ರಸ್ತೆಗಿಳಿದ ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು

 ಶೈಕ್ಷಣಿಕ ತರಗತಿ ಆರಂಭಿಸುವಂತೆ ಆಗ್ರಹಿಸಿ ಸಹ್ಯಾದ್ರಿ ಕಾಲೇಜಿನಲ್ಲಿ ಕಳೆದ ಗುರುವಾರ ಸಾಂಕೇತಿಕವಾಗಿ ನಡೆದ ಪ್ರತಿಭಟನೆ ಇಂದು ರಸ್ತೆಗೆ ಇಳಿಯುವಂತೆ ಮಾಡಿದೆ. ಸಹ್ಯಾದ್ರಿ ಕಾಲೇಜಿನ ಎದುರು ಕಲಾ ಕಾಲೇಜಿನ ಮೂರು ವರ್ಷದ ಪದವಿ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿದರು.

ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳ ಹೋರಾಟಕ್ಕೆ  ಇನ್ನೂ  ನ್ಯಾಯಾ ಸಿಕ್ಕಿಲ್ಲ,   ಕುವೆಂಪು ವಿ.ವಿ.ಕುಲಪತಿಗಳು ಮತ್ತು  ರಿಜಿಸ್ಟ್ರಾರ್  ಸುಳ್ಳುಗಳ ಮೇಲೆ ಸುಳ್ಳು ಹೇಳುತ್ತಿದ್ದಾರೆ,    ಸೆಪ್ಟೆಂಬರ್ 9 ರಿಂದ ಕಾಲೇಜು ಆರಂಭವಾದರೂ ಶೈಕ್ಷಣಿಕ ವರ್ಷ ಆರಂಭವಾಗಿಲ್ಲವೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಇದುವರೆಗೂ  ಅತಿಥಿ  ಉಪನ್ಯಾಸಕರ ನೇಮಕ ಮಾಡಿಲ್ಲ,  ಕಳೆದ ಗುರುವಾರ ನೂರಾರು ವಿದ್ಯಾರ್ಥಿಗಳು  ಪ್ರತಿಭಟನೆ ನಡೆಸಲಾಗಿಲ್ಲ.   ಸ್ಥಳಿಯ ಶಾಸಕರು ಮತ್ತು ಇತರರೆಲ್ಲಾರೂ ಭಾಗಿಯಾಗಿದ್ದ ಪ್ರತಿಭಟನೆಯಲ್ಲಿ ರಿಜಿಸ್ಟರ್ ಮತ್ತು  ವಿ.ಸಿ.ಗಳು ಶನಿವಾರದೊಳಗೆ ಉಪನ್ಯಾಸಕರ ನೇಮಕ ಮಾಡುವುದಾಗಿ ಅಶ್ವಾಸನೆ ನೀಡಿದ್ದರು.  ಆದರೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ, ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಗ್ರಾಮೀಣ ಪ್ರದೇಶದಿಂದ ಬರುವ ಬಡ ಮತ್ತು ಮದ್ಯಮ ವರ್ಗದ ಕಾಲೇಜು ವಿದ್ಯಾರ್ಥಿಗಳು  ದಿನ 100-200. ಬಸ್ ಚಾರ್ಜ್ ಹಾಕಿಕೊಂಡು ಬಂದು  ಉಪನ್ಯಾಸಕರಿಲ್ಲದ ಕಾರಣ ಕಾಲೇಜಿನ ಖಾಲಿ ಕೊಠಡಿ ನೋಡಿಕೊಂಡು ಅಡ್ಡಾಡಿಕೊಂಡು ವಾಪಾದ್ ಹೋಗುವಂತಾಗಿದೆ.


ವಿಶ್ವ ವಿದ್ಯಾಲಯದ ಈ ದೋರಣೆಯನ್ನ ಖಂಡಿಸಿ ಇಂದು ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟಿಸಿದ್ದಾರೆ.   ಉಪನ್ಯಾಸಕರು ಬಾರದೆ ಇದ್ದರೆ,   ಬರಿ ವಿದ್ಯಾರ್ಥಿಗಳು ಮಾತ್ರವಲ್ಲ  ವಿದ್ಯಾರ್ಥಿಗಳ ಪೋಷಕರು ಸಹ ಬೀದಿಗಿಳಿಯಲಿದ್ದಾರೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

Post a Comment

Previous Post Next Post