ಮಲ್ಲೇಶ್ ಮರ್ಡರ್

 ಶಿವಮೊಗ್ಗದ ಚಿಕ್ಕಲ್ ರಸ್ತೆಯಲ್ಲಿರುವ ಶಿವಶಂಕರ್ ವೈನ್ ಶಾಪ್ ಬಳಿ ವ್ಯಕ್ತಿಯೋರ್ವನನ್ನ ಕೊಲೆ ಮಾಡಲಾಗಿದೆ. ಕೊಲೆಯಾದ ವ್ಯಕ್ತಿಯನ್ನ‌ ಮಲ್ಲೇಶ್ ಯಾನೆ ಮಲ್ಲ(35) ಎಂದು ಗುರುತಿಸಲಾಗಿದೆ.

ಚಿಕ್ಕಲ್ ನ ಫ್ಲೈ ಓವರ್ ಬಳಿಯ ಶಿವಶಂಕರ್ ವೈನ್ ಶಾಪ್ ಬಳಿಯ ಚಾನೆಲ್ ಏರಿಯಾದಲ್ಲಿ ಮಲ್ಲೇಶ್ ಬೈಕ್ ನಲ್ಲಿ ಬರುವಾಗ ಹಿಂಬದಿ ಬೈಕ್ ನಲ್ಲಿ ಬಂದ ಮೂವರು ಡಿಕ್ಕಿ ಹೊಡೆಸಿದ್ದಾರೆ. ಮಲ್ಲೇಶ್ ಕೆಳಗೆ ಬಿದ್ದಿದ್ದಾನೆ. ಮಲ್ಲೇಶ್ ಕೆಳಗೆ ಬಿದ್ದಿದ್ದನ್ನ‌ ನೋಡಿ ಸ್ಥಳೀಯರು ರಸ್ತೆ ಅಪಘಾತವೆಂದು ಘಟನಾ ಸ್ಥಳಕ್ಕೆ ಓಡಿದ್ದಾರೆ.ಆದರೆ ಗಲಾಟೆಗೆ ಮುಂದಾದ ಬೈಕ್ ಸವಾರರು ಮಲ್ಲರನ್ನ ಕೊಲೆ ಮಾಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮಲ್ಲೇಶ್ ಧರ್ಮರಾಯನ ಕೇರಿಯ ನಿವಾಸಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಆತನ ಕೊಲೆಯಾಕೆ ಆಗಿದೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಾಯಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಹುಡುಗಿಯ ವಿಚಾರದಲ್ಲಿ ಮಲ್ಲನನ್ನ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗುತ್ತಿದೆ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆನಡೆದಿದೆ.

Post a Comment

Previous Post Next Post