ಬಲತ್ಕಾರಕ್ಕೆ ಯತ್ನಿಸಿದ ಯುವಕನ ವಿರುದ್ಧ ಎಫ್ಐಆರ್

 ಯುವತಿಯನ್ನ ಅಡ್ಡ ಹಾಕಿ ಹಣಕೊಡ್ತೀನಿ ಆಸೆ ಪೂರೈಸುವಂತೆ ಕರೆದು ಅಸಭ್ಯವಾಗಿ ನಡೆದುಕೊಂಡ ಯುವಕನ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಹೋದರನಿಗೆ ಬುದ್ದಿ ಹೇಳು ಎಂದು ಹೇಳಿದ ಗ್ರಾಮಸ್ಥರಿಗೆ ಬೈದು ಅನುಚಿತವಾಗಿ ನಡೆದುಕೊಂಡ ಅಣ್ಣನ ವಿರುದ್ಧವೂ ದೂರು ದಾಖಲಾಗಿದೆ.


ಕೂಲಿ ಕೆಲಸ ಮಾಡಿಕೊಂಡಿರುವ 19 ವರ್ಷದ ಯುವತಿಗೆ ಭದ್ರಾವತೊಯ  ಚಂದನಕೆರೆಯ ಯುವನೋರ್ವ ಹೋದಕಡೆಯಲ್ಲೆಲ್ಲ ಬೆನ್ನುಹತ್ತಿ ಹಣಕೊಡುತ್ತೇನೆ ಆಸೆ ಪೂರೈಸು ಎಂದು ದುಂಬಾಲು ಬಿದ್ದಿದ್ದನು. ಈತನನ್ನ ಗಮನಿಸಿದೆ ಯುವತಿ ಕೆಲಸಕ್ಕೆ ಹೋಗುತ್ತಿದ್ದಳು.

ನ.3 ರಂದು ಊಟ ಮುಗಿಸಿಕೊಂಡು ವಾಪಾದ್ ಕೆಲಸಕ್ಕೆ ಹೋಗುವಾಗ ಯುವಕ ರಸ್ತೆ ಅಡ್ಡಗಟ್ಟಿ 2000 ರೂ. ಕೊಡುತ್ತೇನೆ ಬಾ ಆಸೆ ಪೂರೈಸು ಎಂದು ವೇಲುನಿಂದ ಕೈಕಾಲು ಕಟ್ಟಿದ್ದಾನೆ ಹಾಗೂ ಆತನ ಬಳಿಯಿದ್ದ ಟವಲನ್ನ ಬಾಯಿಗೆ ತುರಕಿ ಆಕೆಯನ್ನ ಎತ್ತಿಕೊಂಡು ತೋಟದಲ್ಲಿ ಹೋಗಲು ಯತ್ನಿಸಿದ್ದಾನೆ.

ಆತನಿಂದ ತಪ್ಪಿಸಿಕೊಂಡ ಯುವತಿ ಪಾರಾಗಿದ್ದಾಳೆ. ಇವತ್ತು ಬಜಾವ್ ಆಗಿದ್ದೀಯ ಇನ್ನೊಮ್ಮೆ ಸಿಕ್ಕರೆ ಬಲತ್ಕರಿಸುವೆ. ಈ ವಿಷಯವನ್ನ ಬೇರೆಯವರಿಗೆ ಹೇಳಿದರೆ ನಿನ್ನ ಜೀವ ಸಹಿತ ಬಿಡೊಲ್ಲ ಎಂದು ಬೆದರಿಕೆಹಾಕಿದ್ದಾನೆ.

ಇದರಿಂದ ಭಯವಾಗಿ  ಈ ವಿಷಯವನ್ನು ಯಾರಿಗೂ ಹೇಳದ ಯುವತಿ. ನ.05 ರಂದು  ಲ ರಾತ್ರಿ ವಿಷಯವನ್ನು ಮನೆಯವರಿಗೆ ತಿಳಿಸಿದ್ದಾಳೆ. ಯುವತಿಯ ಕೇರಿಯವರಿಗೆಲ್ಲಾ ವಿಷಯ ತಿಳಿದು ರಾತ್ರಿ ಸುಮಾರು 07-30 ರ ಸಮಯದಲ್ಲಿ ಎರಿಯಾದ ನಿವಾಸಿಗಳ ಜೊತೆ ಯುವಕನ ಮನೆಗೆ ತೆರಳಿ ಅಣ್ಣನಿಗೆ ವಿಷಯ ತಿಳಿಸಿ ಬುದ್ದಿ ಹೇಳಲು ಸೂಚಿಸಿದ್ದಾರೆ.‌

ನಿವಾಸಿಗಳ ಮಾತನ್ನ ನಿರ್ಲಕ್ಷಿಸಿದ ಯುವಕನ‌ ಅಣ್ಣ ನನ್ನ‌ತಮ್ಮ ಯಾಕೆ ಹಾಗೆ ಮಾಡುತ್ತಾನೆ. ನೀವೇ ಸರಿಯಿಲ್ಲ ಹಾಗಾಗಿ ಅದೇನು ಮಾಡಿಕೊಳ್ತೀರೋ ಮಾಡಿಕೊಳ್ಳಿ ಎಂದು ಆರೋಪಿಸಿದ್ದಾನೆ. ಈ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


Post a Comment

Previous Post Next Post