ರೈಲ್ವೆ ಅಧಿಕಾರಿಗಳ ನಿರ್ಲಕ್ಷ್ಯ-ವಿದ್ಯಾರ್ಥಿನಿ ನಿಗೂಢ ಸಾವು

 ಶಿವಮೊಗ್ಗದ ಕೋಟೆ ಗಂಗೂರಿನಲ್ಲಿ ನಡೆಯುತ್ತಿರುವ ರೈಲ್ವೆ ಕಾಮಗಾರಿಗಾಗಿ ಅಗೆಯಲಾಗಿದ್ದ  8 ಅಡಿ ಗುಂಡಿಯಲ್ಲಿ 11 ವರ್ಷದ ಐದನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಶಿವಮೊಗ್ಗದ ಕೋಟೆ ಗಂಗೂರಿನಲ್ಲಿ ಶ್ರೀನಿವಾಸ ಎಂಬುವರು ಕೆಲಸಕ್ಕೆ ಹೋಗಿದ್ದಾಗ ಶಾಲೆ ಮುಗಿಸಿ ವಾಪಾಸ್ ಆಗಿದ್ದಳು. ಮನೆ ಬಾಗಿಲು ಹಾಕಿದಾಗ ಅಪ್ಪ ಮತ್ತು ಅಮ್ಮ ಕೆಲಸ ಮಾಡುವ ಅನಿಲ್ ಕುಮಾರ್ ಅವರ ಜಮೀನಿನಲ್ಲಿ ಕೆಲಸ ಮಾಡುವ ಜಾಗಕ್ಕೆ ತೆರಳಿ ಮನೆಯ ಬೀಗ ಪಡೆದು ಮನೆಗೆ ವಾಪಾಸ್ ಆಗುತ್ತಿದ್ದಳು.

ಬರುವಾಗ ರೈಲ್ವೆ ಕಾಮಗಾರಿಗಾಗಿ ತೆಗೆಯಲಾಗಿರುವ ಏಳು ಗುಂಡಿಯಲ್ಲಿ ನಿಗೂಢವಾಗಿ ಬಿದ್ದಿದ್ದಾಳೆ.  ವಿದ್ಯಾರ್ಥಿನಿಯ ದೊಡ್ಡಪ್ಪನಿಗೆ ಪೋಷಕರು ಕರೆ ಮಾಡಿದಾಗ ಮನೆಗೆ ಬಂದಿಲ್ಲ ಎಂದು ಹೇಳಿದ್ದಾರೆ. ಪೋಷಕರು ಮಗಳಿಗಾಗಿ ಹುಡುಕಿದ್ದಾರೆ ಸರ್ವೆ ನಂ 107 ರಲ್ಲಿರುವ ರೈಲ್ವೆ ಅಂಡರ್ ಪಾಸ್ ನ ಹತ್ತಿರ ಇರುವ ಗುಂಡಿಯನ್ನ ತೆಗೆದಿದ್ದು ಆ ಗುಂಡಿಯಲ್ಲಿ ನೀರು ನಿಂತಿದ್ದು ಸೊಪ್ಪು ತೊಳೆಯುವಾಗ ವಿದ್ಯಾರ್ಥಿನಿಯ ಸಮವಸ್ತ್ರ ಕಂಡಿದೆ.

ತಂದೆ ಶ್ರೀನಿವಾಸ್ ತಕ್ಷಣ ನಂಜಪ್ಪ ಲೈಫ್ ಕೇರ್ ಗೆ ತೆಗೆದುಕೊಂಡು ಹೋದಾಗ ವೈದ್ಯರು ಚಿತ್ರಗಳು ಸಾವನ್ನಪ್ಪಿರುವುದು ದೃಢಪಟ್ಟಿದೆ. ಗುಂಡಿ ಎಂಟು ಅಡಿ ಆಳವಿದ್ದು ಬಿದ್ದರೆ ಸಾವನ್ನಪ್ಪುತ್ತಾರೆ ಎಂದು ಗೊತ್ತಿದ್ದರೂ ಮುಚ್ಚದೆ ನಿರ್ಲಕ್ಷ ತೋರಿದ ರೈಲ್ವೆ ಅಧಿಕಾರಿಗಳಾದ ಚೇತನ್, ಇಲಾಖೆ ಇಂಜಿನಿಯರ್ ಹರ್ಷವರ್ದನ್, ಗುತ್ತಿಗೆದಾರ ಸತ್ಯನಾರಯಣ ವಿರುದ್ಧ   ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ

ಅನಿಲ್ ಕುಮಾರ್ ತೋಟದಲ್ಲಿ ಪೋಷಕರು ಸೊಪ್ಪು ತೆಗೆಯುವ ಕೆಲಸ ಮಾಡುತ್ತಿದ್ದರು. ಮಗಳನ್ನ ಗಮನಿಸದ ಪೋಷಕರಿಗೆ ಮಗಳ ನಿಗೂಢವಾಗಿ ಗುಂಡಿಗೆ ಬಿದ್ದಿದ್ದು ಗಮನಕ್ಕೆ ಬಾರದೆ ವಿದ್ಯಾರ್ಥಿನಿ ಸಾವುಕಂಡಿದ್ದಾಳೆ. ಪೊಲೀಸರ ತನಿಖೆಯಿಂದ ಸತ್ಯ ಹೊರಬರಬೇಕಿದೆ. ಅಧಿಕಾರಿಗಳ ನಿರ್ಲಕ್ಷ್ಯ ವೂ ಇಲ್ಲಿ ಎದ್ದು ಕಾಣುತ್ತಿದೆ.


Post a Comment

Previous Post Next Post