ವೈಯಕ್ತಿಕ ಟೀಕೆ ಸರಿಯಲ್ಲ- ಶಿವಮೊಗ್ಗ ದಲ್ಲಿ ಮಾಜಿ ಸಚಿವ ಈಶ್ವರಪ್ಪ ಹೇಳಿಕೆ

 ಈ ರೀತಿ ಹುಚ್ಚರ ಬಗ್ಗೆ ಹೇಳ್ತಾ ಹೋದ್ರೆ. ದೇಶದಲ್ಲಿರುವ ಹುಚ್ಚಾಸ್ಪತ್ರೆ ರಾಜಕಾರಣಿಗಳಿಗೆ ಸಾಕಾವುದಿಲ್ಲ. ಈ ಹುಚ್ಚಾಟವನ್ನ ಎಲ್ಲಾ ರಾಜಕಾರಣಿ ಬಿಡಬೇಕು. ವೈಯಕ್ತಿಕ ಟೀಕೆ ಸರಿಯಲ್ಲ. ಒಬ್ಬೊಬ್ಬರ ಬಗ್ಗೆ ಮಾತಾನಾಡುವುದಕ್ಕೆ ಹೋದ್ರೆ ಹುಚ್ಚರ ಸಂತೆ ಆಗುತ್ತೆ. ನಾವೆಲ್ಲರೂ ರಾಮನ ಭಕ್ತರಾಗೋಣ. ರಾಮ ಯಾವ ಪಕ್ಷಕ್ಕೂ ಸೇರಿದವನಲ್ಲ. ನಾವು ಕಾಂಗ್ರೆಸ್, ಬಿಜೆಪಿ ಅಂತಾ ಹೇಳೋದು ಸರಿಯಲ್ಲ. ಟೀಕೆ, ಟಿಪ್ಪಣಿ ಮಾಡುವಾಗ ವ್ಯಯಕ್ತಿಕ ಟೀಕೆ ಸರಿಯಲ್ಲ. ನಾನು ವಿಚಾರವನ್ನ ವಿರೋಧಿಸುತ್ತೇನೆ. ವ್ಯಯಕ್ತಿಕ ಟೀಕೆ ಮಾಡುವುದನ್ನ ರಾಜಕಾರಣಿ ಗಳು ಬಿಡಬೇಕು.

ಅಭಿವೃದ್ಧಿ ಬಿಟ್ಟು, ವ್ಯಯಕ್ತಿಕ ಟೀಕೆ ಸರಿಯಲ್ಲ. ಇದನ್ನ ವಿರೋಧಿಸುವುತ್ತೇನೆ. ಆ ವಿಚಾರವನ್ನ ಬಿಟ್ಟುಬಿಡಿ. ಅನಂತ್ ಕುಮಾರ್ ಹೆಗ್ಡೆ ಹೇಳಿಕೆ ವಿರೋಧ ವ್ಯಕ್ತಪಡಿಸಿದ ಈಶ್ವರಪ್ಪ. ಸಿದ್ದರಾಮಯ್ಯ ಗೆ ಒಂದು ಮಾತು ಹೇಳ್ತೀನಿ. ನೀವು ಧೈವ ಭಕ್ತರಿದಿರಿ. ನಿಮ್ಮ ಮನಸ್ಸಿನಲ್ಲಿ ದೇವರಿದ್ದಾರೆ. ನಿಮ್ಮ ಮನಸ್ಸಿನಲ್ಲಿ ರಾಮ ಇದ್ದಾನೆ. ಹಾಗಾಗಿ ನೀವು ಒಂದು ಸಲ ಬರ್ತಿನಿ ಅಂತಾ ಹೇಳೋದು . ಮತ್ತೊಂದು ಸಲ ಬರೋಲ್ಲ ಅಂತಾ ಹೇಳೋದು ಬಿಡಿ. ನೀವು ರಾಮಮಂದಿರಕ್ಕೆ ಹೋಗ್ತೀನಿ ಅಂತಾ ಹೇಳಿ. ಆಗ ದೇಶಕ್ಕೆ, ರಾಜ್ಯಕ್ಕೆ ಒಳ್ಳೆಯದು ಆಗುತ್ತೆ

ಖಾಸಗಿ ಆಗಿ ನಾನು ಸಿದ್ದರಾಮಯ್ಯ ರನ್ನ ನೋಡಿದ್ದೀನಿ. ಅವರಲ್ಲಿ ಧೈವ ಭಕ್ತಿ ಇದೆ. ನೀವು ಒಂದು ಸಲ ಹೇಳಿಬಿಡಿ ರಾಮಮಂದಿರಕ್ಕೆ ಹೋಗ್ತೀನಿ ಅಂತಾ . ಆಗ ಎಲ್ಲಾ ಸರಿಹೋಗುತ್ತದೆ ಎಂದು ಸಿಎಂ ಗೆ ಸಲಹೆ ನೀಡಿದ ಈಶ್ವರಪ್ಪ. ಇದ್ರಲ್ಲಿ ನಾನು ರಾಜಕಾರಣ ಬೆರೆಸೋಕೆ ಇಷ್ಟಪಡುವುದಿಲ್ಲ. ರಾಮನ ವಿಚಾರದಲ್ಲಿ ರಾಜಕಾರಣ ಮಾಡೋಲ್ಲ

Post a Comment

Previous Post Next Post