ಶಿವಮೊಗ್ಗ:ಆನೆ ದಾಳಿಯಿಂದ ಹಾಳಾಗಿರುವ ಪ್ರದೇಶಕ್ಕೆಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕಿ ಶ್ರೀಮತಿ ಶಾರದಾ ಪೂರ್ಯಾನಾಯ್ಕ್ ರವರು ಭೇಟಿ.!

 

ಬರಗಾಲದಿಂದ ರೈತರು ತತ್ತರಿಸಿದ್ದು ಬಂದಂತಹ ಅಲ್ಪ ಸ್ವಲ್ಪ ಬೆಳೆಯು ಆನೆ ದಾಳಿಯಿಂದಾಗಿ   ಹಾಳಾಗಿದ್ದು ರೈತರು ಕಂಗಾಲಾಗಿದ್ದು,ಸದರಿ ಆನೆ ದಾಳಿಯಿಂದ ಹಾಳಾಗಿರುವ ಪ್ರದೇಶಕ್ಕೆಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕಿ ಶ್ರೀಮತಿ ಶಾರದಾ ಪೂರ್ಯಾನಾಯ್ಕ್ ರವರು  ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು,ಶಾಸಕರು ಶಿವಮೊಗ್ಗ ತಾಲೂಕಿನ ಮಂಜರಿಕೊಪ್ಪ, ಮಲೆ ಶಂಕರ ಸಂಪಿಗೆ ಹಳ್ಳ, ತಮ್ಮಡಿಹಳ್ಳಿ ಕೂಡಿ,ಎರೆಬೀಸು ಗ್ರಾಮಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ರೈತರ ಮನವಿ ಆಲಿಸಿದರು,ರೈತರ ಬೆಳೆಗಳನ್ನು ಹಾಳಾಗಿದ್ದು ತುರ್ತಾಗಿ ಪರಿಹಾರದ ವ್ಯವಸ್ಥೆ ಮಾಡುವಂತೆ ಹಾಗೂ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ ಸೂಚನೆ ನೀಡಿದರು, ಈ ಸಂದರ್ಭದಲ್ಲಿ ಮುಖಂಡರಾದ ಬಸಪ್ಪ ಗೌಡರು,ಕೆರೋಡಿ ನಾಗರಾಜ್,ನಾರಾಯಣ ಗೌಡ, ಪ್ರದೀಪ್ ಎಸ್ ಹೆಬ್ಬೂರ್, ಮತ್ತಿತರರರು ಇದ್ದರು,ಆನೆ ದಾಳಿಯಿಂದ ಪುರದಾಳು, ಕೌಲಾಪುರ,ಸಂಪಿಗೆಹಳ್ಳ, ಮಂಜರಿಕೊಪ್ಪ, ಮಲೇಶಂಕರ, ಏರೆಬಿಸು, ಕೂಣೆ ಹೊಸೂರು, ಆಲದೇವರ ಹೊಸೂರು ಬಾಗದಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟ ಆಗಿದೆ,

*ಬೆಳೆ ನಷ್ಟ ದಿಂದ ರೈತರು ಅತೀವ ತೊದರೆ ಪಡುತ್ತಿದ್ದು ಕೂಡಲೇ ಸರ್ಕಾರ ಮತ್ತು ಆರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಮತ್ತು ಆನೆ ಹಾವಳಿ ತಡೆಯಲು ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ಎದುರು ಬೃಹತ್ ಪ್ರತಿಭಟನೆ ಮಾಡಲಾಗುವುದು,

 ಪ್ರದೀಪ್ ಎಸ್ ಹೆಬ್ಬೂರ್ 

ಉಪಾಧ್ಯಕ್ಷರು, ಪುರದಾಳು ಗ್ರಾಮ ಪಂಚಾಯತ್ 

Post a Comment

Previous Post Next Post