ನಗರ ನಿತಿನ್ ಮತ್ತು ಸಹೋದರರ ಮೇಲೆ ಹಲ್ಲೆ-ಕಾಂಗ್ರೆಸ್ ಫೇಲ್ಸ್ ಕರ್ನಾಟಕ ಎಂದು ವಿಜೇಂದ್ರ ಟ್ವೀಟ್

 ಹೊಸನಗರ ತಾಲೂಕು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ನಗರ ನಿತಿನ್ ಮತ್ತು ಸಹೋದರನ‌ ಮೇಲೆ ದಾಳಿಯಾಗಿರುವುದನ್ನ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಟ್ವೀಟ್ ಮೂಲಕ ಕಾಂಗ್ರೆಸ್ ಪಕ್ಷವನ್ನ ಕಟುವಾಗಿ ಟೀಕಿಸಿದ್ದಾರೆ. ಹ್ಯಾಷ್ ಟ್ಯಾಗ್ ಬಳಸಿ ಕಾಂಗ್ರೆಸ್ ಫೇಲ್ಸ್ ಕರ್ನಾಟಕ ಎಂದು ಬಣ್ಣಿಸಿದ್ದಾರೆ.


ಡಿ.31 ರಾತ್ರಿ ಹೊಸನಗರ ತಾಲೂಕು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ನಗರ ನಿತಿನ್ ಮತ್ತು ಸಹೋದರ ನವೀನ್ ಮೇಲೆ ಹಲ್ಲೆ ನಡೆದಿತ್ತು. ಈ ಹಲ್ಲೆಯನ್ನ ಕಾಂಗ್ರೆಸ್ ಪಕ್ಷದ ಪ್ರಕಾಶ್ ಮತ್ತಿತರಿಂದ ನಡೆದಿದೆ ಎಂದು ನಗರ ನಿತಿನ್ ಮಾಧ್ಯಮ ಹೇಳಿಕೆ ನೀಡಿದ್ದರು.

ಇದನ್ನ ಶಾಸಕ ಚೆನ್ನಬಸಪ್ಪ ಮೆಗ್ಗಾನ್ ಭೇಟಿಯಗಿ ನಿತಿನ್ ಸಹೋದರರ ಆರೋಗ್ಯ ವಿಚಾರಿಸಿ ಮಾಧ್ಯಮ ಹೇಳಿಕೆ ನಿಡದ್ದರು. ಜಿಲ್ಲೆಯಲ್ಲಿ ಅಘೋಷಿತ ಗೂಂಡಾರಾಜ್ ಜಾರಿಯಲ್ಲಿದೆ ಎಂದು ಆರೋಪಿಸಿದ್ದರು. ಅದರ ಬೆನ್ನಹಿಂದೆ ವಿಜೇಂದ್ರರರು ಸಹ ಹ್ಯಾಷ್ ಟ್ಯಾಗ್ ಬಳಸಿ ಆರೋಪಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇವೆ. ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಂತೂ ಇದು ಮರುಕಳಿಸುತ್ತಲೇ ಇದೆ, ಹೊಸನಗರ ತಾಲ್ಲೂಕಿನ ಯುವ ಮೋರ್ಚಾ ಅಧ್ಯಕ್ಷ ನಿತಿನ್ ಅವರ ಮೇಲೆ ಕಾಂಗ್ರೆಸ್ ಗೂಂಡಾಗಳಿಂದ ನಡೆದ ಹಲ್ಲೆ ಅತ್ಯಂತ ಖಂಡನಾರ್ಹ.

ದಿನೇ ದಿನೇ ಗೂಂಡಾಗಳ ವರ್ತನೆ ಗಮನಿಸಿದರೆ, ಕಾಂಗ್ರೆಸ್ ಸರ್ಕಾರ ಗೂಂಡಾಗಳ ಪೋಷಣೆಗೆ ನಿಂತಂತಿದೆ, ತಕ್ಷಣ ಪೋಲಿಸರು ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತೇನೆ. ಇಂಥಾ ಘಟನೆಗಳು ಮತ್ತೆ ಮತ್ತೆ ಮರುಕಳಿಸುವ ಪರಿಸ್ಥಿತಿ ಮುಂದುವರೆದರೆ, ಬಿಜೆಪಿ ಹೋರಾಟದ ಸ್ವರೂಪ ತೀವ್ರಗೊಳಿಸಬೇಕಾದೀತು ಎಂದು ಎಚ್ಚರಿಸುತ್ತಿದ್ದೇನೆ. #CongressFailsKarnataka ಎಂದು ಟ್ವೀಟ್ ಮಾಡಿದ್ದಾರೆ.

Post a Comment

Previous Post Next Post