ಶಿವಮೊಗ್ಗ: ಕಂಟ್ರಿಕ್ಲಬ್ ಆವರಣದಲ್ಲಿ ಗ್ರಾಹಕರ ಸಂವಾದ ಸಭೆ; ಮಸ್ಯೆ/ಅಹವಾಲುಗಳನ್ನು ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಲ್ಲಿ ಸಲ್ಲಿಸಿದ ಗ್ರಾಹಕರು.

 ಮೆಸ್ಕಾಂ ಶಿವಮೊಗ್ಗ ವೃತ್ತ ವ್ಯಾಪ್ತಿಯ ಕಾರ್ಯ ಮತ್ತು ಪಾಲನಾ ವಲಯವು ಜ.11 ರಂದು ನಗರದ ಕಂಟ್ರಿಕ್ಲಬ್ ಆವರಣದಲ್ಲಿ ಗ್ರಾಹಕರ ಸಂವಾದ ಸಭೆಯನ್ನು ಆಯೋಜಿಸಿತ್ತು.  ಈ ಸಭೆಯಲ್ಲಿ 210 ಗ್ರಾಹಕರು ಭಾಗವಹಿಸಿದ್ದು, ತಮ್ಮ ಸಮಸ್ಯೆ/ಅಹವಾಲುಗಳನ್ನು ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಲ್ಲಿ ಸಲ್ಲಿಸಿದರು.  ಗ್ರಾಹಕರ ಸಮಸ್ಯೆಗಳಿಗೆ ವ್ಯವಸ್ಥಾಪಕರು ಸಕಾರಾತ್ಮಕವಾಗಿ ಸ್ಪಂದಿಸಿ, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ತಿಳಿಸಿ ಬಗೆಹರಿಸಿರುತ್ತಾರೆ. ಉಳಿದ ಸಮಸ್ಯೆ/ಅಹವಾಲುಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.  ಸಭೆಯ ಅಧ್ಯಕ್ಷತೆಯನ್ನು ಮೆಸ್ಕಾಂನ ಮುಖ್ಯ ಇಂಜಿನಿಯರ್ ಹೆಚ್.ಬಸಪ್ಪ ವಹಿಸಿದ್ದರು.  ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಪದ್ಮಾವತಿ ಮುಖ್ಯ ಅತಿಥಿಗಳಾಗಿ ಡಿ. ಉಪಸ್ಥಿತರಿದ್ದರು. 

Post a Comment

Previous Post Next Post