ಶಿವಮೊಗ್ಗದ ಮತ್ತೂರಿನ ಡಾ.ನಂದಕುಮಾರ್ ರಿಗೆ ಇಂಗ್ಲೆಂಡಿನ ಅತ್ಯುನ್ನತ ನಾಗರಿಕ ಪ್ರಶಸ್ತಿ

 ಶಿವಮೊಗ್ಗ ಜಿಲ್ಲೆಯ ಸಂಸ್ಕೃತ ಭಾಷಿಕ ಊರು ಮತ್ತೂರು ಗ್ರಾಮದವರಾದ ಡಾ.ಮತ್ತೂರು ನಂದಕುಮಾರ ಅವರಿಗೆ ‘ಮೋಸ್ಟ್ ಎಕ್ಸಲೆಂಟ್ ಆರ್ಡರ್ ಆಫ್ ಬ್ರಿಟಿಷ್ ಎಂಪೈರ್ (civil division) ಅಡಿಯಲ್ಲಿ ಮೆಂಬರ್ ಆಫ್ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (MBE) ಗೌರವ ಸಿಕ್ಕಿದೆ. 

                                                       ಡಾ ಮತ್ತೂರು ನಂದಕುಮಾರ್

By :Rekha.M
Online Desk

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಂಸ್ಕೃತ ಭಾಷಿಕ ಊರು ಮತ್ತೂರು ಗ್ರಾಮದವರಾದ ಡಾ.ಮತ್ತೂರು ನಂದಕುಮಾರ ಅವರಿಗೆ ‘ಮೋಸ್ಟ್ ಎಕ್ಸಲೆಂಟ್ ಆರ್ಡರ್ ಆಫ್ ಬ್ರಿಟಿಷ್ ಎಂಪೈರ್ (civil division) ಅಡಿಯಲ್ಲಿ ಮೆಂಬರ್ ಆಫ್ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (MBE) ಗೌರವ ಸಿಕ್ಕಿದೆ. ವಿದೇಶಿ ಪ್ರಜೆಗಳಿಗೆ ನೀಡುವ ಗೌರವ ಬ್ರಿಟಿಷ್ ಪ್ರಶಸ್ತಿಗಳಲ್ಲಿ ಇದೂ ಒಂದು.

ಖ್ಯಾತ ಸಂಸ್ಕೃತ ವಿದ್ವಾಂಸ ಮತ್ತು ಶಿಕ್ಷಕ, ಡಾ ನಂದಕುಮಾರ ಪ್ರಸ್ತುತ ಲಂಡನ್‌ನಲ್ಲಿರುವ ಭಾರತೀಯ ವಿದ್ಯಾಭವನದ ಮುಖ್ಯಸ್ಥರಾಗಿದ್ದಾರೆ. ಯುಕೆ ವಿದೇಶಿ, ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ ಕಚೇರಿಯ ಪ್ರಕಾರ, ಡಾ ನಂದಕುಮಾರ ಅವರು ಇಂಗ್ಲೆಂಡಿನಲ್ಲಿ ಭಾರತೀಯ ಶಾಸ್ತ್ರೀಯ ಕಲೆಗಳ ಬೋಧನೆ, ಪ್ರವೇಶ ಮತ್ತು ಪ್ರದರ್ಶನಕ್ಕೆ ನೀಡಿದ ಕೊಡುಗೆಗಾಗಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಡಾ ನಂದಕುಮಾರ ಅವರು ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ನಂತರ ಅವರು ಲಂಡನ್ ವಿಶ್ವವಿದ್ಯಾಲಯದಲ್ಲಿ ತಮ್ಮ ಪಿಎಚ್‌ಡಿ ಪಡೆದರು. ಇದಕ್ಕೂ ಮುನ್ನ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಡಾ ನಂದಕುಮಾರ ಅವರು ಕಳೆದ 40 ವರ್ಷಗಳಿಂದ ಇಂಗ್ಲೆಂಡಿನಲ್ಲಿ ಭಾರತೀಯ ಸಂಸ್ಕೃತಿ ಮತ್ತು ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ, ಇದು ಭಾರತದ ಹೊರಗಿನ ಕಲೆಗಳ ಪ್ರಚಾರಕ್ಕಾಗಿ ಅತಿದೊಡ್ಡ ಭಾರತೀಯ ಸಂಸ್ಥೆಯಾಗಿದೆ.


Post a Comment

Previous Post Next Post