ಶಿವಮೊಗ್ಗ: ಡಿ.ಸಿ. ಕಛೇರಿಯಲ್ಲಿ ಭಾರತ ಸಂವಿಧಾನ ಶಿಲ್ಪಿ ಡಾ॥ ಭೀಮ್ ರಾವ್ ಅಂಬೇಡ್ಕರ್ ಅವರ ಜನ್ಮದಿನ ಆಚರಣೆ.

 ಶಿವಮೊಗ್ಗದ ಡಿ.ಸಿ. ಕಛೇರಿಯಲ್ಲಿ ಭಾರತ ಸಂವಿಧಾನ  ಶಿಲ್ಪಿ, ಕುರುಡು ಸಮಿತಿಯ  ಅಧ್ಯಕ್ಷರಾದ ಡಾ॥ ಬಿ.ಆರ್. ಅಂಬೇಡ್ಕರ್ ಅವರ 132 ನೇ ಜನ್ಮದಿನೋತ್ಸವವನ್ನು ಆಚರಿಸಲಾಗಿದೆ. ಇಡೀ ದೇಶ ಕಂಡ ಅದ್ಬುತ ವ್ಯಕ್ತಿ ಡಾ॥ ಬಿ.ಆರ್. ಅಂಬೇಡ್ಕರ್ ಎಂದರೆ ತಪ್ಪಾಗಾಲಾರದು. ಇಂತಹ ಮಹಾನ್ ವ್ಯಕ್ತಿಯ ಜನ್ಮದಿನೋತ್ಸವವನ್ನು ಡಿ.ಸಿ. ಕಛೇರಿಯಲ್ಲಿ ಆಚರಿಸಿದರು. ಇಂತಹ ಅಸಮಾನ್ಯ ವ್ಯಕ್ತಿ ನಮ್ಮ ದೇಶದಲ್ಲಿ ಹುಟ್ಟಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ. ಜಾತೀಯತೆಯ ಕಾರಣದಿಂದ ಅನೇಕರು ಅವರನ್ನು ಕೀಳಾಗಿ ನಡೆಸಿಕೊಂಡರು ಅದನ್ನೆಲ್ಲ ಮೆಟ್ಟಿನಿಂತು, ಅದರ ವಿರುದ್ದ ಹೋರಾಡಿ ಸಂವಿಧಾನವನ್ನು ರಚಿಸಿದ  ಡಾ॥ ಬಿ.ಆರ್. ಅಂಬೇಡ್ಕರ್ ಇಂದಿಗೂ ಮನಸ್ಸಿನಲ್ಲಿ ಶ್ರೇಷ್ಠವಾದ ಸ್ಥಾನವನ್ನು ಪಡೆದಿದ್ದಾರೆ.Post a Comment

Previous Post Next Post