ಶಿವಮೊಗ್ಗ: ಪೊಲೀಸ್ ಸಿಬ್ಬಂಧಿಗಳ ಮೇಲೆ ಹಲ್ಲೆ; ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ತಳ್ಳಿ ಜೀವಬೆದರಿಕೆ !

 ಜಮೀರ್ @ ಬಚ್ಚಾ, ಶಿವಮೊಗ್ಗ ಟೌನ್ ಈತನ ವಿರುದ್ಧ ದಾವಣಗೆರೆಯ ಮಾನ್ಯ 1ನೇ ಜೆಎಂಎಫ್.ಸಿ ನ್ಯಾಯಾಲಯವು ದಸ್ತಗಿರಿ ವಾರೆಂಟ್ ಅನ್ನು ಹೊರಡಿಸಿದ್ದು, ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂಧಿಗಳಾದ ಶ್ರೀ ಪರಶುರಾಮಪ್ಪ ಹೆಚ್.ಸಿ ಮತ್ತು ಸತೀಶ್ ಹೆಚ್.ಸಿ ರವರುಗಳು ವಾರೆಂಟ್ ಜಾರಿಗಾಗಿ ಆರೋಪಿ ಜಮೀರ್ @ ಬಚ್ಚಾ @ ಬಚ್ಚನ್ ನ ಮನೆಯ ಬಳಿ ಬಂದಿದ್ದಾಗ ಆರೋಪಿತನು ಪೊಲೀಸ್ ಸಿಬ್ಬಂಧಿಗಳ ಮೇಲೆ ಹಲ್ಲೆ ಮಾಡಿ ಅವರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ತಳ್ಳಿ ಜೀವಬೆದರಿಕೆ ಹಾಕಿರುತ್ತಾನೆಂದು ನೀಡಿದ ದೂರಿನ ಮೇರೆಗೆ  ತುಂಗಾನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 314/2016 ಕಲಂ 504, 506, 353, 308, 333 ಐಪಿಸಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. ಈತನ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ರೌಡಿ ಹಾಳೆಯನ್ನು ತೆರಯಲಾಗಿದ್ದು,  ವಿವಿಧ ಪೊಲೀಸ್‌ ಠಾಣೆಗಳಲ್ಲಿ ಒಟ್ಟು 22  ಪ್ರಕರಣಗಳು ದಾಖಲಾಗಿರುತ್ತವೆ. 

 ಸದರಿ ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಶ್ರೀ ಗಂಗಾಧರಪ್ಪ, ಪೊಲೀಸ್ ನಿರೀಕ್ಷಕರು, ಶಿವಮೊಗ್ಗ ಗ್ರಾಮಾಂತರ ವೃತ್ತ ರವರು  ಆರೋಪಿಯ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.  

  ಸರ್ಕಾರದ ಪರವಾಗಿ ಶ್ರೀ ಶಾಂತರಾಜ್, ಸರ್ಕಾರಿ ಅಭಿಯೋಜಕರವರು, ಪ್ರಕರಣದ ವಾದ ಮಂಡಿಸಿದ್ದು, 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿ ಜಮೀರ್ @ ಬಚ್ಚಾ @ ಬಚ್ಚನ್, 26 ವರ್ಷ, ಟಿಪ್ಪುನಗರ,  ಶಿವಮೊಗ್ಗ ಈತನ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ ಶ್ರೀ ಕೆ ಮಾನು ರವರು ದಿನಾಂಕಃ 10-11-2023 ರಂದು ಆರೋಪಿಗೆ 02 ವರ್ಷ ಸಾಧಾ ಕಾರಾಗೃಹ ಶಿಕ್ಷೆ ಮತ್ತು 20,000/-  ರೂ ದಂಡ, ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 2 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.

Post a Comment

Previous Post Next Post