ಜಿಲ್ಲ ಉಸ್ತುವಾರಿ ಸಚಿವ ಯಾರು ಅಂತನೇ ಗೊತ್ತಿಲ್ಲ-ಮತ್ತೊಮ್ಮೆ ಅಸಮಾಧಾನ ಹೊರಹಾಕಿದ ಬೇಳೂರು

 ಬಿಜೆಪಿಗೆ ಕ್ಲಾಸ್ ತೆಗೆದುಕೊಳ್ಳುವ ಜೊತೆಗೆ ಶಾಸಕ ಬೇಳೂರು ಗೋಪಾಲ ಕೃಷ್ಣ ಬೇಳೂರು ಜಿಲ್ಲಾ ಉಸ್ತುವಾರಿ ಸಚಿವ ಯಾರು ಅಂತನೇ ಗೊತಗತಿಲ್ಲ ಎಂದು ಮತ್ತೊಮ್ಮೆ ಅಸಮಾಧಾನ ಹೊರಹಾಕಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ನಾಯಕರ ಬರ ಅಧ್ಯಾಯನ ಸಂತೋಷವೇ ಆದರೆ ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದು ಖಂಡನೀಯ  ವಿಪಕ್ಷ ನಾಯಕನ ಆಯ್ಕೆಯಿಲ್ಲದೆ ಬರ ಅಧ್ಯಾಯನ ನಗೆ ಪಾಟಲಾಗಿದೆ. ನೆರೆಯಾದಾಗ ಎಷ್ಟು ಜನ ಸಂತ್ರಸ್ತರಿಗೆ ಸಮರ್ಪಕ  ಹಣ ಹಂಚಿದ್ದೀರಾ ಎಂದು ಗುಡುಗಿದರು.

ಇವರನ್ನ ನಂಬಿ ಬಿಜೆಪಿ 66 ಕ್ಕೆ ಕುಸಿದಿದೆ

ಈಶ್ವರಪ್ಪ, ಕಟೀಲರನ್ನ ನಂಬಿ ಬಿಜೆಪಿ 66 ಸ್ಥಾನಕ್ಕೆ ಕುಸಿದಿದೆ. ನೀವು ಇಂದು ಕಾಂಗ್ರೆಸ್ ಸರ್ಕಾರ ಬಂದಿದೆ ರಾಜಕಾರಣ ಮಾಡಬೇಡಿ, ಎಲ್ಲಾ ಮಂತ್ರಿಗಳು ಬರ ವೀಕ್ಷಣೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಬಿಜೆಪಿ ರಾಜ್ಯ ಸರ್ಕಾರ ಅಸ್ಥಿರ ಮಾಡಲು ಹೊರಟಿದೆ. ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಹೊರಟಿದೆ. ಅವರ ಪಕ್ಷದ ಶಾಸಕರು ಕಾಂಗ್ರೆಸ್ ಕಡೆ ಮುಖಮಾಡಿದ್ದಾರೆ. ಕುಮಾರಸ್ವಾಮಿಗೆ ಶಾಸಕರನ್ನ ರೆಸಾರ್ಟ್ನಲ್ಲಿ ಕೂಡಿಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ. ಬಿಜೆಪಿಗೂ ಅವರ ನಾಯಕರನ್ನ ಕೂಡಿಹಾಕಿಕೊಳ್ಳುವ ಸ್ಥಿತಿ ಬಂದಿದೆ.

ಮಾಜಿ ಸಿಎಂ ಕುಮಾರ್ ಸ್ವಾಮಿ‌ ವಿಲ ವಿಲ ಎನ್ನುತ್ತಿದ್ದಾರೆ.

ಮಾಜಿ ಸಿಎಂ‌ ಕುಮಾರ ಸ್ವಾಮಿ ಮೋದಿ ಬಳಿ ರಾಜ್ಯದಲ್ಲಿ ಕಾಂಗ್ರೆಸ್ ತೆಗೆಯುವ ಶಪಥ ಮಾಡಿ ಬಂದಿರಬಹುದು  ಎಂಬ ಅನುಮಾನವಿದೆ.  ಆದರೆ ಕರ್ನಾಟಕದಲ್ಲಿ ವಿಲ ವಿಲ ಒದ್ದಾಡುತ್ತಿದ್ದಾರೆ. ಈಶ್ವರಪ್ಪ ಭ್ರಷ್ಠಾಚಾರದ ಬಗ್ಗೆ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತಾಗಿದೆ ಪುತ್ರನಿಗೆ ನೆಲೆ ಕಾಣಿಸಿಕೊಳ್ಳಲು ಅವರಿಗೆ ಆಗಿಲ್ಲ. ಕಟೀಲು ಮತ್ತು ಈಶ್ವರಪ್ಪನವರ ಮಾತು ಕಟ್ಟಿ ಕೊಂಡು ಹೋದರೆ 65 ಸ್ಥಾನ ಪಡೆದ ಬಿಜೆಪಿ ಮುಂದಿನ ದಿನಗಳಲ್ಲಿ 35 ಜ್ಕೆ ಕುಸಿಯಲಿದೆಎಂದು ಭವಿಷ್ಯ ನುಡಿದರು.

ಬಸ್ ಸ್ಟ್ಯಾಂಡ್ ರಾಘು

ಪಿಎಸ್ ಐ ಹಗರಣದಲ್ಲಿ ವಿಜೇಂದ್ರನೇ ಪಿನ್ ಕಿಂಗ್ ಎಂಬ ಆರೋಪ ಕೇಳಿ ಬಂದಿತ್ತು. ಆಗಲೇ ಏನೂ ಮಾಡಲಿಲ್ಲ. ಆದರೆ ಬಿಜೆಪಿ ಈ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ತನಿಖೆ ನಡೆಯಲಿ ಎಂದು ಒತ್ತಾಯಿಸಲು ಅವರಿಗೆ ಅಧಿಕಾರವಿಲ್ಲ ಎಂದ ಅವರು, ಸಂಸದ ರಾಘವೇಂದ್ರ ನಾಲ್ಕು ವರ್ಷದ ವರೆಗೆ ಸುಮ್ಮನಿದ್ದು ನಂತರ ಚುನಾವಣೆ ಹತ್ತಿರಬರುತ್ತಿದ್ದಂತೆ, ರೈಲ್ಬೆ ತಂದೆ ಸೇತುವೆ ತಂದೆ ರಸ್ತೆ ತಂದೆ ವಿಮಾನ ನಿಲ್ದಾಣ ತಂದೆ ಎಂದು ಹೇಳ್ತಾರೆ.

ತುಮಕೂರು ಶಿವಮೊಗ್ಗ ನಡುವಿನ ಹೈವೆ ಬರಲು 18-20 ವರ್ಷ ಬೇಕಾ ಎಂದು ಪ್ರಶ್ನಿಸಿದ ಅವರು  ದಿನಕ್ಕೆ 20 ಕಿಮಿ ಹೈವೆ ಕಾಮಗಾರಿ ಮುಗಿಯಲಿದೆ  ಎಂದು ಹೇಳುವ  ಬಿಜೆಪಿ ಈ ಹೈವೆಯನ್ನ  ಐದು ವರ್ಷದಲ್ಲಿ ಮುಗಿಸಬೇಕಿತ್ತು. ಆದರೆ ಹೈವೆ ಕಾಮಗಾರಿ ಆಮೆ ಗತಿ ಅನುಸರಿಸುತ್ತಿದೆ. ಸಂಸದರು ಚುನಾವಣೆ ಮೂಡಿನಲ್ಲಿದ್ದಾರೆ. ಬಸ್ ಸ್ಟ್ಯಾಂಡ್ ರಾಘು ಈಗ ಅವರ‌ ಬೆಂಬಲಿಗರಿಗೆ ಏರ್ ಪೋರ್ಟ್ ರಾಘು ಎಂದು ಕರೆಯಿರಿ ಎಂದು ಹೇಳಿಕೊಡುತ್ತಿದ್ದಾರೆ. ಏರ್ ಪೋರ್ಟ್ ಕೀರ್ತಿ ಯಡಿಯೂರಪ್ಪರಿಗೆ ಸಲ್ಲುತ್ತದೆ. ಅವರು ಈಗಲೂ ಬಸ್ ಸ್ಟ್ಯಾಂಡ್ ರಾಘು ಎಂದರು.

ಡಿಸಿಸಿ ಬ್ಯಾಂಕ್ ಹುದ್ದೆಗಳು ತನಿಖೆ ಯಾಗಬೇಕು

ಡಿಸಿಸಿ ಬ್ಯಾಂಕ್ ಹಿಂದಿನ ಅಧ್ಯಕ್ಷರು 40 ಲಕ್ಷ ಹಣ ಲಂಚ ಪಡೆದು ಕೆಲಸ ನೀಡಿದ್ದಾರೆ. ಬ್ಯಾಕ್ ಸಾಲ ಪಡೆದು ಲಂಚ ನೀಡಿರುವ ಉದಾಹರಣೆ ಇದೆ. ಈ ಹಗರಣದಲ್ಲಿ ಸಂಸದರ ಪಾಲು ಇದೆ. ಸಂಸದರ ಮೇಲೆ ಷಡಾಕ್ಷರಿ ವರ್ಗಾವೇ ದೊಡ್ಡವಿಚಾರವಿಲ್ಲ ಆದರೆ ಅವರ ಭ್ರಷ್ಠಾಚಾರವಮ್ನ ತನಿಖೆ ಆಗಬೇಕು. ಷಡಾಕ್ಷರಿಯ ಮೇಲೆ ಇಡಿ ಐಟಿಯ ಮೇಲೆ ಬಿಜೆಪಿ ಬಿಡ್ತಾ ಇಲ್ಲ ಕೇವಲ ಮಂಜುನಾಥ್ ಗೌಡರು ಮಾತ್ರ ಕಾಣ್ತಾ ಇದ್ದೀಯ ಎಂದು ವ್ಯಂಗ್ಯವಾಡಿದರು.

ಉಸ್ತುವಾರಿ ಸಚಿವರು ಆಸಕ್ತಿ ತೆಗೆದುಕೊಳ್ಳಬೇಕು. ನನಗೆ ಆಸಕ್ತಿ ಇದೆ ಅವರಿಗೆ ಆಸಕ್ತಿಯಾಕೆ ಇಲ್ಲ ಗೊತ್ತಿಲ್ಲ. ತನಿಖೆ‌ಮಾಡಿದರೆ ಸಂಸದರ ಪಾಲು ಹೊರಗೆ ಬರಲಿದೆ. ಹಿಂದಿನ ಡಿಸಿಸಿ ಬ್ಯಾಂಕ್ ಅಧ್ಯಕ್ಷ‌ ಚನ್ನವೀರಪ್ಪ ಸಂಸದರ ಚೇಲಾ ಆಗಿದ್ದರು. ಹಾಗಾಗಿ ತನಿಖೆಯಾಗಬೇಲು ಎಂದರು.

ಐ ಅಮ್ ಫಿಟ್ ಫಾರ್ ಲೋಕಸಭಾ ಎಲೆಕ್ಷನ್

ಪ್ರಜಾಪ್ರಭುತ್ವದಲ್ಲಿ ಅಧಿಕಾರ ಪಡೆಯಲು ಹಕ್ಕಿದೆ. ಇಸ್ಮೈಲ್ ಖಾನ್ ಸಹ ಸ್ಪರ್ಧಿಸುತ್ತಿದ್ದಾರೆ.ನಾನು ಪ್ರಭಲ ಆಸಕ್ತಿಯಾಗಿದ್ದೀನಿ. ಶಾಸಕನಾಗಿ ಮೂರು ಬಾರಿ ಆಯ್ಕೆಯಾಗಿದ್ದೀನಿ. ನಾನು ಒಂಟಿ ಅಲ್ಲ. 10-12 ಜನ ಹೆಸರಿನ ಪಟ್ಟಿ ಹೈಕಮ್ಯಾಂಡ್ ಗೆ ಹೋಗಿದೆ. ಗೀತಾಶಿವರಾಜ್ ಕುಮಾರ್ ವಿರುದ್ಧ ನಾನಿಲ್ಲ. ಯಾರ ಬಂದರು ಒಂದೇ ಟಿಕೆಟ್ ಹಾಗಾಗಿ ಕೇಳಿದ್ದೇನೆ. ಪ್ರಬಲ ಫೈಟ್ ಗೆ ನಾನೇ ಸರಿ ಎಂದರು.

ಕುಮಾರ್ ಬಂದರೆ ಏನು ವ್ಯತ್ಯಾಸವಿಲ್ಲ. ಆದರೆ ಸಾದಕ ಬಾದಕ ನೋಡಬೇಕು. ಸಚಿವ ಸ್ಥಾನ 20:20 ರ ಅವಧಿ‌ಗೆ ಸೀಮಿತವಾಗಬೇಕು ಎಂದರು. ಜಿಲ್ಲಾ ಸಚಿವರ ಜೊತೆ ಫೈಟ್ ಏನೂ ಇಲ್ಲ. ಆದರೆ  ಯಾರಿಂದಲೂ ಬೇಳೂರು ಗೆದ್ದಿಲ್ಲ. ನಾನು ಗೆದ್ದಿದ್ದು ಜನರಿಂದ ಮಾತ್ರ. ಜಿಲ್ಲಾ ಉಸ್ತುವಾರಿ ಯಾರು ಅಂತ ಗೊತ್ತಿಲ್ಲ ನನಗೆ ಕೆಡಿಪಿ ಸಭೆಯಲ್ಲಿ ಭಾಗಿಯಾಗೊಲ್ಲವೆಂದರು.

ಜಿಲ್ಲಾ ಉಸ್ತುವಾರಿ ಸಚಿವರು ಯಾರು ಎಂದು ಗೊತ್ತಿಲ್ಲ

ಜಿಲ್ಲಾ ಉಸ್ತುವಾರಿ ಸಚಿವರು ಸಚಿವ ಸ್ಥಾನ‌ ಬದಲಾವಣೆಯನ್ನ ಹೈಕಮ್ಯಾಂಡ್ ನೋಡಿಕೊಳ್ಳುತ್ತಾರೆ ಎಂದಿದ್ದಾರೆ. ನಮಗೆ ದೆಹಲಿ ನಾಯಕರು ಗೊತ್ತಿಲ್ಲ. ರಾಜ್ಯ ಹೈಕಮ್ಯಾಂಡ್ ಅಷ್ಟೆ ಗೊತ್ತು. ಜಿಲ್ಲಾ ಉಸ್ತುವಾರಿ ಸಚಿವರು ಯಾರು ಗೊತ್ತಿಲ್ಲ. ನಾನು ವಿರೋಧ ಪಕ್ಷದವನಿರಬೇಕು ಎಂದರು.Post a Comment

Previous Post Next Post