ನಾಯಿ ಕಚ್ಚಿದ ಪ್ರಕರಣ: ನಟ ದರ್ಶನ್ ವಿರುದ್ಧ ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ

 ಮಹಿಳೆಯೊಬ್ಬರ ಮೇಲೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಾಸಿಸುತ್ತಿರುವ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯ ಮುಂದೆ ಅವರ ಮನೆಯ ನಾಯಿಗಳು ದಾಳಿ ಮಾಡಿ ತಮಗೆ ತೀವ್ರ ಗಾಯಗೊಳಿಸಿವೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದ ಮಹಿಳೆ ಇಂದು ಸೋಮವಾರ ಬೆಳ್ಳಂಬೆಳಗ್ಗೆ ಮತ್ತೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಬಂದಿದ್ದರು.

            ತಮ್ಮ ಮನೆಯ ನಾಯಿಗಳ ಜೊತೆ ನಟ ದರ್ಶನ್ ಮತ್ತು ದೂರುದಾರ ಮಹಿಳೆ ಅಮಿತಾ                                                                       ಜಿಂದಾಲ್(ಸಂಗ್ರಹ ಚಿತ್ರ)
Posted By : Rekha.M
Source : Online Desk

ಬೆಂಗಳೂರು: ಮಹಿಳೆಯೊಬ್ಬರ ಮೇಲೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಾಸಿಸುತ್ತಿರುವ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯ ಮುಂದೆ ಅವರ ಮನೆಯ ನಾಯಿಗಳು ದಾಳಿ ಮಾಡಿ ತಮಗೆ ತೀವ್ರ ಗಾಯಗೊಳಿಸಿವೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದ ಮಹಿಳೆ ಇಂದು ಸೋಮವಾರ ಬೆಳ್ಳಂಬೆಳಗ್ಗೆ ಮತ್ತೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಬಂದಿದ್ದರು.

ಮಹಿಳೆ ಅಮಿತ ಜಿಂದಾಲ್ ದೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ, ಅವರು ಒತ್ತಡ ಹೇರುತ್ತಿದ್ದಾರೆ. ನಾಯಿ ಮಾಲೀಕರಾದ ಅವರು ಮತ್ತು ನಾಯಿಯನ್ನು ಛೂಬಿಟ್ಟ ಅವರ ಮನೆಯ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೂಲಂಕುಷ ತನಿಖೆ ನಡೆಸಬೇಕು ಎಂದು ಮಹಿಳೆ ಅಮಿತ ಜಿಂದಾಲ್ ದೂರು ದಾಖಲಿಸಿದ್ದಾರೆ. 

ಮಹಿಳೆ ನೀಡಿದ ದೂರಿನಲ್ಲಿ ಏನಿತ್ತು?: ಅಕ್ಟೋಬರ್ 28ರಂದು ದೂರುದಾರ ಮಹಿಳೆಗೆ ಸ್ಪರ್ಶ ಆಸ್ಪತ್ರೆಯಲ್ಲಿ ವಿಶ್ವಪಾರ್ಶ್ವವಾಯು ದಿನದ ಪ್ರಯುಕ್ತ ಜಾಗೃತಿ ಕಾರ್ಯಕ್ರಮವಿದ್ದು, ಆ ಕಾರ್ಯಕ್ರಮಕ್ಕೆ ಭಾಗವಹಿಸಲು ಅವರು ಆಸ್ಪತ್ರೆಯ ಬಳಿ ಹೋಗಿದ್ದರು. ಈ ವೇಳೆ ತಮ್ಮ ಕಾರನ್ನು ದರ್ಶನ್‌ರವರ ಮನೆಯ ಪಕ್ಕದ ಖಾಲಿ ಜಾಗದ ಮುಂದಿನ ರಸ್ತೆಯಲಿ ನಿಲ್ಲಿಸಿದ್ದರು. ಕಾರ್ಯಕ್ರಮ ಮುಗಿದ ನಂತರ ವಾಪಸ್ಸು ಹೋಗಲು ಕಾರಿನ ಬಳಿ ಬಂದಾಗ ಅವರು ಕಾರು ನಿಲ್ಲಿಸಿದ ರಸ್ತೆಯ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಮೂರು ನಾಯಿಗಳಿದ್ದು ಅದರಲ್ಲಿ ಎರಡು ನಾಯಿಗಳನ್ನು ಕಟ್ಟಿ ಹಾಕಿದ್ದು ಒಂದು ನಾಯಿಯನ್ನು ಹಾಗೆಯೇ ಬಿಟ್ಟಿದ್ದರಂತೆ.

ಮಹಿಳೆ ಮೇಲೆ ದಾಳಿ ಮಾಡಿದ ನಾಯಿಗಳು: ಈ ವೇಳೆ ಪಾರ್ಕಿಂಗ್ ವಿಚಾರವಾಗಿ ಅಪರಿಚಿತ ವ್ಯಕ್ತಿಗಳ ವಾಗ್ವಾದದ ನಡುವೆ ನಾಯಿಯೊಂದು ಮಹಿಳೆ ಮೇಲೆ ಎಗರಿದ್ದು, ಇದರಿಂದಾಗಿ ಮಹಿಳೆ ನೆಲದ ಮೇಲೆ ಬಿದ್ದಾಗ, ಕಟ್ಟಿ ಹಾಕಿದ್ದ ಮತ್ತೊಂದು ನಾಯಿಯೂ ಸಹ ಎಗರಿ ಬಂತಂತೆ.ಅಪರಿಚಿತ ವ್ಯಕ್ತಿಗಳು ನಾಯಿಗಳು ಕಚ್ಚುತ್ತವೆ ಎಂದು ತಿಳಿದಿದ್ದರೂ ಸಹ ನಾಯಿಗಳನ್ನು ಹಿಡಿದುಕೊಳ್ಳದೇ ಬೇಜವಾಬ್ದಾರಿಯಿಂದ ಅವುಗಳನ್ನು ಕಚ್ಚಲು ಬಿಟ್ಟಿದ್ದಾರೆ ಎಂದು ಮಹಿಳೆ ಅಮಿತಾ ಜಿಂದಾಲ್ ಆರೋಪಿಸಿದ್ದಾರೆ. ನಾಯಿಗಳು ಎಗರಿ ಮಹಿಳೆಯ ಹೊಟ್ಟೆಯ ಭಾಗಕ್ಕೆ ಕಚ್ಚಿ, ಗಾಯಪಡಿಸಿ, ಬಟ್ಟೆಯನ್ನು ಹರಿದು ಹಾಕಿವೆಯಂತೆ.

ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು: ನನಗೆ ಬೇಜವಾಬ್ದಾರಿಯಿಂದ ನಾಯಿಗಳನ್ನು ಕಚ್ಚಲು ಬಿಟ್ಟು ಗಾಯ ಪಡಿಸಿದ ಅಪರಿಚಿತ ವ್ಯಕ್ತಿಗಳು ಮತ್ತು ಮನೆಯ ಮಾಲೀಕರು ಹಾಗೂ ನಾಯಿಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮಹಿಳೆ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.



Post a Comment

Previous Post Next Post