ಜೆಟ್ ಲ್ಯಾಗ್ ಪಬ್ ನಲ್ಲಿ ಪಾರ್ಟಿ ಪ್ರಕರಣ: ನಟ ದರ್ಶನ್ ಸೇರಿ ಮೂವರಿಗೆ ನೊಟೀಸ್, ಇನ್ನೂ ಹಲವರ ಬುಲಾವ್ ಗೆ ಖಾಕಿಪಡೆ ಸಿದ್ಧತೆ

 ಮಧ್ಯರಾತ್ರಿ ಅವಧಿ ಮೀರಿ ಬೆಳಗಿನ ಜಾವದವರೆಗೆ ಪಬ್ ನಲ್ಲಿ ಪಾರ್ಟಿ ಮಾಡಿದ ಪ್ರಕರಣ ಮೇಲೆ ನಟ ದರ್ಶನ್ ಸೇರಿದಂತೆ ನಾಲ್ವರಿಗೆ ಸೋಮವಾರ ಪೊಲೀಸರು ವಿವರಣೆ ಕೇಳಿ ನೊಟೀಸ್ ಜಾರಿ ಮಾಡಿದ್ದಾರೆ.

                                          ನಟ ದರ್ಶನ್ ಮತ್ತು ಪಬ್ ನ ಸಂಗ್ರಹ ಚಿತ್ರ

Posted By : Rekha.M
Source : Online Desk

ಬೆಂಗಳೂರು: ಮಧ್ಯರಾತ್ರಿ ಅವಧಿ ಮೀರಿ ಬೆಳಗಿನ ಜಾವದವರೆಗೆ ಪಬ್ ನಲ್ಲಿ ಪಾರ್ಟಿ ಮಾಡಿದ ಪ್ರಕರಣ ಮೇಲೆ ನಟ ದರ್ಶನ್ ಸೇರಿದಂತೆ ನಾಲ್ವರಿಗೆ ಸೋಮವಾರ ಪೊಲೀಸರು ವಿವರಣೆ ಕೇಳಿ ನೊಟೀಸ್ ಜಾರಿ ಮಾಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ಚಿತ್ರ ಬಿಡುಗಡೆಯಾಗಿ ಭಾರೀ ಯಶಸ್ಸು ಕಂಡು ಗಳಿಕೆಯಲ್ಲಿ 100 ಕೋಟಿ ಕ್ಲಬ್ ಸೇರಿದೆ. ವಿದೇಶದಲ್ಲಿ ಕೂಡ ಹವಾ ಎಬ್ಬಿಸಿದೆ. ಈ ಖುಷಿಯಲ್ಲಿ ಚಿತ್ರತಂಡ ಜನವರಿ 3ರಂದು ಬೆಂಗಳೂರಿನ ರಾಜಾಜಿನಗರದಲ್ಲಿರುವ ಜೆಟ್ ಲ್ಯಾಗ್ ಪಬ್ ನಲ್ಲಿ ಸಕ್ಸಸ್ ಪಾರ್ಟಿ ಇಟ್ಟುಕೊಂಡಿತ್ತು. ಅದರಲ್ಲಿ ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್, ನಾಯಕ ನಟ ದರ್ಶನ್ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ನಟ, ನಟಿಯರು ಭಾಗಿಯಾಗಿದ್ದರು.

ಬಾರ್ ಅಂಡ್ ರೆಸ್ಟೋರೆಂಟ್ ಗೆ ವಿಧಿಸಿರುವ ನಿಯಮ ಪ್ರಕಾರ ಮಧ್ಯರಾತ್ರಿ 1 ಗಂಟೆಗೆ ಪಬ್ ಬಾಗಿಲು ಹಾಕಬೇಕು. ಆದರೆ ಚಿತ್ರತಂಡ ಮಧ್ಯರಾತ್ರಿ ಮೀರಿ ಬೆಳಗಿನ ಜಾವದವರೆಗೂ ಪಾರ್ಟಿ ಮಾಡಿದ್ದು ಪಾರ್ಟಿ ಮುಗಿಸಿಕೊಂಡು ಹೊರಬರುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ನಾಲ್ವರಿಗೆ ನೊಟೀಸ್: ಪಾರ್ಟಿಯಲ್ಲಿ ಭಾಗಿ ಆದ ನಟ ದರ್ಶನ್, ಅಭಿಷೇಕ್ ಅಂಬರೀಷ್, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್​ಗೆ ನೋಟಿಸ್ ಜಾರಿ ಆಗಿದೆ. ಸುಬ್ರಹ್ಮಣ್ಯನಗರ ಇನ್ಸ್​ಪೆಕ್ಟರ್​ ಸುರೇಶ್ ಅವ​ರಿಂದ ನೋಟಿಸ್ ಜಾರಿ ಆಗಿದೆ. ಪಾರ್ಟಿಯಲ್ಲಿ ಭಾಗಿ ಆಗಿದ್ದ ನಟ ಡಾಲಿ ಧನುಂಜಯ್, ನಟ ಚಿಕ್ಕಣ್ಣ, ನಿನಾಸಂ ಸತೀಶ್, ನಿರ್ದೇಶಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ಹರಿಕೃಷ್ಣ ಅವರಿಗೆ ನೋಟಿಸ್ ನೀಡಲು ಸಿದ್ಧತೆ ನಡೆದಿದೆ. ಸದ್ಯ ಚಿತ್ರತಂಡ ವಿದೇಶ ಪ್ರವಾಸದಲ್ಲಿದೆ. 


Post a Comment

Previous Post Next Post