'ಕನ್ನಡ ಪೂಜಾರಿ'ಹೀರೇಮಗಳೂರು ಕಣ್ಣನ್ ರಿಂದ ವೇತನ ವಾಪಸ್ ಕೇಳಿದ ಸರ್ಕಾರ, ಜಿಲ್ಲಾಡಳಿತದಿಂದ ನೊಟೀಸ್

 ಹೀರೇಮಗಳೂರು ಕಣ್ಣನ್ ಹಿರಿಯ ಸಾಹಿತಿ, ವಾಗ್ಮಿ ಮತ್ತು ಕನ್ನಡಲ್ಲಿಯೇ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಅರ್ಚಕರಾಗಿ ಜನಪ್ರಿಯರು.

                                                        ಹೀರೇಮಗಳೂರು ಕಣ್ಣನ್

Posted By :Rekha.M
Source :Online Desk


ಚಿಕ್ಕಮಗಳೂರು: ಹೀರೇಮಗಳೂರು ಕಣ್ಣನ್ ಹಿರಿಯ ಸಾಹಿತಿ, ವಾಗ್ಮಿ ಮತ್ತು ಕನ್ನಡಲ್ಲಿಯೇ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಅರ್ಚಕರಾಗಿ ಜನಪ್ರಿಯರು.

ಕನ್ನಡದಲ್ಲೇ ರಾಮನ ಅರ್ಚನೆ ಮಾಡುವ ಚಿಕ್ಕಮಗಳೂರಿನ ಕೋದಂಡರಾಮ ದೇಗುಲದ ಅರ್ಚಕ ಹಿರೇಮಗಳೂರು ಕಣ್ಣನ್ ಅವರ ವೇತನ ವಾಪಸ್ ಕೇಳಿದೆ. ಅಲ್ಲದೆ ಅವರಿಗೆ ನೀಡಲಾಗುತ್ತಿರುವ ವೇತನವನ್ನೂ ತಡೆಹಿಡಿಯಲಾಗಿದೆ. 4, 500 ರೂಪಾಯಿಯಂತೆ 10 ವರ್ಷದ 4,74,000 ರೂಪಾಯಿ ಹಣವನ್ನು ವಾಪಸ್ ನೀಡುವಂತೆ ಕನ್ನಡದ ಪಂಡಿತ, ಅರ್ಚಕ ಹಿರೇಮಗಳೂರು ಕಣ್ಣನ್​​ ಅವರಿಗೆ ಜಿಲ್ಲಾಡಳಿತ ನೋಟಿಸ್​​ ನೀಡಿದೆ.

ಹಿರೇಮಗಳೂರು ಕಣ್ಣನ್ ಅವರು ಕಳೆದ 50 ವರ್ಷಗಳಿಂದ ಚಿಕ್ಕಮಗಳೂರು ಹೊರವಲಯದಲ್ಲಿರುವ ಕಲ್ಯಾಣ ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ರಾಜ್ಯ ಸರ್ಕಾರ ಪ್ರತಿ ತಿಂಗಳು 7,500 ರೂಪಾಯಿ ವೇತನ ನೀಡುತ್ತಿತ್ತು. ಆದರೆ ಇದೀಗ ದೇವಾಲಯದ ಆದಾಯ ಕಡಿಮೆ‌ ಇದೆ ಎಂದು ಕಾರಣ ನೀಡಿ ಈ ಹಿಂದೆ ನೀಡಿದ್ದ 7,500 ರೂಪಾಯಿ ವೇತನದಲ್ಲಿ 4,500 ರೂಪಾಯಿ ವಾಪಸ್ ನೀಡುವಂತೆ ಈ ತಿಂಗಳ ವೇತನವನ್ನು ತಡೆ ಹಿಡಿದು 2023ರ ಡಿಸೆಂಬರ್​ 2ರಂದು  ತಹಶಿಲ್ದಾರ್ ಸುಮಂತ್ ನೋಟಿಸ್​ ನೀಡಿದ್ದಾರೆ.

ಕನ್ನಡದಲ್ಲೇ ಮಂತ್ರಘೋಷ: ಕೋದಂಡ ರಾಮ ದೇಗುಲದಲ್ಲಿ ದಿನ ನಿತ್ಯವೂ ಸೀತಾ ರಾಮ ಲಕ್ಷ್ಮಣರಿಗೆ ಕನ್ನಡದಲ್ಲೇ ಮಂತ್ರಘೋಷಗಳಿಂದ ಪೂಜೆ ಸಲ್ಲಿಸುವುದು ವಿಶೇಷವಾಗಿದೆ. ಕನ್ನಡದ ಪೂಜಾರಿ ಎಂದೇ ಖ್ಯಾತಿ ಪಡೆದಿರುವ ಹಿರೇಮಗಳೂರು ಕಣ್ಣನ್ ನೇತೃತ್ವದಲ್ಲಿ ಕನ್ನಡದಲ್ಲಿ ಕಲ್ಯಾಣ ರಾಮನಿಗೆ ಕನ್ನಡದಲ್ಲಿ ಪೂಜೆ ಕಾರ್ಯ ನಡೆಯುತ್ತದೆ. ರಾಜ್ಯ ಹೊರ ರಾಜ್ಯದಿಂದ ಆಗಮಿಸುವ ನೂರಾರು ಭಕ್ತರು ಕಲ್ಯಾಣ ರಾಮರ ದರ್ಶನ ಪಡೆಯುತ್ತಿದ್ದಾರೆ.

Post a Comment

Previous Post Next Post