ಶಿವಮೊಗ್ಗ - ಅಲ್ಲಾ ಹು ಅಕ್ಬರ್ ಘೋಷಣೆ ವಿಚಾರ; ನನ್ನ ಮಗಳು ಮಾನಸಿಕ ಅಸ್ವಸ್ಥಳಿದ್ದಾಳೆ - ಮಹಿಳೆ ತಂದೆ ಸಯ್ಯದ್ ಅಬ್ಬಾಸ್ ಹೇಳಿಕೆ.

 ಅಲ್ಲಾ ಹು ಅಕ್ಬರ್ ಘೋಷಣೆ ವಿಚಾರ. ಶಿವಮೊಗ್ಗ ದಲ್ಲಿ ಮಹಿಳೆ ತಂದೆ ಸಯ್ಯದ್ ಅಬ್ಬಾಸ್ ಹೇಳಿಕೆ. ನನ್ನ ಮಗಳು ಮೊದಲಿನಿಂದಲೂ ಸ್ವಲ್ಪ ಮಾನಸಿಕ ಅಸ್ವಸ್ಥಳಿದ್ದಾಳೆ. ಈ ಸಂಬಂಧ ಅವಳಿಗೆ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಕಳೆದ 10 ತಿಂಗಳಿನಿಂದ ಗಂಡನ ಮನೆ ಬಿಟ್ಟು ನನ್ನ ಮನೆಯಲ್ಲಿಯೇ ಇದ್ದಾಳೆ. ಈ ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದಳು.

ಘಟನೆ ಕೇಳಿ ನನಗೂ ನೋವಾಗಿದೆ, ಅವಳು ಆ ತರಹದ ಹುಡುಗಿ ಅಲ್ಲ ಅವಳು ಜಾತಿ ಭೇದ ಮಾಡಲ್ಲ ಎಲ್ಲರಿಗೂ ಒಂದೇ ತರ ನೋಡುತ್ತಾಳೆ ಅವಳು ಉದ್ದೇಶ ಪೂರಕವಾಗಿ ಅವಳು ಘೋಷಣೆ ಕೂಗಿಲ್ಲ 

ಅಲ್ಲಾ ಹು ಅಕ್ಬರ್ ಘೋಷಣೆ ವಿಚಾರ. ಶಿವಮೊಗ್ಗ ದಲ್ಲಿ ಎಸ್ಪಿ ಮಿಥುನ್ ಕುಮಾರ್ ಹೇಳಿಕೆ ಮಹಿಳೆವನ್ನ ವಶಕ್ಕೆ ತನಿಖೆ ನಡೆಸುತ್ತಿದ್ದೇವೆ. ವಿಚಾರಣೆ ವೇಳೆ ಮಹಿಳೆ ಮಾನಸಿಕ ಅಸ್ವಸ್ಥಳೆಂದು ತಿಳಿದು ಬಂದಿದೆ. ಈ ಸಂಬಂಧ ಅವರ ತಂದೆ ಪೂರಕ ದಾಖಲೆಗಳನ್ನ ನೀಡಿದ್ದಾರೆ. ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ ಎಂದ ಎಸ್ಪಿ

Post a Comment

Previous Post Next Post