25 ಕ್ಲೀನಿಕ್ ಗಳ ದಾಳಿ

 ನಕಲಿ ವೈದ್ಯರ ಹಾವಳಿಯ ದೂರುಗಳ ಬೆನ್ನಲ್ಲೇ ಟಿಹೆಚ್ ಒ‌ ನೇತೃತ್ವದಲ್ಲಿ ನಗರದ 25 ಕ್ಲೀನಿಕ್ ಗಳ ಮೇಲೆ ದಾಳಿ ನಡೆದಿದೆ. ದಾಳಿಯಲ್ಲಿ 12 ಕ್ಲೀನಿಕ್ ಗಳ ವೈದ್ಯರು ಬಾಗಿಲು ತೆರೆಯದೆ ಇರುವುದು, ಒಂದು ಕ್ಲಿನಿಕ್ ಬಂದ್ ಮಾಡಲು ಸೂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.


ನಗರದಲ್ಲಿ ನಕಲಿ ವೈದ್ಯರುಗಳ ಹಾವಳಿ ಮತ್ತು ಪರವಾನಗಿ ಇಲ್ಲದೆ ಕ್ಲೀನಿಕ್ ಗಳನ್ನ ನಡೆಸಲಾಗುತ್ತಿದೆ ಎಂಬ ದೂರು ಕೇಳಿ ಬಂದಿತ್ತು. ಈ ದೂರಿನ ಬೆನ್ನಲ್ಲೇ ಜ.4 ರಂದು ಟಿ ಹೆಚ್ ಒ ಚಂದ್ರಶೇಖರ್ ನೇತೃತ್ವದಲ್ಲಿ ದಾಳಿ ನಡೆದಿದೆ.

ಅಣ್ಣಾನಗರ, ತುಂಗನಗರ, ಮಿಳಘಟ್ಟ ಮೊದಲಾದ 25 ಕ್ಲೀನಿಕ್ ಗಳ ಮೇಲೆ ಟಿಹೆಚ್ ಒ ಚಂದ್ರಶೇಖರ್ ಅವರ ತಂಡ ದಾಳಿ ನಡೆಸಿ ಪರಿಶೀಲಿಸಿದೆ. ಕೆಪಿಎಂಇ ಆಕ್ಟ್ ನಲ್ಲಿ ಕ್ಲೀನಿಕ್ ನ್ನ ನೋಂದಣಿ ಮಾಡಿಸಬೇಕು.‌ ಯಾವ ಸಿಸ್ಟಮ್ ನಲ್ಲಿ ಪ್ರಾಕ್ಟೀಸ್ ಮಾಡಿರುತ್ತಾರೋ ಆ ವಿಷಯದಲ್ಲೇ ವೈದ್ಯಗಿರಿಯನ್ನ ನಡೆಸಬೇಕು.

ಆಯುಷ್ ವೈದ್ಯರು ಮತ್ತು ಹಲೋಪತಿ ವೈದ್ಯರೂ ಸಹ ಪರವಾನಗಿ ಪಡೆಯಬೇಕೆಂಬ ಅಂಶಗಳ ಮೇಲೆ ದಾಳಿ ನಡೆದಿದೆ. ಈ ದಾಳಿಯ ವೇಳೆ 10 ಕ್ಕೂ ಹೆಚ್ಚು ಕ್ಲಿನಿಕ್ ಗಳು ಪರವಾನಗಿ ಇಲ್ಲದೆ ನಡೆಸಿರುವುದು, 12 ಕ್ಲಿನಿಕ್ ಗಳು ಬಾಗಿಲೇ ತೆಗೆದಿರುವುದು ಕಂಡು ಬಂದಿದೆ.

ಐದು ದಿನಗಳ ಒಳಗೆ ಉತ್ತರ ನೀಡುವಂತೆ ತಂಡ ಪರವಾನಗಿ ಇಲ್ಲದ, ಬಾಗಿಲು ತೆಗೆಯದ ಕ್ಲಿನಿಕ್ ಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ದಾಳಿ ವೇಳೆ ಒಂದು ಕ್ಲಿನಿಕ್ ಬಂದ್ ಮಾಡಲು ಸೂಚಿಸಲಾಗಿದೆ.

Post a Comment

Previous Post Next Post