ಪಶು ಇಲಾಖೆ ವಾಹನದ ಮೇಲೆ ವಿರೂಪಗೊಂಡ ಸ್ಥಿತಿಯಲ್ಲಿ ಪ್ರಧಾನಿ ಮೋದಿ ಭಾವಚಿತ್ರ: ಸಿಎಂ ಫೋಟೋಗೆ ಮಸಿ ಬಳಿದು ಬಿಜೆಪಿ ಕಾರ್ಯಕರ್ತರ ಆಕ್ರೋಶ

 ಪಶು ಇಲಾಖೆಗೆ ಸೇರಿದ ಚಿಕಿತ್ಸಾ ವಾಹನದ ಮೇಲಿದ್ದ ಪ್ರಧಾನಿ ಮೋದಿಯವರ ಭಾವಚಿತ್ರ ವಿರೂಪಗೊಂಡಿದ್ದನ್ನು ಕಂಡ ಬಿಜೆಪಿ ಕಾರ್ಯಕರ್ತರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೋಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆಯಿತು.

                                                                         ಸಂಗ್ರಹ ಚಿತ್ರ

Posted By : Rekha.M
Source : Online Desk

ರಾಮನಗರ: ಪಶು ಇಲಾಖೆಗೆ ಸೇರಿದ ಚಿಕಿತ್ಸಾ ವಾಹನದ ಮೇಲಿದ್ದ ಪ್ರಧಾನಿ ಮೋದಿಯವರ ಭಾವಚಿತ್ರ ವಿರೂಪಗೊಂಡಿದ್ದನ್ನು ಕಂಡ ಬಿಜೆಪಿ ಕಾರ್ಯಕರ್ತರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೋಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆಯಿತು.

ಹುಬ್ಭಳ್ಳಿಯಲ್ಲಿ ಹಿಂದೂ ಕಾರ್ಯಕರ್ತನ ಬಂಧನ ವಿರೋಧಿಸಿ ಶ್ರೀ ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಇದೇ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಪಶು ಇಲಾಖೆಯ ಚಿಕಿತ್ಸಾ ವಾಹನದಲ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಶುಪಾಲನೆ ಖಾತೆ ಸಚಿವ ವೆಂಟೇಶ್ ಅವರ ಹೊಚ್ಚ ಹೊಸ ಚಿತ್ರಗಳು ಕಂಡು ಬಂದಿದ್ದವು. ಜೊತೆಗೆ ಮಾಸಿ ಹೋಗಿ, ವಿರೂಪಗೊಂಡಿದ್ದ ಪ್ರಧಾನಿ ಮೋದಿಯವರ ಚಿತ್ರವೂ ಕಂಡು ಬಂದಿತ್ತು.

ಇದನ್ನು ಕಂಡ ಕಾರ್ಯಕರ್ತರು ತಮ್ಮ ಪಕ್ಷದ ನಾಯಕ ಹಾಗೂ ಪ್ರಧಾನಿ ಮೋದಿಯವರನ್ನು ಅವಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಯನ್ನು ಅರ್ಧಕ್ಕೆ ನಿಲ್ಲಿಸಿ, ಪಶು ಇಲಾಖೆಯ ವಾಹನವನ್ನು ತಡೆದು ನಿಲ್ಲಿಸಿದರು.

ವಿರೂಪಗೊಂಡಿದ್ದ ಮೋದಿಯವರ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿಯೇ ಬದಲಾಯಿಸಿಲ್ಲ. ಇದಕ್ಕೆ ರಾಜ್ಯ ಸರ್ಕಾರ ಕುಮ್ಮಕ್ಕು ಇದೆ ಎಂದು ಧಿಕ್ಕಾರ ಕೂಗಿದರು.

ಈ ವೇಳೆ ಕೆಲ ಕಾರ್ಯಕರ್ತರು ಸಿಎಂ ಸಿದ್ದರಾಮಚ್ಚ ಹಾಗೂ ಸಚಿವ ವೆಂಕಟೇಶ್ ಅವರ ಭಾವಚಿತ್ರಕ್ಕೆ ಮಸಿ ಬಳಿದು, ವಿರೂಪಗೊಳಿಸಿದರು.

Post a Comment

Previous Post Next Post