ಸಾಗರ : ಪತಿಯಿಂದಲೇ ಪತ್ನಿಯ ಬರ್ಬರ ಕೊಲೆ.!

ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಕುದರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆವಿಗೆಯಲ್ಲಿ ಪತಿಯೇ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಫಟನೆ ಶನಿವಾರ ನಡೆದಿದೆ.


 ಅವಿಗೆಯ ಕುಣಬಿ ಸಮುದಾಯಕ್ಕೆ ಸೇರಿದ ಲೋಕೇಶ (40) ಎಂಬಾತ ಕೌಟುಂಬಿಕ ಕಲಹದ ನಡುವೆ ಏಕಾಏಕಿ ಪತ್ನಿ ನೀಲಾವತಿ(38) ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಕುತ್ತಿಗೆ ಭಾಗದಲ್ಲಿ ಬಲವಾಗಿ ಹಲ್ಲೆ ಮಾಡಿದ್ದರಿಂದ ತೀವ್ರ ರಕ್ತ ಸ್ರಾವ ಉಂಟಾಗಿದೆ. ಸ್ಥಳೀಯರು ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ಸಾವನ್ನಪ್ಪಿದ್ದಾರೆ. 

ಸದ್ಯ ಕೊಲೆ ನಂತರ ಆರೋಪಿ ಲೋಕೇಶ (40) ತಲೆ ಮರೆಸಿ ಕೊಂಡಿದ್ದು ಆರೋಪಿ ಪತ್ತೆಗಾಗಿ ಪೋಲಿಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಇವರಿಗೆ 3ಜನ ಪುತ್ರಿಯರು ಇದ್ದು, ಮರಣೋತ್ತರ ಪರೀಕ್ಷೆ ನಂತರ ಸ್ವಗ್ರಾಮದಲ್ಲಿ ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ. ಕಾರ್ಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Post a Comment

Previous Post Next Post