ಶಿವಮೊಗ್ಗ: ಕರ್ತವ್ಯ ನಿರ್ವಹಿಸುವುದನ್ನು ಮರೆತು ಮೊಬೈಲ್ ನಲ್ಲಿ ಮುಳುಗಿ ಹೋಗಿರುವ ಚೆಕ್ ಪೋಸ್ಟ್ ಅಧಿಕಾರಿಗಳು.

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ಹಿನ್ನಲೆ 'ನೀತಿ ಸಂಹಿತಿ' ಜಾರಿ ಇರುವ ಕಾರಣ ಜಿಲ್ಲೆಯ ಹಲವು ಸ್ಥಳಗಳಲ್ಲಿ ವಾಹನಗಳ ತಪಾಸಣೆಗಾಗಿ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿತ್ತು. ಅದೇ ರೀತಿ ಸಹ್ಯಾದ್ರಿ ಕಾಲೇಜಿನ ಬಳಿಯು ಸಹ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ಆದರ್ರೆ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಹಿಸುವುದನ್ನು ಮರೆತು ಮೊಬೈಲ್ ನಲ್ಲಿ ಮುಳುಗಿ ಹೋಗಿರುವಂತಹ ದೃಶ್ಯ ಸಹ್ಯಾದ್ರಿ ಕಾಲೇಜಿನ ಬಳಿ ಕಂಡುಬಂದಿದೆ.

            ಸರ್ಕಾರ ಅವರನ್ನು ಈ ಕೆಲಸಕ್ಕೆ ನೇಮಕ ಮಾಡಿರುವುದು ವಾಹನಗಳ ತಪಾಸಣೇ ಮಾಡಲಿ ಎಂದೇ ಹೊರತು. ಈ ರೀತಿ ತಮಗಿಷ್ಟಬಂದಂತೆ ಮೊಬೈಲ್ ನೋಡಿಕೊಂಡು ಕಾಲಾಹರಣ ಮಾಡಲಿ ಎಂದಲ್ಲ. ಕೆಲಸ ನಿರ್ವಹಿಸದೇ ಇದ್ದರು ಸಂಬಳದ ಜೊತೆಗೆ ಬೇರೆಲ್ಲಾ ರೀತಿಯ ಸೌಕರ್ಯಗಳು ದೊರೆಯುತ್ತವೆ ಎಂಬ ಆಲಸ್ಯವೇ ಇದಕ್ಕೆ ಕಾರಣಾನಾ! ಈ ರೀತಿ ತಪಾಸಣೆ ನಡೆಸದೆ ಸುಮ್ಮನೇ ಕುಳಿತಿರುವುದಕ್ಕೆ ಇವರಿಗೆ ಸರ್ಕಾರ  ಸಂಬಳ ನೀಡಬೇಕಾ? ತಪಾಸಣೆ  ನಡೆಸದೆ ಈ ರೀತಿ ಮೊಬೈಲ್ ನಲ್ಲಿ ಮುಳುಗಿದ್ದರೆ 'ನೀತಿ ಸಂಹಿತಿ' ನಿಯಮ ಉಲ್ಲಂಘನೆ ಮಾಡಲು ಇವರೇ ಇತರರಿಗೆ ಅವಕಾಶ ಮಾಡಿಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ.


       ಚೆಕ್ ಪೋಸ್ಟ್ ಅಧಿಕಾರಿಗಳೇ ಈ ರೀತಿ ಬೇಜವಾಬ್ದಾರಿತನ ತೋರಿಸಿದರೆ  ಇನ್ನೆನು ಇವರು ಆರೋಪಿಗಳನ್ನು ಪತ್ತೆಹಚ್ಚುತ್ತಾರೆ! ಜೊತೆಗೆ  ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಲು ಅವರಿಗೆ ಎಲ್ಲೋ ಒಂದು ರೀತಿಯಲ್ಲಿ ಇವರೇ ಸಹಾಯ ಮಾಡಿದಂತಾಗುತ್ತದೆ ಎಂದರೇ ತಪ್ಪಾಗಲಾರದು.

Post a Comment

Previous Post Next Post