ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನಾ ಕಾರ್ಯ; ದೇವಸ್ಥಾನಗಳ ಸ್ವಚ್ಚತಾ ಕಾರ್ಯ- ಕೆ.ಎಸ್.ಈಶ್ವರಪ್ಪ.

 ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಗಳ ಸ್ವಚ್ಚತಾ ಕಾರ್ಯ ಕೈಗೊಳ್ಳಲಾಗಿದೆ. ಬಿಜೆಪಿಯಲ್ಲಿ ಹುಚ್ಚರಿದ್ದಾರೆ ಎಂಬ ಸಚಿವ ಮಧು ಬಂಗಾರಪ್ಪ ಹೇಳಿಕೆ ವಿಚಾರ. ಹುಚ್ಚರ ಬಗ್ಗೆ ಹೇಳುತ್ತಾ ಹೋದರೆ ದೇಶದಲ್ಲಿ ಆಸ್ಪತ್ರೆ ಸಾಕಾಗುವುದಿಲ್ಲ. ಹಾಗಾಗಿ ಅದರ ಬಗ್ಗೆ ಹೆಚ್ಚು ಹೇಳುವುದಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಮನಸ್ಸಿನಲ್ಲಿ ರಾಮ ಇದ್ದಾನೆ. ಅವರನ್ನು ವೈಯಕ್ತಿಕವಾಗಿ ಹತ್ತಿರದಿಂದ ಬಲ್ಲೆ . ಹಾಗಾಗಿ ರಾಮನ ಮೂರ್ತಿಯ ಪ್ರತಿಷ್ಟಾಪನೆ ಆದ ನಂತರವಾದರೂ ಅಯೋಧ್ಯೆಗೆ ಹೋಗುತ್ತೇನೆ ಎಂದು ಹೇಳಲಿ. ರಾಮ ಎಲ್ಲರಿಗೂ ಸೇರಿದ್ದಾನೆ. ಅದರಲ್ಲಿ ರಾಜಕೀಯ ಬೆರೆಸುವುದು ಬೇಡ. ಕಾಂಗ್ರೆಸ್ ನಲ್ಲಿ ಮೂವರು ಡಿಸಿಎಂ‌ ವಿಷಯ ಪ್ರಸ್ತಾಪ. ಅವರು ಬಹಿರಂಗ ಚರ್ಚೆ ಬಿಟ್ಟು ಹೈ ಕಮಾಂಡ್ ನಿರ್ಧಾರಕ್ಕೆ ಬಿಟ್ಟು ಬಿಡಲಿ. ಅದನ್ನು ಬಿಟ್ಟು ಡಿ.ಕೆ.ಶಿವಕುಮಾರ್ ರನ್ನು ಹಣಿಯಲು ಈ ರೀತಿ ನಡೆಯುತ್ತಿದೆ. 


ನಮ್ಮ ಸರ್ಕಾರದ ಆಡಳಿತದಲ್ಲೂ ಮೂವರು ಡಿಸಿಎಂ‌ ಗಳಿದ್ದರು. ಆದರೆ ಎಲ್ಲೂ ಈ ರೀತಿಯ ಚರ್ಚೆಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಕಾಂಗ್ರೆಸ್ ಕೆಲ ಶಾಸಕರು ಸಚಿವ ಸ್ಥಾನದ ಆಕಾಂಕ್ಷೆ ವ್ಯಕ್ತ ಪಡಿಸುತ್ತಿದ್ದಾರೆ. ಅದು ತಪ್ಪಲ್ಲ. ಆದರೆ ಈ ರೀತಿ ಬಹಿರಂಗ ಚರ್ಚೆ ಮತದಾರರಿಗೆ ಬೇಸರ ಮೂಡಿಸುತ್ತದೆ. ಇವರಿಗೆ ಕಿತ್ತಾಡಲು ಮತ ನೀಡಿದೆವೆಯೇ ಎದ್ದು ಅವರು ಕೇಳುತ್ತಾರೆ. ಕುರುಬ ಸಮಾಜದಲ್ಲಿ ನಾನು ಅರ್ಜಿ ಹಾಕಿ ಹುಟ್ಟಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ. ಯಾರೂ ಅರ್ಜಿ ಹಾಕಿ ಹುಟ್ಟುವುದಿಲ್ಲ. ಅದು ದೇವರ ನಿರ್ಧಾರ. ತಂದೆ-ತಾಯಿಯ ಜನ್ಮ ಪಡೆದ ನಂತರ ಸಂಸ್ಕಾರ ಮುಖ್ಯ. ಕನಕದಾಸ, ವಾಲ್ಮೀಕಿ ಮೊದಲಾದವರು ನಾಡಿಗೆ ಶ್ರೇಷ್ಠ ಕೊಡುಗೆ ನೀಡಿದ್ದಾರೆ. ಮೈಸೂರಿನ ಶಿಲ್ಪಿ ಯೋಗರಾಜ್ ರ ಬಾಲರಾಮ ಆಯ್ಕೆ ವಿಚಾರ. ಇದು ರಾಜ್ಯದ ಪಾಲಿಗೆ ಸಂತಸದ ವಿಷಯ, ಅಷ್ಟೇ ಅಲ್ಲ ಹೆಮ್ಮೆಯೂ ಹೌದು. ಜಗತ್ತಿನಲ್ಲಿ ಪ್ರಸಿದ್ಧಿ ಪಡೆದ ಅಯೋಧ್ಯೆಯಲ್ಲಿ ಕರ್ನಾಟಕದ ಶಿಲ್ಪಿ ಕೆತ್ತಿರುವ ಮೂರ್ತಿ ಆಯ್ಕೆಯಾಗಿರುವುದು ಅದೃಷ್ಠವೇ ಸರಿ

Post a Comment

Previous Post Next Post