ಶಿವಮೊಗ್ಗ: ಆನಂದಪುರ ಪೊಲೀಸರ ಕಾರ್ಯಾಚರಣೆ: ಮೂರೇ ದಿನದಲ್ಲಿ ಮನೆ ಕಳ್ಳತನ ಆರೋಪಿಯ ಬಂಧನ...!!!

ಆನಂದಪುರ ಪೊಲೀಸರ ಕಾರ್ಯಾಚರಣೆ: ಮೂರೇ ದಿನದಲ್ಲಿ ಮನೆ ಕಳ್ಳತನ ಆರೋಪಿಯ ಬಂಧನ...!!!
 ಸಾಗರ ತಾಲೂಕಿನ ಆನಂದಪುರ ಸಮೀಪದ ಆಚಾಪುರ ಗ್ರಾಮದಲ್ಲಿ 7-10-2024 ರಂದು ಮನೆಯ ಮುಂದಿನ ಬಾಗಿಲನ್ನು ಮೀಟಿ ಮನೆಯ ಗಾರ್ಡೆಜ್ ಒಳಗಿದ್ದ ಚಿನ್ನದ ಮಾಂಗಲ್ಯ ಸರ ಹಾಗೂ 25.000 ನಗದು ಹಣ ಕಳ್ಳತನವಾಗಿದೆ ಎಂಬ ಪ್ರಕರಣ ಆನಂದಪುರ ಪೊಲೀಸ್  ಠಾಣೆಯಲ್ಲಿ ದಾಖಲಾಗಿತ್ತು.ಇದನ್ನು ಬೆನ್ನಟ್ಟಿದ ಪೊಲೀಸರು ಮೂರೇ ದಿನದಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನಿಂದ 1.10.000 ಮೌಲ್ಯದ 20 ಗ್ರಾಂ ಬಂಗಾರದ ಆಭರಣ 3 ಸಾಗರ ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ 45.000 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತಾರೆ.

ಕೆ. ಮಿಥುನ್ ಕುಮಾರ್  ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಬೂಮರೆಡ್ಡಿ, ಕರಿಯಪ್ಪ ಹಾಗೂ ಸಾಗರದ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ಸಾಗರ ಗ್ರಾಮಾಂತರ ಠಾಣೆಯ ಪಿ. ಐ ಮಹಾಬಲೇಶ್ವರ ಎಸ್ ನಾಯಕ್ ರವರ ಮಾರ್ಗದರ್ಶನದಲ್ಲಿ ಆನಂದಪುರ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಯುವರಾಜ್ ಕಂಬಳಿ, ನಿರ್ಮಲ ಪಿಎಸ್ ಐ, ದಿವಾಕರ್ ನಾಯಕ್, ಪರಶುರಾಮ್, ಮಾಳಿಂಗರಾಯ, ಅವಿನಾಶ್, ಸಂತೋಷ್ ನಾಯಕ್ ರವರು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
 
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂಧಿಯವರಿಗೆ ಶಿವಮೊಗ್ಗ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Post a Comment

Previous Post Next Post