ಶಿವಮೊಗ್ಗ: ಬಲಿಗೆ ಕಾಯುತ್ತಿರುವ ಫುಟ್ಲೆಟ್ ಲ್ಯಾಂಪ್!?

ಬೆಂಗಳೂರಿನಲ್ಲಿ ತಾಯಿ ಮತ್ತು ಮಗು ವಿದ್ಯುತ್ ಅವಘಡದಲ್ಲಿ ಎರಡು ಜೀವ ಕಳೆದುಕೊಂಡಿದ್ದಾರೆ. ಆ ಘಟನೆ ಇನ್ನೂ ರಾಜ್ಯದ ಜನರ ನೆನಪಿನ ಪಟಾಲದಲ್ಲಿ ಅಚ್ಚು ಉಳಿದಿರುವ ಮುನ್ನ ಶಿವಮೊಗ್ಗದಲ್ಲಿಯೂ ಲೈಟ್ ಕಂಬವೊಂದು ಬಲಿ ಪಡೆಯಲು ಬಾಯಿತೆರದು ಕೊಂಡಿದೆ.

ಕೋಟೆ ಆಂಜನೇಯ ದೇವಸ್ಥಾನದ ಸಮೀಪವಿರುವ ಅರಮನೆಯ ಎದರು ಇರುವ ಪುಟ್ಲೆಟ್ ಲ್ಯಾಂಪ್ ದಾರಿ ದೀಪಗಳು ಹಾಳಾಗಿ ವೈರುಗಳು ಹೊರಗೆ ಬಂದಿದೆ.  ವಿದ್ಯಾರ್ಥಿಗಳು ಓಡಾಡುವ ಜಾಗ ಯಾರಾದರೂ ವಿದ್ಯಾರ್ಥಿಗಳು/ನಾಗರಿಕರು/ಜಾನುವಾರು ಇದನ್ನು ತುಳಿದರೆ ಮತ್ತೊಂದು ಜೀವ ಬಲಿಯಾಗೋದು ಗ್ಯಾರೆಂಟಿ.

ಇದಕ್ಕೆ ಯಾರು ಹೊಣೆ. ಮೊನ್ನೆ ಗಾರ್ಡನ್ ಏರಿಯಾದಲ್ಲಿ ಮೆಸ್ಕಾಂ ಜಂಕ್ಷನ್ ಬಾಕ್ಸ್ ಬಳಿ ನೀರಿನ ಸೋರಿಕೆ ಕಂಡು ಬಂದಿತ್ತು. ಈಗ ಮೆಸ್ಕಾಂ ಅಥವಾ ಪಾಲಿಕೆಯವರ ಸರದಿಯಾಗಿದೆ.

ಮೆಸ್ಕಾಂ ರವರಿಗೆ ಹೇಳಿದರೆ ನಮಗೆ ಬರುವುದಿಲ್ಲ ಎನ್ನುತ್ತಾರೆ ಹಾಗೂ ಸರಿಯಾಗಿ ಸ್ಪಂದನ ನೀಡಿರುವುದಿಲ್ಲ ಎಂಬ ಸ್ಥಳೀಯರ ಆರೋಪವಿದೆ.  ಹಾಗಾಗಿ ಸಂಬಂಧಪಟ್ಟವರು ಈ ಕೂಡಲೇ ಬಗೆಹರಿಸದಲ್ಲಿ ಬೆಂಗಳೂರಿನಲ್ಲಿ ಆದಂತ ಘಟನೆ ಈ ಭಾಗದಲ್ಲಿ ಆದರೆ ಆಶ್ಚರ್ಯವಿಲ್ಲ. ಇದೇ ತರ ಇನ್ನೂ ಮೂರು ನಾಲ್ಕು ಕಂಬಗಳ ವೈರು ಇದೇ ಭಾಗದಲ್ಲಿ ಹೊರಗೆ ಬಂದಿದೆ.

ಮತ್ತೊಂದು ಬಲಿ ಪಡೆಯುವ ಮುನ್ನ ಈ ಘಟನೆಗೆ ಬ್ರೇಕ್ ಬೀಳುತ್ತದೋ ಅಥವಾ ಬಲಿ ಪಡೆದ ನಂತರವೇ ಎಚ್ಚೆತ್ತುಕೊಳ್ಳುವ ತೀರ್ಮಾನಕ್ಕೆ ಅಧಿಕಾರಿಗಳು ಬಂದಿದ್ದಾರೋ ಕಾದುನೋಡಬೇಕು.





Post a Comment

Previous Post Next Post