ಶಿವಮೊಗ್ಗ: ಮುಸ್ಲಿಂ ಮಹಿಳೆ ಅಲ್ಲಾಹೋ ಅಕ್ಬರ್ ಕೂಗಿದ ವಿಚಾರ - ಘಟನೆ ಬೇಸರ ತರಿಸಿದೆ- ಈಶ್ವರಪ್ಪ.

 ಮುಸ್ಲಿಂ ಮಹಿಳೆ ಅಲ್ಲಾಹೋ ಅಕ್ಬರ್ ಕೂಗಿದ ವಿಚಾರದ ಕುರಿತು ಮಾಜಿ ಸಚಿವ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.


ಸ್ವಗೃಹದಲ್ಲಿ  ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವರು, 500 ವರ್ಷಗಳ ದೇಶದ ಹಿಂದುಗಳ‌ ಕನಸು ನನಸಾಗಿದೆ. ಯಾವನೋ ಆಕ್ರಮಣಕಾರಿ ಬಾಬರ್ ದೇವಸ್ಥಾನ ಕೆಡವಿ ಮಸೀದಿ ಕಟ್ಟಿದ್ದ.

ಇವತ್ತು ರಾಮಲಲ್ಲಾನ ಪ್ರಾಣಪ್ರತಿಷ್ಠಾಪನ ಕಾರ್ಯಕ್ರಮದ ಹಿನ್ಬಲೆಯಲ್ಲಿ ನಗರದ ಶಿವಮೊಗ್ಗದ ಎಸ್ ಎನ್ ವೃತ್ತದಲ್ಲಿ  ಸಿಹಿ ಹಂಚುವ ವೇಳೆ ಮಹಿಳೆಯೋರ್ವಳು ಅಲ್ಲಾಹೋ ಅಕ್ಬರ್ ಅಂತಾ ಕೂಗಿದ್ದಾಳೆ ಎಂದರು.

ಶಿವಪ್ಪನಾಯಕ ‌ಪ್ರತಿಮೆ ಬಳಿ ಸಂಭ್ರಮ ಆಚರಿಸುವ ವೇಳೆ ಬುರ್ಖಾ ಹಾಕಿಕೊಂಡು ಬಂದು ಮೋದಿಗೆ ಅಪಮಾನ ಮಾಡಿದ್ದಾಳೆ. ಈ ಬಗ್ಗೆ ಮಾಧ್ಯಮದಲ್ಲಿ ‌ನೋಡಿದೆ.ಎಸ್ ಪಿ ಜೊತೆ ಮಾತನಾಡಿದೆ. ಈ ವೇಳೆ ಎಸ್ ಪಿ ಅವರು ಆ ಮಹಿಳೆ ಹುಚ್ಚಿ ಅಂತಾ ಹೇಳಿದ್ದಾರೆ. ನಾನು ನೀವು ಹುಚ್ಚಿ ಅಂತಾ ಹೇಗೆ ನಿರ್ಧಾರ ಮಾಡ್ತೀರಾ ಅಂತಾ ಕೇಳಿದ್ದೇನೆ ಎಂದರು.

ಆಕೆ ವಿರುದ್ದ ಎಫ್ ಐಆರ್ ಮಾಡಿ, ಬಂಧಿಸುವಂತೆ ಹೇಳಿದ್ದೇನೆ. ನಿಪ್ಷಕ್ಚಪಾತವಾಗಿ ತನಿಖೆ ಮಾಡಬೇಕುಆಕೆ ಹುಚ್ಚಿ ಆಗಿದ್ದರೆ ಅಲ್ಲಾಹೋ ಅಕ್ಬರ್ ಹೇಗೆ ಕೂಗಿದಳು, ಮೋದಿಗೆ ಧಿಕ್ಕಾರ ಏಕೆ ಕೂಗಿದಳು. ಸಂಭ್ರಮದ ಕಾರ್ಯಕ್ರಮದ ವೇಳೆ ಷಡ್ಯಂತ್ರ ನಡೆಸುವ ಕೆಲಸ ನಡೆದಿದೆ ಎಂದು ದೂರಿದರು.

ಈ ಬಗ್ಗೆ ಸಿಎಂ, ಗೃಹ ಸಚಿವರು ಗಮನ ಹರಿಸಿ, ತನಿಖೆ ನಡೆಸಬೇಕು. ಇದರ ಹಿಂದೆ ಯಾರಿದ್ದಾರೆ, ಯಾರು ಕುಮ್ಮಕ್ಕು ಕೊಟ್ಟಿದ್ದಾರೆ ಎಲ್ಲವೂ ತನಿಖೆಯಿಂದ ಹೊರಗೆ ಬರಬೇಕು. ಆ ಮಹಿಳೆ ಶಿವಮೊಗ್ಗದಲ್ಲಿ ‌ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ್ದಳು. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ. ಅಯೋಧ್ಯೆಯ ಸಂಭ್ರಮದಲ್ಲಿ ಇರುವಾಗ ಇದ್ದಕ್ಕಿದ್ದಂತೆ ಗಲಾಟೆ ನಡೆಸುವ ಪ್ರಯತ್ನ ಮಾಡಿರುವುದು ಬೇಸರ ತರಿಸಿದೆ ಎಂದರು.

Post a Comment

Previous Post Next Post