ಭದ್ರಾವತಿ: ಮನೆ ಮಾಲೀಕರು ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿ ಕಳ್ಳತನ; ಒಡವೆ ಮತ್ತು ಹಣ ದೋಚಿದ ಆರೋಪಿ ಬಂಧನ.

 ದಿನಾಂಕ 16-03-2023 ರಂದು ಬೆಳಗ್ಗೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುಮರಿ ನಾರಾಯಣಪುರ ಗ್ರಾಮದ ವಾಸಿ ಹನುಮಂತಪ್ಪರವರು ತಮ್ಮ ಮನೆಗೆ ಬೀಗ ಹಾಕಿಕೊಂಡು ತಮ್ಮ ಪತ್ನಿಯೊಂದಿಗೆ ಕೂಲಿಕೆಲಸಕ್ಕೆ ಹೋಗಿ, ಅದೇ ದಿನ ಸಂಜೆ ಪುನಃ ಮನೆಗೆ ವಾಪಾಸ್ ಬಂದು ನೋಡಿದಾಗ, ಯಾರೋ ಕಳ್ಳರು ಮನೆಯ ಮುಂಬಾಗಿಲಿನ ಬೀಗವನ್ನು ಒಡೆದು, ಮನೆಯ ಒಳಗೆ ಗಾಡ್ರೇಜ್ ಬೀರುವಿನಲ್ಲೊಇದ್ದ ಬಂಗಾರ ಆಭರಣ ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0060/2023 ಕಲಂ 454,380, ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.


ಸದರಿ ಪ್ರಕರಣದಲ್ಲಿ ಆರೋಪಿಗಳು ಹಾಗೂ ಕಳುವಾದ ಮಾಲಿನ ಪತ್ತೆ ಬಗ್ಗೆ ಶ್ರೀ ಮಿಥುನ್  ಕುಮಾರ್ ಜಿಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರ ಮಾರ್ಗದರ್ಶನದಲ್ಲಿ ಶ್ರೀ ಜಿತೇಂದ್ರ ಕುಮಾರ್ ದಯಾಮ, ಐಪಿಎಸ್, ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರು, ಭದ್ರಾವತಿ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ ಶ್ರೀ ಜಿ ರಮೇಶ್, ಪೊಲೀಸ್ ಠಾಣೆ ಮತ್ತು ಶ್ರೀ ಶೈಲ ಕೆಂಚಣ್ಣನವರ, ಪೊಲೀಸ್ ಉಪ ನಿರೀಕ್ಷಕರು, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂದಿಗಳಾದ ಸಿಪಿಸಿ ನಾಗರಾಜ್, ಶಿವಪ್ಪ ಮತ್ತು ಈರಯ್ಯ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ದಿನಾಂಕ 09-04-2023 ರಂದು ಸದರಿ ಪ್ರಕರಣದ ಆರೋಪಿತಳಾದ ರಂಜಿತಾ, 24 ವರ್ಷ, ಕುಮರಿ ನಾರಾಯಣಪುರ ಗ್ರಾಮ, ಭದ್ರಾವತಿ ಈಕೆಯನ್ನು ದಸ್ತಗಿರಿ ಮಾಡಿ, ಆರೋಪಿತಳಿಂದ ಅಂದಾಜು  ಮೌಲ್ಯ 43,000/- ರೂಗಳ ಬೆಳಿ ಮತ್ತು ಬಂಗಾರದ ಆಭರಣ, 01 ಫ್ರೀಡ್ಜ್, 01 ಅಲ್ಮೆರಾ ಮತ್ತು 01 ಕುಕ್ಕರ್ ಅನ್ನು ಅಮಾನತುಪಡಿಸಿ ಕೊಂಡಿರುತ್ತಾರೆ.

ತನಿಖಾ ತಂಡದ ಉತ್ತಮ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.


Post a Comment

Previous Post Next Post