ನ.14 ರಂದು 70 ನೇ ಅಖಿಲ ಭಾರತ ಸಹಕಾರ ಸಪ್ತಾಹ

 ಮಾಜಿ ಪ್ರಧಾನಿ ನೆಹರೂ ದಿನ ಮಕ್ಕಳ ದಿನಾಚರಣೆಯ ದಿನದಂದು 70 ನೇ ಅಖಿಲ ಭಾರತೀಯ  ಸಹಕಾರಿ ಸಪ್ತಾಹವನ್ನ ನಗರದ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿನಡೆಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್ ಎಂ ಮಂಜುನಾಥ್ ಗೌಡ ಏಳು ದಿನ ಈ ದಿನಾಚರಣೆ ನಡೆಯಲಿದೆ. ಜಿಲ್ಲಾ ಸಹಕಾರಿ ಯೂನಿಯನ್ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮ ಏಳುದಿನ ವಿವಿಧ ಜಿಲ್ಲೆಯಲ್ಲಿ ನಡೆದರೆ ಜಿಲ್ಲೆಯ ಏಳು ದಿನ ವಿವಿಧ ತಾಲೂಕಿನಲ್ಲಿ ನಡೆಯಲಿದೆ ಎಂದರು.

ಸಿಎಂ ನೇತೃತ್ವದಲ್ಲಿ ಉದ್ಘಾಟಿಸ ಬೇಕಿತ್ತು. ಆದರೆ ಬರ ಹಿನ್ನಲೆಯಲ್ಲಿ ಸಿಎಂ‌ಭಾಗಿಯಾಗುತ್ತಿಲ್ಲ.  ಸಹಕಾರಿ ಸಚಿವ ರಾಜಣ್ಣ ಉದ್ಘಾಟಿಸಲಿದ್ದಾರೆ, ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಚಿತ್ರದುರ್ಗದ ಉಸ್ತುವಾರಿ ಸುಧಾಕರ್ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾಗಿಯಾಗಲಿದ್ದಾರೆ. ಜಿ.ಡಿ. ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.

5 ಟ್ರಿಲಿಯನ್ ಆರ್ಥಿಕ ಗುರಿ ಮುಟ್ಟಬೇಕು ಇದರ ಬಗ್ಗೆ ಏಳುದಿನ ನಡೆಯಲಿದೆ. ಮೊದಲನೇ ದಿನ ಸಂಪನ್ಮೀಲ ವ್ಯಕ್ತಿಗಳು ನಡೆಸುತ್ತಾರೆ. ಸರ್ಕಾರವೇ ಈ ಕಾರ್ಯಕ್ರಮ ನಡೆಸುತ್ತಿದೆ. ಸಹಕಾರಿ ಸಂಸ್ಥೆಗಳ ವಸ್ತಪ್ರದರ್ಶನ, ರೈತರಿಹೆ ಬೇಕಾದ ವಸ್ತುಗಳ ವಸ್ತು ಪ್ರದರ್ಶನ, ಚಿಕ್ಕದಾಗಿ ಚೊಕ್ಕದಾಗಿ ಮಾಡಲಾಗುತ್ತದೆ.

ಹಾಲು ಒಕ್ಕೂಟ, ಡಿಸಿಸಿ ಬ್ಯಾಂಕ್  ಮ್ಯಾಮ್ ಕೋಸ್ ಸಂಸ್ಥೆ, ಸೊಸೈಟಿ, ಮಹಿಳಾ ಸಹಕಾರಿ ಸಂಸ್ಥೆಗಳಿವೆ. ಆತ್ಮವಲೋಕನ ಕಾರ್ಯಕ್ರಮ ನಡೆಯಲಿದೆ. ಶಿವಮೊಗ್ಗದಲ್ಲಿ ನ.14 ರಂದು ಸಹಕಾರ ಸಂಘ ಸಂಸ್ಥೆಗಳಲ್ಲಿ ಇತ್ತೀಚಿನ ಬೆಳವಣಿಗೆಗಳು ಕುರಿತು ಕಾರ್ಯಕ್ರಮ ನಡೆದರೆ,

ನ.15 ರಂದು  ರಾಯಚೂರು, ನ.16 ರಂದು ಶಿರಸಿ, ನ.17 ರಂದು ಹುಬ್ಬಳ್ಳಿಯಲ್ಲಿ ಸರಳ ವ್ಯಾಪಾರ ಪ್ರಕ್ರಿಯೆ ಮತ್ತು ಉದಯನ್ಮುಖವಲಯಗಳ  ಕುರಿತು ಕಾರ್ಯಕ್ರಮ ನಡೆಯಲಿದೆ. ನ.18 ರಂದು ಮಂಗಳೂರಿನಲ್ಲಿ ಸಹಕಾರಿ ಸಹಭಾಗಿತ್ವ ಬಲಪಡಿಸುವ ವಿಚಾರ ನಡೆಯಲಿದೆ

ಬೆಂಗಳೂರಿನಲ್ಲೂ ಕಾರ್ಯಕ್ರಮ ನಡೆಯಲಿದೆ. ಏಳು ಜಿಲ್ಲೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನ ಸಮಾರೋಪ ಸಮಾರಂಭವನ್ನ ಬಿಜಾಪುರದಲ್ಲಿ ನಡೆಯಲಿದೆ. ಜಿಲ್ಲೆಯಲ್ಲಿ ಏಳು ದಿನ ಏಳು ತಾಲೂಕಿನ ಸಹಕಾರಿ ಸಂಸ್ಥೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ನ. 15 ರಂದು ಶಿಕಾರಿಪುರ, ನ.16 ರಂದು ಭದ್ರಾವತಿ, ನ.17 ರಂದು ಸೊರಬ, ನ.18 ತೀರ್ಥಹಳ್ಳಿ,  ನ.19 ರಂದು ಸಾಗರ, ನ. 20 ರಂದು ಹೊಸನಗರದಲ್ಲಿ ಕಾರ್ಯಕ್ರಮ ನಡೆಯಲಿದೆ.





Post a Comment

Previous Post Next Post