ಮೀಸಲಾತಿ ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆಗೆ ನಾನು ಕಾರಣವಲ್ಲ: ಮುಖ್ಯಮಂತ್ರಿಗಳ ಸ್ವಯಂಕೃತ ಅಪರಾಧ; ಡಿ.ಕೆ ಶಿವಕುಮಾರ್

 ಮೀಸಲಾತಿ ವಿಚಾರದಲ್ಲಿ ಸಮುದಾಯಗಳು ಪರಸ್ಪರ ಜಗಳವಾಡುತ್ತಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರಣ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸೋಮವಾರ ಆರೋಪಿಸಿದರು.

                                                            ಡಿ.ಕೆ ಶಿವಕುಮಾರ್

By : Rekha.M
Onlline desk

ಬೆಂಗಳೂರು: ಮೀಸಲಾತಿ ವಿಚಾರದಲ್ಲಿ ಸಮುದಾಯಗಳು ಪರಸ್ಪರ ಜಗಳವಾಡುತ್ತಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರಣ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸೋಮವಾರ ಆರೋಪಿಸಿದರು.

ರಾಜ್ಯಾದ್ಯಂತ ಕೋಟಾ ವಿಚಾರವಾಗಿ ವಿವಿಧ ಸಮುದಾಯಗಳು ನಡೆಸುತ್ತಿರುವ ಪ್ರತಿಭಟನೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂಬ ಬೊಮ್ಮಾಯಿ ಆರೋಪಕ್ಕೆ ಉತ್ತರಿಸಿದರು. ನಾವು ಯಾವುದೇ ಗಲಭೆಗಳಿಗೆ ಕಾರಣವಲ್ಲ. ಇದೆಲ್ಲ ಮುಖ್ಯಮಂತ್ರಿ ಸ್ವಯಂಕೃತ ಅಪರಾಧ ಎಂದು ತಿರುಗೇಟು ನೀಡಿದ್ದಾರೆ.

ಮುಸ್ಲಿಮರ ಕೋಟಾವನ್ನು ರದ್ದುಪಡಿಸಿ ಒಕ್ಕಲಿಗರು ಮತ್ತು ಲಿಂಗಾಯತರು ತಮಗೆ ನೀಡುವಂತೆ ಸರ್ಕಾರವನ್ನು ಕೇಳಿದ್ದಾರೆಯೇ? ಸಮುದಾಯಗಳು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಕೋಟಾವನ್ನು ಹೆಚ್ಚಿಸುವಂತೆ ಕೇಳಿಕೊಂಡಿವೆ. ಬಿಜೆಪಿ ಸರ್ಕಾರವು ಚುನಾವಣೆಗೆ ಮುಂಚಿತವಾಗಿ ಗೊಂದಲವನ್ನು ಸೃಷ್ಟಿಸುತ್ತಿದೆ ಎಂದು ಕನಕಪುರ ಶಾಸಕ ಡಿಕೆಶಿ ಆರೋಪಿಸಿದರು.

ಸರ್ಕಾರವು ಸಂವಿಧಾನಕ್ಕೆ ಬದ್ಧವಾಗಿದೆ ಮತ್ತು ಎಲ್ಲಾ ವರ್ಗಗಳನ್ನು ರಕ್ಷಿಸುತ್ತದೆ ಎಂದು ಪ್ರಮಾಣ ಮಾಡಿದೆ . ಆದರೆ ಈಗ ಅದು ಒಂದು ವರ್ಗದ ಜನರ ಹಕ್ಕುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಎಲ್ಲರ ಹಿತಾಸಕ್ತಿ ಕಾಪಾಡಲು ಕಾಂಗ್ರೆಸ್ ಬದ್ಧವಾಗಿದೆ ಎಂದರು. ಅಲ್ಪಸಂಖ್ಯಾತರನ್ನು ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯುಎಸ್) ಕೋಟಾದಡಿ ಸೇರಿಸುವ ಮೂಲಕ ರಾಜ್ಯ ಸರ್ಕಾರ ಬ್ರಾಹ್ಮಣರು ಮತ್ತು ಜೈನರಿಗೂ ಅನ್ಯಾಯ ಮಾಡಿದೆ ಎಂದು ಅವರು ಹೇಳಿದರು.

ಇದೇ ವೇಳೆ ಕುಂಚಟಿಗ ಒಕ್ಕಲಿಗ ಸಮುದಾಯದ ಧಾರ್ಮಿಕ ಮುಖ್ಯಸ್ಥ ಶ್ರೀ ನಂಜಾವದೂತ ಸ್ವಾಮೀಜಿ ಮಾತನಾಡಿ, ಕೋಟಾ ಹೆಚ್ಚಳವು ಅಸಮರ್ಪಕವಾಗಿದೆ ಮತ್ತು ನಾವು ಇನ್ನೊಂದು ಸಮುದಾಯಕ್ಕೆ ಮೀಸಲಾದ ಕೋಟಾವನ್ನು ಕಿತ್ತುಕೊಳ್ಳುತ್ತಿದ್ದೇವೆ ಎಂಬ ಆರೋಪ ಕೇಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

Post a Comment

Previous Post Next Post