ಶಿವಮೊಗ್ಗ: ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಸಾವು ; ರೋಗಿ ಸಂಬಂಧಿಕರಿಂದ ಪ್ರತಿಭಟನೆ!

 ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಸಾವು ಆರೋಪ. ರೋಗಿ ಸಂಬಂಧಿಗಳಿಂದ ಆಸ್ಪತ್ರೆ ವಿರುದ್ಧ ಆಕ್ರೋಶ.  ಖಾಸಗಿ ಆಸ್ಪತ್ರೆಯಲ್ಲೇ ಪ್ರತಿಭಟಿಸಿ, ವೈದ್ಯರ ವಿರುದ್ಧ ಆಕ್ರೋಶ. ಶಿವಮೊಗ್ಗದ ಭಾರತ್ ನ್ಯೂರೋ ಆಸ್ಪತ್ರೆಯಲ್ಲಿ ರೋಗಿ ಸಂಬಂಧಿಕರಿಂದ ಪ್ರತಿಭಟನೆ.

ನವೀನ್ (38) ಸಾವು ಕಂಡ ರೋಗಿ. ತರೀಕೆರೆಯ ಕರಕುಚ್ಚಿ ಗ್ರಾಮದ ನವೀನ್ ಗೆ ದಾಖಲಿಸಲಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಕರಕುಚ್ಚಿ ಗ್ರಾಮ. ಕಳೆದ 3 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗಲಾಟೆ ವೇಳೆ ತಲೆಗೆ ಏಟು ಬಿದ್ದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾರೆಂದು ವೈದ್ಯರ ಮಾಹಿತಿ. ಚೆನ್ನಾಗಿಯೇ ಇದ್ದ ನವೀನ್ ಸಾವನಪ್ಪಲು ಕಾರಣವೇನು ಎಂದು ಪ್ರಶ್ನೆ. ಶವವನ್ನು ಐಸಿಯುನಲ್ಲಿಟ್ಟು ನಮ್ಮ ಬಳಿ ಹಣ ಕಟ್ಟಲು ಹೇಳುತ್ತಿದ್ದಾರೆ.

ನವೀನ್ ಪ್ರಾಣ ಉಳಿಸಿದರೆ ಹಣ ಕಟ್ಟಬಹುದು. ನಮ್ಮ ನವೀನ್ ಪ್ರಾಣ ಉಳಿಸಿಕೊಡಿ ಎಂದು ಮೃತನ ಸಂಬಂಧಗಳ ಆಗ್ರಹ. ನನ್ನ ತಮ್ಮನನ್ನು ಉಳಿಸಿಕೊಡಿ ಎಂದು ನವೀನ್ ಸಹೋದರಿ ಅಳಲು. ಶಿವಮೊಗ್ಗದ ಭಾರತ್ ನ್ಯೂರೋ ಆಸ್ಪತ್ರೆ ಮುಂಭಾಗ ಹೈಡ್ರಾಮ.

Post a Comment

Previous Post Next Post