ಶಿವಮೊಗ್ಗ :10,00,000/- ರೂಗಳ ಒಟ್ಟು 08 ಕಾರು ವಶ ; ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸ್ ತನಿಖಾ ತಂಡ.

 ದಿನಾಂಕಃ 18-10-2023  ರಂದು ಶಿವಮೊಗ್ಗ ಟೌನ್ ಆರ್.ಎಂ.ಎಲ್ ನಗರದ ವಾಸಿ ಶ್ರೀ ಸೈಯದ್ ಸಾದಿಕ್ ರವರ ಟಾಟಾ ಇನ್ನೋವಾ ಕಾರನ್ನು ಆತನ ಪರಿಚಯಸ್ಥನಾದ ಕಿರಣ್ ಕುಮಾರ್ @ ಗುಂಡನು ತೆಗೆದುಕೊಂಡು ಹೋಗಿ ಕಾರನ್ನು ವಾಪಾಸ್ ಕೊಡದೇ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮೋಸ ಮಾಡಿರುತ್ತಾನೆಂದು,  ಸೈಯ್ಯದ್ ಸಾದಿಕ್ ರವರು ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಠಾಣಾ ಗುನ್ನೆ ಸಂಖ್ಯೆ 0380/2023 ಕಲಂ 420 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. 


 ಪ್ರರಕಣದಲ್ಲಿ ಆರೋಪಿ ಹಾಗೂ ಕಾರಿನ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ. ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಅನಿಲ್ ಕುಮಾರ್  ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಶ್ರೀ ಬಾಲರಾಜ್.ಬಿ, ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ-ಎ ಉಪವಿಭಾಗರವರ ಮೇಲ್ವಿಚಾರಣೆಯಲ್ಲಿ, ಶ್ರೀ ಅಂಜನ್ ಕುಮಾರ್, ಪಿಐ ದೊಡ್ಡಪೇಟೆ, ಪೊಲೀಸ್‌ ಠಾಣೆ ರವರ ನೇತೃತ್ವದ  ಶ್ರೀಮತಿ  ಮಂಜಮ್ಮ ಪಿಎಸ್ಐ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ - ಲಚ್ಚಾನಾಯ್ಕ, ಪಾಲಾಕ್ಷನಾಯ್ಕ, ಪಿಸಿ - ರಮೇಶ್,  ನಿತಿನ್ ಮತ್ತು ಚಂದ್ರನಾಯ್ಕ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ. 


 ಸದರಿ ತನಿಖಾ ತಂಡವು ದಿನಾಂಕಃ 06-11-2023  ರಂದು  ಪ್ರಕರಣದ ಆರೋಪಿ ಕಿರಣ್ ಎ @ ಗುಂಡಾ, 35 ವರ್ಷ, ಕಾರು ಚಾಲಕ ವೃತ್ತಿ ಸ್ವಾಮಿ ವಿವೇಕಾನಂದ ಬಡಾವಣೆ, ಶಿವಮೊಗ್ಗ ಟೌನ್ ಈತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ ಅಂದಾಜು ಮೌಲ್ಯ 10,00,000/- ರೂಗಳ  2 ಟೊಯೋಟಾ ಇನ್ನೋವಾ ಕಾರು, 3 ಸ್ವಿಫ್ಟ್  ಡಿಸೈರ್ ಕಾರು ಮತ್ತು 3 ಮಾರುತಿ ಸುಜುಕಿ ಎರ್ಟಿಗಾ ಕಾರು ಸೇರಿದಂತೆ ಒಟ್ಟು 08 ಕಾರುಗಳನ್ನು ಅಮಾನತ್ತು ಪಡಿಸಿ ಕೊಳ್ಳಲಾಗಿರುತ್ತದೆ. 


     ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.


Post a Comment

Previous Post Next Post