ಶಿವಮೊಗ್ಗ: ಮುಸ್ಲಿಂ ‌ಮಹಿಳೆಯಿಂದ ಅಲ್ಲಾಹೋ‌ ಅಕ್ಬರ್ ಘೋಷಣೆ; ಈ ಕುರಿತು ಎಸ್.ಪಿ ಮಿಥುನ್ ಕುಮಾರ್ ಹೇಳಿದ್ದೇನು.?

 ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ. ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ಸಿಹಿ ವಿತರಣೆ. ಹಿಂದು ಕಾರ್ಯಕರ್ತರಿಂದ ಸಿಹಿ ವಿತರಣೆ. ಈ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗಿದ ಹಿಂದು ಕಾರ್ಯಕರ್ತರು.ಅದೇ ದಾರಿಯಲ್ಲಿ ಬಂದ ಮುಸ್ಲಿಂ ‌ಮಹಿಳೆಯಿಂದ ಅಲ್ಲಾಹೋ‌ ಅಕ್ಬರ್ ಘೋಷಣೆ.


ನೀವು ಮೋದಿ‌ ಪರ ಕೆಲಸ ಮಾಡ್ತಿದ್ದೀರಾ ಎಂದು ಮುಸ್ಲಿಂ ಮಹಿಳೆಯಿಂದ ಪೊಲೀಸರಿಗೆ ಆವಾಜ್ ಸ್ಥಳದಲ್ಲಿದ್ದ ಹಿಂದು ಕಾರ್ಯಕರ್ತರಿಂದ ಪ್ರತಿರೋಧ.ಪ್ರತಿಯೊಬ್ಬರಿಂದಲೂ ಜೈಶ್ರೀರಾಮ್ ಘೋಷಣೆ. ಮುಸ್ಲಿಂ ಮಹಿಳೆ ಬಂಧಿಸುವಂತೆ ಬಿಜೆಪಿ ಮುಖಂಡ ಕಾಂತೇಶ್ ಅವರಿಂದ ಪೊಲೀಸರಿಗೆ ಸೂಚನ

ಕಾಂತೇಶ್, ಮಾಜಿ ಸಚಿವ ಈಶ್ವರಪ್ಪ ‌ಪುತ್ರ. ಮುಸ್ಲಿಂ ಮಹಿಳೆ ನ್ಯೂಸೆನ್ಸ್ ಮಾಡ್ತಿದ್ದರೂ ಸುಮ್ಮನಿದ್ದೀರಾ ಎಂದ ಕಾಂತೇಶ್. ನಂತರ ಮುಸ್ಲಿಂ ಮಹಿಳೆಯನ್ನು ವಶಕ್ಕೆ ಪಡೆದು ಜೀಪಿನಲ್ಲಿ ಕರೆದೊಯ್ದ ಪೊಲೀಸರು

ಈ ಕುರಿತು ಎಸ್.ಪಿ ಮಿಥುನ್ ಕುಮಾರ್ ಹೇಳಿದ್ದೇನು.?

ಶಿವಪ್ಪ ನಾಯಕ ವೃತ್ತದಲ್ಲಿ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿರುವ ಮಿಥುನ್ ಕುಮಾರ್ ರವರು ಈ ಕುರಿತು ತನಿಖೆ ನಡಿಸಿದ ನಂತರ ಆ ಮಹಿಳೆ ಮಾನಸಿಕವಾಗಿ ಅಸ್ಥಿರಳಾಗಿದ್ದು,  ಕೆಲವು ತಿಂಗಳುಗಳಿಂದ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ ಎಂದು ಆಕೆಯ ತಂದೆ  ತಿಳಿಸಿದ್ದಾರೆ. ಅವರು ಅದಕ್ಕೆ ಸಂಬಂಧ ಪಟ್ಟ ಕೆಲವು ಮಾತ್ರೆಗಳನ್ನು ಸಹ ತಂದಿದ್ದು ಅದರ ಪರಿಶೀಲನೆ ನಡೆಸಲಾಗುತ್ತಿದೆ ಎಂದು  ಮಿಥುನ್ ಕುಮಾರ್ ರವರು ತಿಳಿಸಿದ್ದಾರೆ.

Post a Comment

Previous Post Next Post