ಶಿವಮೊಗ್ಗ: ಗಲಭೆ ಪಡಿತ ಶಿವಮೊಗ್ಗದ ರಾಗಿಗುಡ್ಡ ಶಾಂತಿನಗರದಲ್ಲಿ ಶಾಂತಿ ನೆಲೆಸಲು ಪೊಲೀಸ್ ಇಲಾಖೆಯಿಂದ ಮಾಸ್ಟರ್ ಪ್ಲಾನ್ .

 ಶಿವಮೊಗ್ಗದಲ್ಲಿ ಪೊಲೀಸ್ ಹಾಗೂ ಜಿಲ್ಲಾಧಿಕಾರಿಗಳಿಂದ ವಿಭಿನ್ನ ಪ್ರಯತ್ನ. ಗಣರಾಜ್ಯೋತ್ಸವ ಅಂಗವಾಗಿ ಪೋಲಿಸ್ ಇಲಾಖೆ ಕ್ರಿಕೆಟ್ ಪಂದ್ಯ ಆಯೋಜನೆ ಮಾಡಿದ ಎಸ್ಪಿ ಮಿಥುನ್ ಕುಮಾರ್. ಕ್ರಿಕೆಟ್ ಮೂಲಕ ಸೌಹಾರ್ದತಾಗಿ ಶಾಂತಿ ನೆಲೆಸುವಂತೆ ಎಲ್ಲಾ ಧರ್ಮದವರಿಗೂ ಆಹ್ವಾನ ನೀಡಿದ ಜಿಲ್ಲಾಧಿಕಾರಿ.

ಕ್ರಿಕೆಟ್ ನಲ್ಲಿ ಪ್ರಾರಂಭವಾದ ಗಲಾಟೆಗೆ ಕ್ರಿಕೆಟ್ ಮೂಲಕವೇ ಅಂತ್ಯಗೊಳಿಸಲು ನಿರ್ಧಾರ. ಸಿನಿಮಿಯಾ ರೀತಿಯಲ್ಲಿ ಶಾಂತಿ ನೆಲೆಸಲು ವಿಭಿನ್ನ ಪ್ರಯತ್ನ. ಮುಸ್ಮಿಂ ಯುವಕರು, ಹಿಂದೂ ಯುವಕರು, ಪೊಲೀಸರು ಹಾಗೂ ಮಾದ್ಯಮವರು ಸೇರಿದಂತೆ ಹಲವು ಟೀಮ್ ಗಳ ರಚನೆ.

ಕಳೆದ ಮೂರು ತಿಂಗಳ ಹಿಂದೆ ರಾಗಿಗುಡ್ಡದಲ್ಲಿ ಗಲಭೆಯಾಗಿತ್ತು. ಪೊಲೀಸರ ಮೇಲೆ ಕಲ್ಲು ತೂರಾಟ ನಡೆದ ಹಿನ್ನೆಲೆ ಲಾಠಿ ಚಾರ್ಜ್ ನೆಡೆಸಲಾಗಿತ್ತು. ತಿಂಗಳುಗಳ ಕಾಲ ರಾಗಿ ಗುಡ್ಡದಲ್ಲಿ 144 ಸೆಕ್ಷನ್ ಹೇರಲಾಗಿತ್ತು. ಹಲವು ಶಾಂತಿ ಸಭೆಗಳ ನಂತರ ಕ್ರಿಕೆಟ್ ಪಂದ್ಯಾವಳಿ ಆಯೋಜನೆ. ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾವಳಿ ಆಯೋಜನೆ


Post a Comment

Previous Post Next Post