ಶಿವಮೊಗ್ಗ: ಕುಡಿದ ಅಮಲಿನಲ್ಲಿ ವಿದ್ಯಾರ್ಥಿಗಳ ಮೇಲೆ ಬಿಸಿ ಎಣ್ಣೆ ಎರೆಚಿದ ವ್ಯಕ್ತಿ.!

 ರಾಯಲ್ ಆರ್ಕೆಡ್ ಎದುರಿರುವ ದುರ್ಗಾಂಭ ಫಾಸ್ಟ್ ಫುಡ್ ಅಂಗಡಿಯವರ ಜೊತೆ ವ್ಯಕ್ತಿಯೊಬ್ಬ ಕುಡಿದ ನಶೆಯಲ್ಲಿ ಜಗಳವಾಡಿದ್ದು, ಜಗಳದ ಸಂದರ್ಭದಲ್ಲಿ ಬಿಸಿ ಎಣ್ಣೆಯನ್ನು ರಸ್ತೆ ಬದಿಯಲ್ಲಿ ಹೋಗುತ್ತಿದ್ದ 4 ಜನ ವಿದ್ಯಾರ್ಥಿಗಳ ಮೇಲೆ ಎರೆಚಿದ್ದಾನೆ. ಜೊತೆಗೆ ಅಂಗಡಿ ಮಾಲೀಕನ ಮೇಲು ಬಿಸಿ ಎಣ್ಣೆ ಎರೆಚಿದ್ದಾನೆ.

ಕುಡಿದ ಅಮಲಿನಲ್ಲಿ ಈ ಕೃತ್ಯ ಎಸಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕುಡಿದು ತನ್ನ ಪಾಡಿಗೆ ತಾನು ಹೋಗುವುದನ್ನು ಬಿಟ್ಟು  ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಈ ರೀತಿ ಮಾಡಿರುವುದು ಖಂಡನೀಯವಾಗಿದೆ.


ನಡು ರಸ್ತೆಯಲ್ಲಿ ಕುಡುಕನೋರ್ವ ಸಕ್ಕತ್ ರೋಧನೆ ಇಟ್ಟ ಘಟನೆ ವರದಿಯಾಗಿದೆ. ಕಾಲೇಜಿನ ವಿದ್ಯಾರ್ಥಿ ಗೆ ಕುದುಯುತ್ತಿದ್ದ ಕಬಾಬ್ ಎಣ್ಣೆ ಎರಚಿ ಕುಡಕನೋರ್ವ ರಾದ್ದಾಂತ ಮಾಡಿದ್ದಾನೆ. ವಿದ್ಯಾರ್ಥಿ ಮತ್ತು ಕುಡುಕನನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ.

ರಾಯಲ್ ಆರ್ಕೆಟ್ ಎದುರು ಕಬಾಬ್ ಮಾರಾಟ ಮಾಡುವ   ಗಾಡಿಯ ಮುಂದೆ ಕುಡುಕನೋರ್ವ ಬಂದಿದ್ದು ಮಾತನಾಡುತ್ತಲೇ ಕಬಾಬ್ ಅಂಗಡಿಯಲ್ಲಿ ಕಬಾಬ್ ಕರೆಯುವ ಎಣ್ಣೆಯನ್ನ ಜರಡಿ ಹಿಡಿದು ದಾರಿಯ ಮೇಲೆ ಹೋಗುವ ವಿದ್ಯಾರ್ಥಿಯ ಮೇಲೆ ಎಸೆದಿದ್ದಾನೆ.

ದಾರಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗೆ ಬಿಸಾಕಿದ ಬಿಸಿಯಾದ ಎಣ್ಣೆ ತಗುಲಿ ಬೊಬ್ಬೆ ಬಂದಿದೆ. ವಿದ್ಯಾರ್ಥಿಯನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಘಟನೆ ನಡೆದಮೇಲೆ ಈ ಕುಡುಕ ಹೈಡ್ರಾಮಾ ಹೆಚ್ಚಿಗೆ ನಡೆಸಿದ್ದಾನೆ. ಈತನಿಂದ ರಾಯಲ್ ಆರ್ಕೆಡ್ ರಸ್ತೆ ಫುಲ್ ಜಾಮ್ ಆಗಿದೆ.

112 ಸ್ಥಳಕ್ಕೆ ಬಂದರು 112 ವಾಹನದ ಅಡಿಗೆ ಹೋಗಿ ಪೊಲೀಸರನ್ನ ಹೈರಾಣು ಮಾಡಿದ್ದಾನೆ. ನಂತರ ಅಂಬ್ಯುಲೆನ್ಸ್ ಕರೆಯಿಸಿ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಆತನ ಹೆಸರು ಇನ್ನೂ ತಿಳಿದು ಬಂದಿಲ್ಲ. ರಾಯಲ್ ಆರ್ಕೆಡ್ ಬಳಿ  ಜ್ಯಾಮ್ ಆಗುತ್ತಿದ್ದಂತೆ ಟ್ರಾಫಿಕ್ ಜಾಮ್ ಆಗಿದೆ.

ದೊಡ್ಡಪೇಟೆ ಪೊಲೀಸರು ಬರುತ್ತಿದ್ದಂತೆ ಟ್ರಾಫಿಕ್ ಪೊಲೀಸರು ಕಾಲ್ಕಿತ್ತಿದ್ದಾರೆ. ಕುಡುಕ ಸುಮಾರು 2½ ಗಂಟೆ ಹೈಡ್ರಾಮಾ ನಡೆಸಿದ್ದಾನೆ. ಪೊಲೀಸರ ಮುಂದೆ ಕಾಯಿನ್ ನುಂಗುವುದಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದಾನೆ. ಕಷ್ಟಪಟ್ಟು ಮೆಗ್ಗಾನ್ ಗೆ ಕರೆತರಲಾಗಿದೆ.

Post a Comment

Previous Post Next Post