ಶಿವಮೊಗ್ಗ; ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಅಂಬೇಡ್ಕರ್ ಭವನದಲ್ಲಿ ಆಚರಣೆ: ಅವರು ಬರೆದಿರುವ ಪುಸ್ತಕ ಓದುವುದರ ಜೊತೆಗೆ ಆದರ್ಶ ಹಾಗೂ ಮೌಲ್ಯ ಗಳನ್ನು ಪಾಲನೆ ಮಾಡುವಂತೆ ತಿಳಿಸಿದರು.

 ಈ ದಿನ ದಿನಾಂಕ 14-04-2023 ರಂದು ಭಾರತ ರತ್ನ, ಸಂವಿಧಾನ ಶಿಲ್ಪಿ, ಡಾ. ಬಿ.ಆರ್. ಅಂಬೇಡ್ಕರ್ ರವರ  132 ನೇ ಜಯಂತಿಯ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆ ಶಿವಮೊಗ್ಗ ವತಿಯಿಂದ ಶಿವಮೊಗ್ಗ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಡಾ. ಸೆಲ್ವಮಣಿ ಆರ್, ಐಎಎಸ್, ಮಾನ್ಯ  ಜಿಲ್ಲಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ, ಮತ್ತು ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಲೋಕಂಡೆ ಸ್ನೇಹಲ್ ಸುಧಾಕರ್, ಐಎಎಸ್, ಸಿಇಓ, ಜಿಲ್ಲಾ ಪಂಚಾಯತ್ ಶಿವಮೊಗ್ಗ, ಶ್ರೀ ಕೆ. ಮಾಯಣ್ಣ ಗೌಡ, ಆಯುಕ್ತರು, ಮಹಾ ನಗರ ಪಾಲಿಕೆ, ಶಿವಮೊಗ್ಗ ರವರುಗಳು ಭಾಗವಹಿಸಿ, ಡಾ. ಬಿ,ಆರ್, ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಮರ್ಪಿಸಿದರು. ನಂತರ ಕಾರ್ಯಕ್ರಮದಲ್ಲಿ ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್ ರವರು  ಬರೆದಿರುವ ಪುಸ್ತಕಗಳನ್ನು ಓದುವಂತೆ ಮತ್ತು ಅವರ ಆದರ್ಶ ಹಾಗೂ ಮೌಲ್ಯಗಳನ್ನು ಪಾಲನೆ ಮಾಡುವಂತೆ ತಿಳಿಸಿದರು.Post a Comment

Previous Post Next Post