ಶಿವಮೊಗ್ಗದಲ್ಲಿ 19 ವರ್ಷದ ಯುವತಿಗೆ ಮಂಗನ ಜ್ವರ!

 19 ವರ್ಷದ ಯುವತಿಗೆ ಮಂಗನ ಜ್ವರ ಎಂದು ಕರೆಯಲ್ಪಡುವ ಕ್ಯಾಸನೂರು ಅರಣ್ಯ ಕಾಯಿಲೆ(ಕೆಎಫ್‌ಡಿ) ಪಾಸಿಟಿವ್ ಬಂದಿದ್ದು ಆಕೆಯ ಸ್ಥಿತಿ ಗಂಭೀರವಾಗಿದೆ.

                                                                    ಸಂಗ್ರಹ ಚಿತ್ರ

Posted By : Rekha.M
Source : Online Desk

ಶಿವಮೊಗ್ಗ: 19 ವರ್ಷದ ಯುವತಿಗೆ ಮಂಗನ ಜ್ವರ ಎಂದು ಕರೆಯಲ್ಪಡುವ ಕ್ಯಾಸನೂರು ಅರಣ್ಯ ಕಾಯಿಲೆ(ಕೆಎಫ್‌ಡಿ) ಪಾಸಿಟಿವ್ ಬಂದಿದ್ದು ಆಕೆಯ ಸ್ಥಿತಿ ಗಂಭೀರವಾಗಿದೆ. 

ಹೊಸನಗರ ತಾಲೂಕಿನ ಸಂಪೆಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಗ್ರಾಮವೊಂದರಲ್ಲಿ ಕೆಎಫ್‌ಡಿ ಎರಡನೇ ಪ್ರಕರಣ ವರದಿಯಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಅವರ ಪ್ರಕಾರ, 19 ವರ್ಷದ ಯುವತಿಗೆ ಕೆಎಫ್ ಡಿ ಪಾಟಿಸಿವ್ ಬಂದಿದ್ದು ಪ್ರಸ್ತುತ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಡಾ. ಸುರಗಿಹಳ್ಳಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದು, ಯುವತಿಯನ್ನು ಜನವರಿ 1ರಂದು ಮೆಕ್‌ಗನ್ ಆಸ್ಪತ್ರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ದಾಖಲಿಸಲಾಗಿತ್ತು. ಆಕೆಗೆ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇತ್ತು. ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರಂಭದಲ್ಲಿ ಯುವತಿಗೆ ಕೆಡಿಎಫ್ ನೆಗೆಟಿವ್ ಬಂದಿತ್ತು. ಆದರೆ ಮೂರ್ನಾಲ್ಕು ದಿನಗಳ ನಂತರ ಆಕೆಗೆ ಕೆಎಫ್‌ಡಿ ಪಾಸಿಟಿವ್ ಬಂದಿದೆ ಎಂದು ಡಿಎಚ್‌ಒ ಹೇಳಿದರು.

ಬಾಲಕಿಯ ಸ್ಥಿತಿಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಆಕೆಯನ್ನು ಕೆಎಂಸಿ ಮಣಿಪಾಲಕ್ಕೆ ವರ್ಗಾಯಿಸಲಾಗಿದ್ದು, ವೈದ್ಯಕೀಯ ವೆಚ್ಚವನ್ನು ಆರೋಗ್ಯ ಇಲಾಖೆಯು ಭರಿಸುತ್ತಿದೆ. ಭಾನುವಾರ ಬಾಲಕಿಗೆ ಪ್ರಜ್ಞೆ ಬಂದಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಡಾ. ಸುರಗಿಹಳ್ಳಿ ತಿಳಿಸಿದ್ದಾರೆ.

ಯುವತಿಯ ಸಹೋದರಿ ಡೆಂಗ್ಯೂಗೆ ಪಾಸಿಟಿವ್ ಬಂದಿದ್ದು ಪ್ರಸ್ತುತ ತೀರ್ಥಹಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಎಚ್‌ಒ ತಿಳಿಸಿದರು. ಈ ವರ್ಷ, ಇಲಾಖೆಯು ಕೆಡಿಎಫ್‌ಗಾಗಿ ಸಾವಿರಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಿದೆ. ಕೇವಲ ಇಬ್ಬರು ವ್ಯಕ್ತಿಗಳಲ್ಲಿ ವೈರಸ್‌ ಪಾಸಿಟಿವ್ ಬಂದಿದೆ.
Post a Comment

Previous Post Next Post