ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲಿನಲ್ಲಿ ಡ್ರೈನೇಜ್ ಸಮಸ್ಯೆ.!; ಮಹಾನಗರ ಪಾಲಿಕೆಯ ನಿರ್ಲಕ್ಷ್ಯವೇ ಕಾರಣನಾ.!

 ಮಲೆನಾಡು ಎಂದೇ ಪ್ರಸಿದ್ದೀ ಹೊಂದಿರುವ ಶಿವಮೊಗ್ಗದ ಬಸ್ ಸ್ಟಾಂಡ್ ಬಳಿ ಡ್ರೈನೇಜ್ ಲೀಕ್ ಆಗಿ  ಸಾರ್ವಜನಿಕರಿಗೆ ಓಡಾಡಲು ತೀರ್ವ ಸಮಸ್ಯೆಯಾಗುತ್ತಿದೆ. ಜನ ಸಾಮಾನ್ಯರೆಲ್ಲರು ಬಸ್ ಸ್ಟಾಂಡ್ ಮೂಲಕವೇ ಅತೀ ಹೆಚ್ಚು ಓಡಾಡುವುದರಿಂದ ಡ್ರೈನೇಜ್ ಲೀಕ್ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಒಡಾಡುವ  ಪರಿಸ್ಥಿತಿ ಉಂಟಾಗಿದೆ.

  ಶಿವಮೊಗ್ಗದ ಬಸ್ ಸ್ಟಾಂಡ್ ಬಳಿ ಕಂಡುಬಂದ  ಡ್ರೈನೇಜ್ ಸಮಸ್ಯೆ

ಸ್ಮಾರ್ಟ್  ಸಿಟಿಯಾಗಿ  ಅಭಿವೃದ್ದಿ ಹೊಂದುತ್ತಿರುವ ಶಿವಮೊಗ್ಗದಲ್ಲಿ ಈ ರೀತಿ ಆಗಿರುವುದು ಮಲೆನಾಡಿನ ಘನತೆಗೆ ಧಕ್ಕೆಯನ್ನುಂಟು  ಮಾಡಿದೆ.  ಮಲೆನಾಡಿಗೆ ಬರುವ ಅಥಿತಿಗಳಿಗೆ ಇದೇನ ಶಿವಮೊಗ್ಗ ಮಹಾನಗರ ಪಾಲಿಕೆ ಕೊಡುವ ಅತ್ಯುತ್ತಮ ಸ್ವಾಗತ.! ಇವರ ಈ ನಿರ್ಲಕ್ಷ್ಯದಿಂದ ಮಲೆನಾಡು ಅಲ್ಲಲ್ಲಿ ಡ್ರೈನೇಜ್ ನಾಡು ಆಗುತ್ತಿದೆಯೇ.! ಆದಷ್ಟು ಶೀಘ್ರವಾಗಿ ಮಹಾನಗರ ಪಾಲಿಕೆ ಇದರ ಬಗ್ಗೆ ಗಮನಹರಿಸಿ  ಸಮಸ್ಯೆಗೆ ಒಂದು ಪರಿಹಾರ ನೀಡಬೇಕು. ಇಲ್ಲದಿದ್ದರೆ ಮಲೆನಾಡಿನ ಮರ್ಯಾದೆ ಮಣ್ಣು ಪಾಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.!


Post a Comment

Previous Post Next Post