ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದರೂ ಸರ್ಕಾರಿ ಕಾರು, ನಿವಾಸಗಳನ್ನು ಬಳಸುತ್ತಿರುವ ಕೆಲ ಸಚಿವರುಗಳು, ಆಪ್ತ ಸಹಾಯಕರು!

 ಕರ್ನಾಟಕದಲ್ಲಿ ದಿನೇ ದಿನೇ ಚುನಾವಣಾ ಕಾವು ಏರುತ್ತಿದೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಸಂಪುಟದ ಸಚಿವರು ತಮ್ಮ ಅಧಿಕೃತ ವಾಹನಗಳನ್ನು ಹಿಂದಿರುಗಿಸಿದ್ದಾರೆ. ಸರ್ಕಾರಿ ಅತಿಥಿ ಗೃಹಗಳಲ್ಲಿ ತಂಗಿದ್ದ ಹಲವರು ಚುನಾವಣೆ ಘೋಷಣೆಯಾದ ಕೂಡಲೇ ಸ್ಥಳಾಂತರಗೊಂಡಿದ್ದಾರೆ.

                                                      ಕರ್ನಾಟಕ ಸರ್ಕಾರಿ ವಾಹನ

By : Rekha.M
Online Desk

ಬೆಂಗಳೂರು: ಕರ್ನಾಟಕದಲ್ಲಿ ದಿನೇ ದಿನೇ ಚುನಾವಣಾ ಕಾವು ಏರುತ್ತಿದೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಸಂಪುಟದ ಸಚಿವರು ತಮ್ಮ ಅಧಿಕೃತ ವಾಹನಗಳನ್ನು ಹಿಂದಿರುಗಿಸಿದ್ದಾರೆ. ಸರ್ಕಾರಿ ಅತಿಥಿ ಗೃಹಗಳಲ್ಲಿ ತಂಗಿದ್ದ ಹಲವರು ಚುನಾವಣೆ ಘೋಷಣೆಯಾದ ಕೂಡಲೇ ಸ್ಥಳಾಂತರಗೊಂಡಿದ್ದಾರೆ. ಆದರೆ ಅವರು ಅನೇಕ ಸಹಾಯಕರು, ವಿಶೇಷ ಕರ್ತವ್ಯದಲ್ಲಿರುವ ಅಧಿಕಾರಿಗಳು ಮತ್ತು ಸಚಿವರ ಆಪ್ತ ಸಹಾಯಕರು ಇನ್ನೂ ಸರ್ಕಾರಿ ವಾಹನಗಳು, ಸರ್ಕಾರಿ ನಿವಾಸದಲ್ಲಿ ವಾಸಿಸುತ್ತಿರುವುದು ಕಂಡುಬಂದಿದೆ. 

ಕಟ್ಟುನಿಟ್ಟಾದ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅವರು ಅಧಿಕೃತ ವಾಹನಗಳನ್ನು ಬಳಸುವುದನ್ನು ಮುಂದುವರೆಸಿದ್ದಾರೆ. ಏಕೆಂದರೆ ವಾಹನಗಳು ನೇರವಾಗಿ ಸರ್ಕಾರದಿಂದಲ್ಲ, ಆದರೆ ಅವುಗಳನ್ನು ಮಂಡಳಿಗಳು ಮತ್ತು ನಿಗಮಗಳಿಂದ ನಿಯೋಜಿಸಲಾಗಿದೆ, ಅವು ಕಾನೂನು ಲೋಪವನ್ನು ಹೊಂದಿದೆ ಎಂದು ಮೂಲಗಳು ಹೇಳುತ್ತಿವೆ. 

ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ''ಸರ್ಕಾರದ ಜನಪ್ರತಿನಿಧಿಗಳ ಸಹಾಯಕರು, ಅಧಿಕಾರಿಗಳು ಅಂತಹ ವಾಹನಗಳನ್ನು ಬಳಸುವಂತಿಲ್ಲ. ನಾನು ಅದರ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ತಿಳಿಸುತ್ತೇನೆ ಎಂದಿದ್ದಾರೆ. ಉಲ್ಲಂಘನೆಗಳ ಬಗ್ಗೆ ಮಾಹಿತಿ ನೀಡಿದ ನಂತರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು, "ನಾವು ಈಗಾಗಲೇ ಎಲ್ಲಾ ಸಚಿವರ ಕಚೇರಿಗಳಿಗೆ ಸೂಚನೆಗಳನ್ನು ರವಾನಿಸಿದ್ದೇವೆ. ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ,'' ಎಂದರು.

ಕೆಲವು ಸಚಿವರೊಂದಿಗೆ ಕೆಲಸ ಮಾಡುವ ಖಾಸಗಿ ಸಹಾಯಕರು ಬುಧವಾರ, ಗುರುವಾರ ಮತ್ತು ಶುಕ್ರವಾರದವರೆಗೆ ಸುಮಾರು 20 ಅಧಿಕೃತ ವಾಹನಗಳನ್ನು ಬಳಸುವುದನ್ನು ಮುಂದುವರೆಸಿದ್ದಾರೆ ಎಂದು ವಿಧಾನಸೌಧದಲ್ಲಿ ಕೆಲಸ ಮಾಡುವ ಮೂಲಗಳು ತಿಳಿಸಿವೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ''ವಾಹನ ದುರ್ಬಳಕೆಯಾಗದಂತೆ ಚುನಾವಣಾ ಆಯೋಗ ಮತ್ತು ಅಧಿಕಾರಿಗಳು ಗಮನಹರಿಸಬೇಕು ಮತ್ತು ಮಾದರಿ ಸಂಹಿತೆಯನ್ನು ಅಕ್ಷರಶಃ ಪಾಲಿಸಬೇಕು. ಅಧಿಕಾರಿಗಳು ಪರಿಶೀಲನೆ ನಡೆಸಿ ನಾಳೆಯಿಂದ ವಾಹನ ದುರ್ಬಳಕೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದಕ್ಕೆ ಅವಕಾಶ ನೀಡುವುದು ಹೇಗೆ, ಅಧಿಕಾರಿಗಳು ಎಚ್ಚೆತ್ತುಕೊಂಡು ಇಂತಹ ಅಕ್ರಮಗಳು ನಡೆಯದಂತೆ ನೋಡಿಕೊಳ್ಳಬೇಕು. ಇದನ್ನು ಕೂಡಲೇ ನಿಲ್ಲಿಸಬೇಕು ಎಂದಿದ್ದಾರೆ. ಮಾಜಿ ಮುಖ್ಯ ಕಾರ್ಯದರ್ಶಿ ಎ.ರವೀಂದ್ರ ಇಂತಹ ಪ್ರಕರಣಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. 


Post a Comment

Previous Post Next Post