ಪಿಎಂ ಸ್ವಾನಿಧಿ ರಾಜ್ಯ ಸಂಚಾಲಕರಾದ ಮಾಜಿ ಸಚಿವರಾದ ರಾಮದಾಸ್‌ಗೆ ಸನ್ಮಾನ

 ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಡೆದ ಪಿಎಂ ಸ್ವಾನಿಧಿ ಕಾರ್ಯಕ್ರಮ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಂವಾದಲ್ಲಿ ಮುಖ್ಯ ಅತಿಥಿಗಳಾಗಿ ಪಿಎಂ ಸ್ವಾ ನಿಧಿ  ರಾಜ್ಯ ಸಂಚಾಲಕರಾಗಿರುವ  ಮಾಜಿ ಸಚಿವರಾದ ರಾಮದಾಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ನಂತರ ಮಾತನಾಡಿ ಪಿಎಂ ಸ್ವಾನಿಧಿ ಪ್ರಯೋಜನಗಳನ್ನು ಪತ್ರಿಕಾ ವಿತರಕರಿಗೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ವಿವರಿಸಿದರು ಕಾರ್ಯಕ್ರಮದ ನಂತರ ಕರ್ನಾಟಕ ರಾಜ್ಯ ಪತ್ರಿಕ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಮಾಜಿ ಸಚಿವರಾದ  ರಾಮದಾಸ್ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಮಹಾನಗರ ಪಾಲಿಕೆಯ  ಸಿಇಓ ಆದ ಶ್ರೀಮತಿ ಅನುಪಮಾ ಟಿಆರ್‌ಸಿಓ ಆದ   ರತ್ನಾಕರ್ ಹಾಗೂ ಕಂಪ್ಯೂಟರ್ ಆಪರೇಟರ್ ಆದ ಆರಿಫ್ ಅವರಿಗೂ ಸಹ ಸನ್ಮಾನ ಮಾಡಲಾಯಿತು

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಎನ್.ಮಾಲತೇಶ್  ಪ್ರಧಾನ ಕಾರ್ಯದರ್ಶಿಯಾದ ಮುಕ್ತಾರ್ ಅಹಮದ್(ನಜೀರ್) ಹಾಗೂ ಸಂಘದ ಸದಸ್ಯರಾದ ಪಾರ್ಥಿಬನ್, ದುರ್ಘೋಜಿ  ಸೀತಾರಾಮ್, ಮುಸ್ತಫ, ಚಂದ್ರು, ಮಂಜುನಾಥ್ ಪಾಟೀಲ್, ಅಜಿಜುಲ್ಲಾ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು

Post a Comment

Previous Post Next Post