'ತ್ರಿವಿಧ ದಾಸೋಹಿ', 'ನಡೆದಾಡಿದ ದೇವರು' ಡಾ.ಶಿವಕುಮಾರ ಶ್ರೀಗಳ 4ನೇ ವರ್ಷದ ಪುಣ್ಯಸ್ಮರಣೆ: ಸಿದ್ಧಗಂಗಾ ಮಠದಲ್ಲಿ ಅದ್ದೂರಿ ಕಾರ್ಯಕ್ರಮ, ಸಿಎಂ ಸೇರಿ ಗಣ್ಯರು ಭಾಗಿ

 'ನಡೆದಾಡುವ ದೇವರು' ಎಂದು ಹೆಸರು ಗಳಿಸಿದ್ದ ತ್ರಿವಿಧ ದಾಸೋಹಿ, ಪದ್ಮಭೂಷಣ, ಕರ್ನಾಟಕ ರತ್ನ ಪರಮಪೂಜ ಡಾ.ಶಿವಕುಮಾರ ಸ್ವಾಮೀಜಿಗಳ 4 ನೇ ವರ್ಷದ ಪುಣ್ಯ ಸ್ಮರಣೋತ್ಸವ ಇಂದು ಶನಿವಾರ ತುಮಕೂರಿನ ಕ್ಯಾತ್ಸಂದ್ರ ಬಳಿಯಿರುವ ಸಿದ್ಧಗಂಗಾ ಮಠದಲ್ಲಿ ನೆರವೇರುತ್ತಿದೆ.

           ಶ್ರೀ ಶಿವಕುಮಾರ ಸ್ವಾಮೀಜಿಗಳು

By : Rekha.M
Online Desk

ತುಮಕೂರು: 'ನಡೆದಾಡುವ ದೇವರು' ಎಂದು ಹೆಸರು ಗಳಿಸಿದ್ದ ತ್ರಿವಿಧ ದಾಸೋಹಿ, ಪದ್ಮಭೂಷಣ, ಕರ್ನಾಟಕ ರತ್ನ ಪರಮಪೂಜ ಡಾ.ಶಿವಕುಮಾರ ಸ್ವಾಮೀಜಿಗಳ 4 ನೇ ವರ್ಷದ ಪುಣ್ಯ ಸ್ಮರಣೋತ್ಸವ ಇಂದು ಶನಿವಾರ ತುಮಕೂರಿನ ಕ್ಯಾತ್ಸಂದ್ರ ಬಳಿಯಿರುವ ಸಿದ್ಧಗಂಗಾ ಮಠದಲ್ಲಿ ನೆರವೇರುತ್ತಿದೆ.

ಬೆಳಗ್ಗೆ 11 ಗಂಟೆಗೆ ಆರಂಭವಾಗುವ  ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಭಾಗಿಯಾಗಲಿದ್ದಾರೆ. ಶ್ರೀ ಸಿದ್ಧಲಿಂಗ ಸ್ವಾಮೀಜಿ ದಿವ್ಯ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಬೇಲಿಮಠದ  ಶ್ರೀಗಳು ಸೇರಿದಂತೆ ಹಲವು ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಳೆದ ಎರಡು ಮೂರು ವರ್ಷ ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಶ್ರೀಗಳ ಪುಣ್ಯಸ್ಮರಣೆಯನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ  ದೊಡ್ಡಮಟ್ಟದಲ್ಲಿ ಆಚರಿಸಲಾಗುತ್ತಿದೆ.

ಸಚಿವರಾದ ಜೆ.ಸಿ.ಮಾಧುಸ್ವಾಮಿ , ಜ್ಞಾನೇಂದ್ರ , ಸೋಮಶೇಖರ್ ,  ವಿ.ಸೋಮಣ್ಣ ಅರಗ ಎಸ್.ಡಿ. ಸಿ.ಸಿ.ಪಾಟೀಲ್‌ , ಬಿ.ಸಿ. ನಾಗೇಶ್ ಭಾಗವಹಿಸಲಿದ್ದಾರೆ . ಭಾರತ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸನ್ಮಾನ್ಯ ಭಗವಂತ ಖೂಬವರು ಮತ್ತು ಸನ್ಮಾನ್ಯ ತೇಜಸ್ವಿ ಸೂರ್ಯ , ಸಂಸದ ಜಿ.ಎಸ್ ಬಸವರಾಜು ಉಪಸ್ಥಿತರಿರುತ್ತಾರೆ . ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ , ಹೆಚ್.ಡಿ.ರೇವಣ್ಣ , ಜೆಡಿಎಸ್ ನಾಯಕ ಆಗಮಿಸಲಿದ್ದಾರೆ . ಶಾಸಕರಾದ ಜ್ಯೋತಿಗಣೇಶ್ , ಬಿ.ಸಿ.ಗೌರಿಶಂಕರ್ , ವಿಧಾನ ಪುಷತ್‌ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ , ಗೌಡ ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ.

ಪೂಜ್ಯರ ಗದ್ದಿಗೆಗೆ ವಿಶೇಷ ಹೂವಿನ ಅಲಂಕಾರ ಬೆಳಿಗ್ಗೆ 5.30 ರಿಂದ ಮಹಾರುದ್ರಾಭಿಷೇಕ ಮತ್ತು ರಾಜೋಪಚಾರ , ಬಿಲ್ವಾರ್ಚನೆ ಹಾಗೂ ಇತರೆ ವಿಶೇಷ ಪೂಜಾ ಕೈಂಕರ್ಯಗಳು ಜರುಗುತ್ತಿವೆ. ಬೆಳಿರಥದಲ್ಲಿ ಪೂಜ್ಯರ ಪತಳಿಯನ್ನಿಟ್ಟು ಮೆರವಣಿಗೆಯನ್ನು ಮಠದ ಆವರಣದಲ್ಲಿ ಭಕ್ತರ ಹರಗುರುಚರಮೂರ್ತಿಗಳ ಮತ್ತು ಸಮ್ಮುಖದಲ್ಲಿ ನಡೆಸುತ್ತಿದ್ದಾರೆ. ಶ್ರೀಮಠಕ್ಕೆ ಆಗಮಿಸುವ ಮುಖ್ಯಮಂತ್ರಿಗಳು ಮತ್ತು ಗಣ್ಯರಿಗೆ ಗದ್ದುಗೆ ದರ್ಶನದ ನಂತರ ಕುಂಭ – ಕಳಸ ಮತ್ತು ಮಂಗಳವಾದ್ಯಗಳೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಗುವುದು . ನಿರಂಜನ ಹಣವ ನರೂಪಿ ಡಾ. ಶಿವಕುಮಾರ ಮಹಾ ಶಿವಯೋಗಿ ಗಳವರ ತ್ರಿವಿಧ ದಾಸೋಹದಿಂದ  ಪ್ರಭಾವಿತರಾಗಿರುವ ನಾಡಿನೆಲ್ಲಡೆ ಭಕ್ತರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

5 ಲಕ್ಷ ಭಕ್ತರ ಆಗಮನ ನಿರೀಕ್ಷೆ, ಸಕಲ ಸಿದ್ಧತೆ: ಈ ಪುಣ್ಯ ಸಮಾರಂಭಕ್ಕೆ ಸುಮಾರು ಐದು ಲಕ್ಷ ಭಕ್ತ ವೃಂದ, ಅಭಿಮಾನಿಗಳು, ಹಳೆ ವಿದ್ಯಾಥಿಗಳು ಮತ್ತು ಹಿತೈಷಿಗಳು ಆಗಮಿಸುವ ನಿರೀಕ್ಷೆಯಿದ್ದು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೈಗಾರಿಕಾ ವಸ್ತುಪ್ರದರ್ಶನದ ಆವರಣ , ಸಾದರ ಕೊಪ್ಪಲು, ಕೆಂಪಹೊನ್ನಯ್ಯ ಅತಿಥಿಗೃಹ, ಹೊಸ ಪ್ರಸಾದ ನಿಲಯ, ಹಳೆ ಪ್ರಸಾದ ನಿಲಯ ಹೀಗೆ ಐದು ಕಡೆ ಪ್ರಸಾದದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಮಾರಂಭಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸಿದ್ಧಗಂಗಾ ಆಸ್ಪತ್ರೆ ತುರ್ತು ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಅನನುಕೂಲಗಳು ಆಗದಂತೆ ಎಚ್ಚರ ವಹಿಸಲಾಗಿದೆ. ಗೋಸಲ ಸಿದ್ಧೇಶ್ವರ ವೇದಿಕೆಯಲ್ಲಿ ಬೃಹತ್ ಸಭಾಮಂಟಪವನ್ನು ನಿರ್ಮಿಸಲಾಗುತ್ತಿದೆ.

ಸರ್ಕಾರವು ಕಳೆದ ವರ್ಷ ಶ್ರೀಗಳ ಪುಣ್ಯಸ್ಮರಣೆ  ದಿನವನ್ನು ದಾಸೋಹ ದಿನ ಎಂದು ಘೋಷಿಸಿತ್ತು. 


Post a Comment

Previous Post Next Post