ರಾಮ ನಾಮ ಜಪಿಸುವಂತೆ ಕರೆ: ಗಾಯಕಿ ಚಿತ್ರಾ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಟೀಕೆ

 ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ರಾಮ ನಾಮ ಜಪಿಸುವಂತೆ ಕರೆ ನೀಡಿದ್ದ ಖ್ಯಾತ ಗಾಯಕಿ ಕೆಎಸ್ ಚಿತ್ರಾ ಅವರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.

                                                              ಗಾಯಕಿ ಚಿತ್ರಾ

Posted By : Rekha.M
Source : Online Desk

ತಿರುವನಂತಪುರಂ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ರಾಮ ನಾಮ ಜಪಿಸುವಂತೆ ಕರೆ ನೀಡಿದ್ದ ಖ್ಯಾತ ಗಾಯಕಿ ಕೆಎಸ್ ಚಿತ್ರಾ ಅವರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.

ಒಂದು ಕಡೆ ಉದಾರವಾದಿ ಮತ್ತು ಎಡ ಪಂಥೀಯರಿಂದ ತೀವ್ರ ಟೀಕೆ ವ್ಯಕ್ತವಾಗಿದ್ದು, ಮತ್ತೊಂದು ಕಡೆ ಬಲಪಂಥೀಯ ಹಿಂದುತ್ವ ಸಿದ್ಧಾಂತಕ್ಕೆ ನಿಷ್ಠರಾಗಿರುವವರು ಗಾಯಕಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.

ಗಾಯಕ ಜಿ ವೇಣುಗೋಪಾಲ್ ಹೊರತುಪಡಿಸಿ ಇತರ ಯಾವುದೇ ಚಿತ್ರೋದ್ಯಮ ಮತ್ತು ಸಂಗೀತ ಜಗತ್ತಿನ ಗಣ್ಯರು ಮೌನವಾಗಿದ್ದಾರೆ.

 ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಚಿತ್ರಾ ಅವರು ಶ್ರೀ ರಾಮ ಜಯ ರಾಮ, ಜಯ ಜಯ ರಾಮ ಮಂತ್ರವನ್ನು ಪಠಿಸುವಂತೆ ಮತ್ತು ಪವಿತ್ರ ದಿನದಂದು ತಮ್ಮ ಮನೆಗಳ ಸುತ್ತಲೂ ದೀಪಗಳನ್ನು ಬೆಳಗಿಸುವಂತೆ ಕೇಳಿಕೊಂಡಿದ್ದಾರೆ.

ಗಾಯಕಿಯ ಮನವಿಗೆ ಹಲವಾರು ಪ್ರಮುಖ ವ್ಯಕ್ತಿಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಲೇಖಕಿ ಇಂದು ಮೆನನ್ ಅವರು, 'ಅಪ್ರಾಮಾಣಿಕ ಕೋಗಿಲೆ' ಎಂದು ಕರೆದಿದ್ದಾರೆ.

“ಎಷ್ಟೇ ಬಾರಿ ದೇವರ ನಾಮಸ್ಮರಣೆ ಮಾಡಿದರೂ, ರಕ್ತದಲ್ಲಿರುವವರನ್ನಾಗಲಿ, ಓಡಿಹೋಗುವವರನ್ನಾಗಲಿ, ನೋವಿನಿಂದ ನರಳುತ್ತಿರುವವರನ್ನಾಗಲಿ ಕಾಪಾಡಲು ಯಾವ ರಾಮನಾಗಲಿ ವಿಷ್ಣುವಾಗಲಿ ಬರುವುದಿಲ್ಲ, ಐದಲ್ಲ, ಐದು ಲಕ್ಷ ದೀಪಗಳನ್ನು ಬೆಳಗಿಸಿದರೂ ಯಾವುದೇ ಬೆಳಕು ನಿಮ್ಮ ಮನಸ್ಸನ್ನು ತುಂಬುವುದಿಲ್ಲ. ಅದು ಕೋಯಿಲ್‌(ನೈಟಿಂಗೇಲ್) ಎಂದು ಜಗತ್ತು ನಂಬಿತ್ತು. ಆದರೆ ನೀವು ನಿಜವಾಗಿಯೂ ನಕಲಿ ನೈಟಿಂಗೇಲ್ ಎಂದು ಸಾಬೀತಾಗಿದೆ ಎಂದು ಬರೆದಿದ್ದಾರೆ.

ಗಾಯಕ ಸೂರಜ್‌ ಸಂತೋಷ್‌ ಕೂಡ ಕೆಎಸ್‌ ಚಿತ್ರಾ ಅವರ ವಿಡಿಯೋಗೆ ಆಕ್ರೋಶ ವ್ಯಕ್ತಪಡಿಸಿ ಇನ್ಸ್‌ಟಾಗ್ರಾಮ್‌ ಪೋಸ್ಟ್‌ ಮಾಡಿದ್ದಾರೆ. 'ಮಸೀದಿಯನ್ನು ಕೆಡವಿ ದೇವಸ್ಥಾನವನ್ನು ಕಟ್ಟಿದ್ದಾರೆ ಎನ್ನುವುದು ಈಕೆ ಮರೆತಿದ್ದಾರೆ ಎಂದು ಕಾಣುತ್ತದೆ. ಒಂದರ ಹಿಂದೆ ಒಂದರಂತೆ ನಮ್ಮ ಐಕಾನ್‌ಗಳು ಬ್ರೇಕ್‌ಡೌನ್‌ ಆಗುತ್ತಿದ್ದಾರೆ. ತಮ್ಮ ನಿಜಬಣ್ಣವನ್ನು ತೋರಲು ಇನ್ನಷ್ಟು ಚಿತ್ರಾ ಅವರು ಕಾದಿದ್ದಾರೆ ಎನ್ನುವುದನ್ನು ನೋಡಬೇಕು? ಎಂದು ಬರೆದುಕೊಂಡಿದ್ದಾರೆ.

ಇನ್ನು ಚಿತ್ರಾ ಅವರ ಬೆಂಬಲಕ್ಕೆ ನಿಂತಿರುವ ಗಾಯಕ ಜಿ ವೇಣುಗೋಪಾಲ್‌ ಅವರು, ಚಿತ್ರಾ ಇದುವರೆಗೆ ಯಾವುದೇ ವಿವಾದಗಳಲ್ಲಿ ಭಾಗಿಯಾಗಿಲ್ಲ. ಅವರನ್ನು ಅವಮಾನಿಸುವ ಮತ್ತು ಬೇರೆ ಎಂದು ನೋಡುವ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳ ಬಗ್ಗೆ ನನಗೆ ಬೇಸರವಿದೆ ಎಂದು ಬರೆದಿದ್ದಾರೆ. 

Post a Comment

Previous Post Next Post