ಮಂಗಳೂರು ಕದ್ರಿ ಮಂಜುನಾಥ ದೇವಸ್ಥಾನ ಸ್ಫೋಟಕ್ಕೆ ಸಂಚು, ಶಂಕಿತರ ವಿರುದ್ಧ ಜಾರ್ಜ್ ಶೀಟ್

 ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನ ಸ್ಫೋಟಕ್ಕೆ ಸಂಚು ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಇಬ್ಬರು  ಶಂಕಿತ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳ ನಗರದ ಎನ್ ಐಎ ವಿಶೇಷ ಕೋರ್ಟ್ ಗೆ ಆರೋಪ ಪಟ್ಟಿ ಸಲ್ಲಿಸಿದೆ.

                                                          ಸಾಂದರ್ಭಿಕ ಚಿತ್ರ

Posted By : Rekha.M
Source : Online Desk
ಬೆಂಗಳೂರು: ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನ ಸ್ಫೋಟಕ್ಕೆ ಸಂಚು ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಇಬ್ಬರು  ಶಂಕಿತ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳ ನಗರದ ಎನ್ ಐಎ ವಿಶೇಷ ಕೋರ್ಟ್ ಗೆ ಆರೋಪ ಪಟ್ಟಿ ಸಲ್ಲಿಸಿದೆ.

ಶಿವಮೊಗ್ಗದ ಮೊಹಮ್ಮದ್ ಶಾರೀಕ್ ಮತ್ತು ಸೈಯದ್ ಶಾರೀಕ್ ಬಂಧಿತರು. ಉಗ್ರ ಸಂಘಟನೆ ಮುಖಂಡರ ಜೊತೆ ಆನ್ ಲೈನ್ ನಲ್ಲಿ ಸಂಪರ್ಕ ಹೊಂದಿದ್ದ ಇವರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು ಎಂದು  ಎನ್ ಐಎ ಅಧಿಕಾರಿಗಳು ತಿಳಿಸಿದ್ದಾರೆ.

2022ರ ನವೆಂಬರ್ 19 ರಂದು ಶಾರೀಕ್, ಕುಕ್ಕರ್ ನಲ್ಲಿ ಸುಧಾರಿತ ಸ್ಪೋಟಕವನ್ನು ಆಟೋದಲ್ಲಿ ಸಾಗಿಸುತ್ತಿದ್ದಾಗ ಅದು ಮಾರ್ಗ ಮಧ್ಯೆಯೇ ಆಕಸ್ಮಿಕವಾಗಿ ಸ್ಫೋಟಗೊಂಡಿತ್ತು.ಕಡಿಮೆ ತೀವ್ರತೆಯ ಬಾಂಬ್ ಆಗಿದ್ದರಿಂದ ಶಾರೀಕ್ ಮತ್ತು  ಆಟೋ ಚಾಲಕ ಗಾಯಗೊಂಡಿದ್ದರು.

ಸ್ಥಳೀಯ ಪೊಲೀಸರು ಶಾರೀಕ್ ನನ್ನು ಬಂಧಿಸಿದ್ದರು.  ಎನ್ ಐಎ ಅಧಿಕಾರಗಳು ಪ್ರಕರಣದ ತನಿಖೆ ವಹಿಸಿಕೊಂಡು ಜುಲೈನಲ್ಲಿ ಇಬ್ಬರನ್ನೂ ಬಂಧಿಸಿದ್ದರು.  ಸ್ಫೋಟಕ್ಕೆ ಬೇಕಾದ ಬಿಡಿ ಭಾಗಗಳನ್ನು ಸೈಯದ್ ಶಾರೀಕ್ ತಂದುಕೊಟ್ಟಿದ್ದ ಎಂದು ಆರೋಪ ಪಟ್ಟಿಯಲ್ಲಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. 


Post a Comment

Previous Post Next Post