲೆ ವಾಹನಗಳ ತಪಾಸಣೆ ವೇಳೆ ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಹಣ ಮತ್ತು ವಸ್ತುಗಳ ವಶ.

 ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ, ಶಿವಮೊಗ್ಗ  ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳನ್ನು ತೆರೆದು, ವಾಹನಗಳಾ ತಪಾಸಣೆಯನ್ನು ನಡೆಸುತ್ತಿದ್ದು, ಸೂಕ್ತ ದಾಖಲೆಗಳಿಲ್ಲದೇ, ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಈ ಕೆಳಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.


1. ದಿನಾಂಕ 04-04-2023 ರಂದು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಲಾರಿಯಲ್ಲಿ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಅಂದಾಜು ಮೌಲ್ಯ ರೂ 7,00,000/- ಗಳ ಒಟ್ಟು 460 ಚೀಲಗಳಲ್ಲಿ ತುಂಬಿದ್ದ 119 ಕ್ವಿಂಟಾಲ್ ಅಕ್ಕಿಯನ್ನು ಅಶಪಡಿಸಿಕೊಳ್ಳಲಾಗಿದೆ.

2. ದಿನಾಂಕ 04-04-2023 ರಂದು ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಲಗೇಜ್ ವಾಹನದಲ್ಲಿ ಸಾಗಿಸುತ್ತಿದ್ದ ರೂ 1,40,000/- ಮೌಲ್ಯದ ಒಟ್ಟು 50 ಗ್ಯಾಸ್ ಸ್ಟವ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.


Post a Comment

Previous Post Next Post