'ಶೆಟ್ಟರ್‌ಎಂದಿಗೂ ಸಿದ್ಧಾಂತದಿಂದ ಹಿಂದುತ್ವವಾದಿಯಾಗಿರಲಿಲ್ಲ: ಅಧಿಕಾರ ಬಯಸುತ್ತಿರುವ ಮತ್ತೊಬ್ಬ ಅವಕಾಶವಾದಿ ರಾಜಕಾರಣಿ'

 ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ ಸೇರ್ಪಡೆಯಾಗಿರುವ ಬಗ್ಗೆ ನಟ ಚೇತನ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಪಕ್ಷಾಂತರ ಮಾಡುವ ಪರಂಪರೆ ಖಂಡಿತವಾಗಿಯೂ ಪ್ರಶ್ನಾರ್ಥಕವಾಗಿದೆ ಎಂದಿದ್ದಾರೆ.

                                                                  ಜಗದೀಶ್ ಶೆಟ್ಟರ್

By : Rekha.M
Online Desk

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ ಸೇರ್ಪಡೆಯಾಗಿರುವ ಬಗ್ಗೆ ನಟ ಚೇತನ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಪಕ್ಷಾಂತರ ಮಾಡುವ ಪರಂಪರೆ ಖಂಡಿತವಾಗಿಯೂ ಪ್ರಶ್ನಾರ್ಥಕವಾಗಿದೆ ಎಂದಿದ್ದಾರೆ.

ಜಗದೀಶ್‌ ಶೆಟ್ಟರ್‌ ಅವರು ಕಾಂಗ್ರೆಸ್‌ ಪಕ್ಷ ಸೇರಿರುವುದರಿಂದ ಎರಡು ವಿಷಯಗಳು ಬಹಿರಂಗಗೊಂಡಿವೆ. ಒಂದು, ಶೆಟ್ಟರ್‌ ಅವರು ಎಂದಿಗೂ ಸಿದ್ಧಾಂತದಿಂದ ಹಿಂದುತ್ವವಾದಿಯಾಗಿರಲಿಲ್ಲ. ಇದು ಒಳ್ಳೆಯದು ಎಂದು ಚೇತನ್‌ ಹೇಳಿದ್ದಾರೆ.

ಎರಡನೇಯದು, ಅವರು ಅಧಿಕಾರ ಬಯಸುತ್ತಿರುವ ಮತ್ತೊಬ್ಬ ಅವಕಾಶವಾದಿ ರಾಜಕಾರಣಿ. ಇದು ಕೆಟ್ಟದ್ದು ಎಂದು ಹೇಳಿದ್ದಾರೆ. ಅಜೀವವಾಗಿ ಬಿಜೆಪಿಯಲ್ಲೇ ಇರುವುದು ಯೋಗ್ಯ ಪ್ರಶ್ನಾರ್ಹವಾಗಿದೆ  ಹಾಗೂ ಪಕ್ಷಾಂತರ ಮಾಡುವ ಪರಂಪರೆ ಖಂಡಿತವಾಗಿಯೂ ಪ್ರಶ್ನಾರ್ಹವಾಗಿದೆ ಎಂದು ಜಗದೀಶ ಶೆಟ್ಟರ್‌ ವಿಚಾರದಲ್ಲಿ ಚೇತನ್‌ ಹೇಳಿದ್ದಾರೆ.


Post a Comment

Previous Post Next Post